ಬೆಂಗಳೂರು[ಡಿ.20]: ಭಾರತದ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ಮಗ ಸಮಿತ್‌ ದ್ರಾವಿಡ್‌, ಅಂಡರ್‌ 14 ಕೆಎಸ್‌ಸಿಎ ಅಂತರವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಪರ ದ್ವಿಶತಕ ಸಿಡಿಸಿದ್ದಾರೆ. 

ಅಂಡರ್ 14 ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರನ ಮಿಂಚಿನ ಪ್ರದರ್ಶನ

ಧಾರವಾಡ ವಲಯ ವಿರುದ್ಧದ ಪಂದ್ಯದಲ್ಲಿ ಸಮಿತ್‌, ಮೊದಲ ಇನ್ನಿಂಗ್ಸಲ್ಲಿ 250 ಎಸೆತಗಳಲ್ಲಿ 201 ಮತ್ತು ದ್ವಿತೀಯ ಇನ್ನಿಂಗ್ಸಲ್ಲಿ ಅಜೇಯ 94 ರನ್‌ಗಳಿಸಿದರು. ಅಲ್ಲದೇ 26 ರನ್‌ಗಳಿಗೆ 3 ವಿಕೆಟ್‌ ಪಡೆಯುವ ಮೂಲಕ ಆಲ್ರೌಂಡರ್‌ ಪ್ರದರ್ಶನ ತೋರಿದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ದ್ರಾವಿಡ್ ಹುಟ್ಟುಹಬ್ಬಕ್ಕೆ ಶತಕದ ಗಿಫ್ಟ್ ಕೊಟ್ಟ ಸಮಿತ್ ದ್ರಾವಿಡ್

ತಂದೆಯ ಹಾದಿಯಲ್ಲೇ ಸಾಗುತ್ತಿರುವ ಸಮಿತ್ ದ್ವಿಶತಕ ಬಾರಿಸಿದ ಇನಿಂಗ್ಸ್’ನಲ್ಲಿ ಸೊಗಸಾದ 22 ಬೌಂಡರಿಗಳು ಸೇರಿದ್ದವು. ಪಂದ್ಯ ಡ್ರಾ ಆದರೂ ಉಪಾಧ್ಯಕ್ಷರ ಇಲೆವೆನ್‌ ತಂಡವು ಇನಿಂಗ್ಸ್ ಮುನ್ನಡೆ ಪಡೆದಿದ್ದರಿಂದ 3 ಅಂಕ ಗಳಿಸಿಕೊಂಡರೆ, ಧಾರವಾಡ ವಲಯ ಕೇವಲ ಒಂದು ಅಂಕ ಗಳಿಸಿಕೊಂಡಿತು.

ಈ ಹಿಂದೆಯೂ ಸಮಿತು ಅಂಡರ್ 14 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ರಾಹುಲ್ ದ್ರಾವಿಡ್ ಪ್ರಸ್ತುತ ಬೆಂಗಳೂರು ಕ್ರಿಕೆಟ್ ಅಕಾಡಮಿ[NCA] ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪುತ್ರನ ಪ್ರದರ್ಶನಕ್ಕೆ ಇನ್ನಷ್ಟು ಹೆಮ್ಮೆ ಪಟ್ಟುಕೊಂಡಿರುತ್ತಾರೆ.