ಕೋಲ್ಕತಾ(ನ.22): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ  ಪಿಂಕ್ ಬಾಲ್ ಟೆಸ್ಟ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ. ಕೋಲ್ಕತಾ ನಗರ ಪಿಂಕ್ ಮಯವಾಗಿದೆ. ಇತ್ತ  ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿದೆ.  ಬಾಂಗ್ಲಾ ತಂಡವನ್ನು 106 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಇದೀಗ ಮೊದಲ ಇನಿಂಗ್ಸ್‌ನಲ್ಲಿ 68 ರನ್ ಮುನ್ನಡೆ ಪಡೆದಿದೆ.

ಇದನ್ನೂ ಓದಿ: ಬಾಂಗ್ಲಾ ಕ್ರಿಕೆಟಿಗನ ತುರ್ತು ಚಿಕಿತ್ಸೆಗೆ ಭಾರತೀಯ ಫಿಸಿಯೋ ಕರೆದ ಕೊಹ್ಲಿ!.

ಬಾಂಗ್ಲಾ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಹಿಗ್ಗದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಆರಂಭದಲ್ಲೇ ಆಘಾತ ಕಂಡಿತು. ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಕೇವಲ 14 ರನ್ ಸಿಡಿಸಿ ಔಟಾದರು. ಇನ್ನು ರೋಹಿತ್ ಶರ್ಮಾ 21 ರನ್ ಸಿಡಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.

ಇದನ್ನೂ ಓದಿ: ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

43 ರನ್‌ಗಳಿಗೆ ಭಾರತ 2 ವಿಕೆಟ್ ಕಳೆದುಕೊಂಡಿತು. ದಿಢೀರ್ ವಿಕೆಟ್ ಪತನದಿಂದ ಟೀಂ ಇಂಡಿಯಾ ಕೊಂಚ ಹಿನ್ನಡೆ ಅನುಭವಿಸಿತು. ಚೇತೇಶ್ವರ್ ಪೂಜಾರಾ ಹಾಗೂ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡೋ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಆತಂಕ ದೂರ ಮಾಡಿದರು. 

ಇದನ್ನೂ ಓದಿ: ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ನಲ್ಲಿ Pinkನದ್ದೇ ಕಾರುಬಾರು..!

ಚೇತೇಶ್ವರ್ ಪೂಜಾರಾ ಹಾಗೂ ಕೊಹ್ಲಿ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಪೂಜಾರ 55 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ ಜೊತೆ ಕೊಹ್ಲಿ ಇನಿಂಗ್ಸ್ ಮುಂದುವರಿಸಿದರು. ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿತು. ಕೊಹ್ಲಿ 59 ಅಜೇಯ ಹಾಗೂ ರಹಾನೆ ಅಜೇಯ 23 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಬಾಂಗ್ಲಾ ಮೊದಲ ಇನಿಂಗ್ಸ್:
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿತು. ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಬಾಂಗ್ಲಾ ತಂಡ 106 ರನ್‌ಗೆ ಆಲೌಟ್ ಆಯಿತು.