ಕೋಲ್ಕತಾ(ನ.22): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಹಲವು ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಪಂದ್ಯದ ಮೊದಲ ದಿನ ಟೀಂ ಇಂಡಿಯಾದ ಕ್ರೀಡಾ ಸ್ಪೂರ್ತಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬ್ಯಾಟಿಂಗ್ ಮಾಡುತ್ತಿದ್ದ ಬಾಂಗ್ಲಾ ಕ್ರಿಕೆಟಿಗನ ಹೆಲ್ಮೆಟ್‌ಗೆ ಬಾಲ್ ಬಡಿದ ಕಾರಣ, ತುರ್ತು ಚಿಕಿತ್ಸೆಗಾಗಿ ಭಾರತೀಯ ಫಿಸಿಯೋ ಆಗಮಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ನಲ್ಲಿ Pinkನದ್ದೇ ಕಾರುಬಾರು..!

ಬಾಂಗ್ಲಾ ಕ್ರಿಕೆಟಿಗ ಲಿಟ್ಟನ್ ದಾಸ್ ಗಾಯಗೊಂಡು ಪಂದ್ಯ ಅರ್ಧಕ್ಕೆ ಮೊಟಕು ಗೊಳಿಸಿ ಹೊರನಡೆದರು. ಇದರ ಬಳಿಕ ನಯೇಮ್ ಹಸನ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ, ಮೊಹಮ್ಮದ್ ಶಮಿ ಬೌನ್ಸರ್ ಎಸೆತವೊಂದು ಹೆಲ್ಮೆಟ್‌ಗೆ ಬಡಿದಿತ್ತು. ನೆಲಕ್ಕುರುಳಿದ ನಯೇಮ್ ಹಸನ್‌ಗೆ ತುರ್ತು ಚಿಕಿತ್ಸೆ ಅಗತ್ಯವಿತ್ತು. ಆದರೆ ಬಾಂಗ್ಲಾದೇಶ ಫಿಸಿಯೋ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಕ್ಷಣ ಭಾರತದ ಫಿಸಿಯೋಗೆ ಬುಲಾವ್ ನೀಡಿದರು. 

 

ಇದನ್ನೂ ಓದಿ: ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

ತಕ್ಷಣವೇ ಕ್ರೀಡಾಂಗಣಕ್ಕೆ ಧಾವಿಸಿದ ಭಾರತದ ಫಿಸಿಯೋ ನಿತಿನ್ ಪಟೇಲ್, ನಯೇಮ್  ಹಸನ್ ಗೆ ಚಿಕಿತ್ಸೆ ನೀಡಿದರು. ಪ್ರತಿ ತಂಡದ ಬಳಿ ನುರಿತ ಫಿಸಿಯೋ ಇರುತ್ತಾರೆ. ಆದರೆ ತಕ್ಷಣಕ್ಕೆ ಬಾಂಗ್ಲಾದ ಫಿಸಿಯೋ ಲಭ್ಯವಿರಲಿಲ್ಲ. ಹೀಗಾಗಿ ನಿತಿನ್ ಪಟೇಲ್ ಆಗಮಿಸಿದರು. ಚಿಕಿತ್ಸೆ ಪಡೆದ ನಯೇಮ್ ಹಸನ್ ಬ್ಯಾಟಿಂಗ್ ಮುಂದುವರಿಸಿದರು.