ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ನಲ್ಲಿ Pinkನದ್ದೇ ಕಾರುಬಾರು..!
ಭಾರತದ ಕ್ರಿಕೆಟ್ ಕಾಶಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆರಂಭವಾಗಿದೆ. ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾ ಪಿಂಕ್ ಬಣ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಕೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಹವಾ ಹೇಗಿದೆ ಎಂದರೆ, ಈಗಾಗಲೇ ನಾಲ್ಕು ದಿನದ ಪಂದ್ಯದ ಟಿಕೆಟ್ ಸೋಲ್ಡೌಟ್ ಆಗಿವೆ.
ಪಂದ್ಯದಲ್ಲಿ ಚೆಂಡು ಮಾತ್ರವಲ್ಲ, ಸಾರ್ವಜನಿಕರು ಸಂಚರಿಸುವ ಬಸ್, ಬಿಲ್ಡಿಂಗ್, ಈಡನ್ ಗಾರ್ಡನ್ಸ್ ಮೈದಾನ ಎಲ್ಲವೂ ಪಿಂಕ್’ಮಯವಾಗಿ ಬದಲಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೈಗೊಂಡ ಕ್ರಾಂತಿಕಾರಕ ನಿರ್ಧಾರಗಳಲ್ಲಿ ಡೇ & ಟೆಸ್ಟ್ ಪಂದ್ಯ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಲ್ಲ.
* ICC ಅಕ್ಟೋಬರ್ 30, 2012ರಲ್ಲಿ ಡೇ & ನೈಟ್ ಟೆಸ್ಟ್ ಪಂದ್ಯವನ್ನಾಡಲು ಒಪ್ಪಿಗೆ ನೀಡಿತ್ತು.
* ಈ ಮೊದಲು ಹಲವು ಕಾರಣಗಳಿಂದ ಡೇ & ನೈಟ್ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಒಪ್ಪಿರಲಿಲ್ಲ.
* ಆದರೆ ದಾದಾ ಕೇವಲ 3 ಸೆಕೆಂಡ್ ಗಳಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲು ಕೊಹ್ಲಿಯನ್ನು ಒಪ್ಪಿಸಿದ್ದರು.
* ಸಾಮಾನ್ಯವಾಗಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೂಕೂಬರಾ ಚೆಂಡನ್ನು ಬಳಸಲಾಗುತ್ತದೆ. ಆದರೆ ಈಡನ್ ಗಾರ್ಡನ್ ಮೈದಾನದಲ್ಲಿ SG ಚೆಂಡನ್ನು ಬಳಸಲಾಗುತ್ತಿದೆ.
* ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಪಿಂಕ್ ಬಾಲ್’ನಲ್ಲಿ ಸಾಕಷ್ಟು ಬೆವರು ಹರಿಸಿದ್ದರು.
* ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ನಾಲ್ಕು ದಿನದ ಟಿಕೆಟ್’ಗಳು ಸಂಪೂರ್ಣ ಮಾರಾಟವಾಗಿವೆ.
* ಬಂಗಾಳದ ಹೂಗ್ಲಿ ನದಿಯ ಬದಿಯಲ್ಲಿರುವ ಬೋಟ್ ಸಹಾ ಪಿಂಕ್ ಮಯವಾಗಿದೆ.
* ಈಡನ್ ಗಾರ್ಡನ್ಸ್ ಮೈದಾನದ ಲೈಟ್ಸ್’ಗಳು ಸಹ ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದೆ.
* ರಸಗುಲ್ಲಾ ರೀತಿಯ ಸಿಹಿ ತಿನಿಸಾದ ಸಂದೋಶ್ ಸ್ವೀಟ್ ಇದೀಗ ಅಭಿಮಾನಿಗಳ ಬಾಯಲ್ಲಿ ನೀರು ತರಿಸುತ್ತಿದೆ.
* ಕೋಲ್ಕತಾದ ಕ್ಲಾಕ್ ಟವರ್ ಸಹಾ ಪಿಂಕ್ ಮಯವಾಗಿ ಬದಲಾಗಿದೆ.
ಕೋಲ್ಕತಾದ ಮಹರಾಜ ದಾದಾ ಪಿಂಕ್ ಬಾಲ್ ಟೆಸ್ಟ್‌ನ ಸೆಂಟರ್ ಆಫ್ ಅಟ್ರಾಕ್ಷನ್
* ಈಡನ್ ಗಾರ್ಡನ್ಸ್ ಮೈದಾನದಲ್ಲಿ ತುಂಬಿತುಳುಕುತ್ತಿರುವ ಕ್ರಿಕೆಟ್ ಅಭಿಮಾನಿಗಳು.
* ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಬೆಲ್ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.
ದೀದಿ ಮಾತ್ರವಲ್ಲದೇ * ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಈ ಪಂದ್ಯಕ್ಕೆ ಸಾಕ್ಷಿಯಾದರು.
* ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು.
* ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಬಾಂಗ್ಲಾದೇಶ ಕೇವಲ 106 ರನ್ ಗಳಿಗೆ ಆಲೌಟ್ ಆಯಿತು.
* ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಮೊದಲ ಹಾಗೂ 5+ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೆ ಇಶಾಂತ್ ಶರ್ಮಾ ಪಾತ್ರರಾದರು.