ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’
ಕೋಲ್ಕತ್ತಾ ನಗರ ಪಿಂಕ್ ಮಯ/ ತಿನ್ನುವ ಸ್ವೀಟ್ ಸಹ ಪಿಂಕ್/ ಗಂಗೂಲಿ ಸಾಹಸಕ್ಕೆ ಭರಪೂರ ಮೆಚ್ಚುಗೆ/ ಏನಿದು ಸಂದೇಶ್? ತಯಾರಿಕೆ ಹೇಗೆ?
ಕೋಲ್ಕತ್ತಾ[ನ. 22] ಟೆಸ್ಟ್ ಕ್ರಿಕೆಟ್ ನಿಂದ ಅಭಿಮಾನಿಗಳು ದೂರವಾಗುತ್ತಿದ್ದಾರೆನೋ ಎಂಬ ಕಾಲ ನಿರ್ಮಾಣವಾಗುತ್ತಿದೆ ಎನ್ನುತ್ತಿರುವಾಲೇ ಬಂಗಾಳದ ಮಹಾರಾಜ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಂದು ಮ್ಯಾಜಿಕ್ ಮಾಡಿದ್ದಾರೆ. ಅದುವೆ ಪಿಂಕ್ ಬಾಲ್ ಟೆಸ್ಟ್.
ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಾತ್ರ ಪಿಂಕ್ ಬಾಲ್ ಇಲ್ಲ. ಇಡೀ ಕೊಲ್ಕತ್ತಾ ಮಹಾನಗರ ಪಿಂಕ್..ಪಿಂಕ್..ಪಿಂಕ್.. ಅಷ್ಟೇ.
ಕಟ್ಟಡದ ಒಳಿಗಿನ ಲೈಟ್ ಪಿಂಕ್, ಓಡಾಡುವ ಬಸ್ಸುಗಳು ಪಿಂಕ್.. ಅಷ್ಟೇ ಏಕೆ ಕೋಲ್ಕತ್ತಾದ ಹೆಸರುವಾಸಿ ಸಿಹಿತಿಂಡಿ ಪಿಂಕ್.. ಪಿಂಕ್..ಪಿಂಕ್.. ಕೋಲ್ಕತ್ತಾದ, ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿತಿಂಡಿ ‘ಸಂದೇಶ್’[ರಸಗುಲ್ಲಾ] ಪಿಂಕ್ -ಪಿಂಕ್ ಆಗಿ ಕಾಣಿಸಿಕೊಂಡಿದೆ.
ಭಾರತದ ಕ್ರಿಕೆಟ್ ರಾಜಧಾನಿ ಕೋಲ್ಕತ್ತಾ ಪಿಂಕ್ ಮಯ
ಬಿಸಿಸಿಐ ಅಧ್ಯಕ್ಷ , ಪಿಂಕ್ ಬಾಲ್ ಟೆಸ್ಟ್ ಆಯೋಜನೆಯ ಹಿಂದಿನ ಶಕ್ತಿ, ದಿಗ್ಗಜ ಕ್ರಿಕೆಟಿಗ ಸೌರವ್ ಗಂಗೂಲಿ ಈ ಪಿಂಕ್ ಸಂದೇಶವನ್ನು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡು ಸಂದೇಶ ನೀಡಿದ್ದಾರೆ.
ಏನಿದು ಸಂದೇಶ:
ಸಂದೇಶ ಸ್ವೀಟ್ ನ್ನು ಬೆಂಗಾಳಿಯಲ್ಲಿ ಸಂದೋಶ್ ಎಂದು ಕರೆಯುತ್ತಾರೆ. ಸಕ್ಕರೆ ಮತ್ತು ಹಾಲನ್ನು ಬಳಸಿ ಇದನ್ನು ತಯಾರಿಸುತ್ತಾರೆ . ಇದೇ ಮಾದರಿಯಲ್ಲಿ ತಯಾರಿಸುವ ಕೆಲವು ಸ್ವೀಟ್ ಗಳನ್ನು ಹಾಲಿನ ಬದಲು ಚೆನ್ನಾ, ಪನ್ನೀರ್ ಬಳಸಿಯೂ ತಯಾರು ಮಾಡುತ್ತಾರೆ. ಪಕ್ಕದ ಢಾಕಾ ಭಾಗದ ಜನರು ಇದನ್ನು ಪ್ರಾನಾಹಾರಾ ಎಂದು ಕರೆಯುತ್ತಾರೆ. ಕೆಲವೊಮ್ಮೆ ಮೊಸರು ಮತ್ತು ಮಾವಾಗಳನ್ನುಬಳಕೆ ಮಾಡಿಕೊಳ್ಳುತ್ತಾರೆ. ಕೋಲ್ಕತ್ತಾದ ಪೆಲು ಮೋದಕ್ ಹೆಸರಿನ ಸಿಹಿ ತಿಂಡಿ ಮಳಿಗೆ ಸಂದೇಶ್ ತಯಾರಿಕೆಗೆ ಬಲು ಫೇಮಸ್.
ರೋಹಿತ್ ಶರ್ಮಾ ಅದ್ಭುತ ಕ್ಯಾಚ್ ನೋಡದೆ ಇದ್ರೆ ನಿಮಗೆ ನಷ್ಟ
ಇತಿಹಾಸ:
ಮಧ್ಯಕಾಲದ ಸಾಹಿತ್ಯದಲ್ಲಿ ಅನೇಕ ಕಡೆ ಸಂದೇಶದ ಉಲ್ಲೇಖ ಕಂಡುಬರುತ್ತದೆ. ಕಿತ್ತಿಬಾಸ್ ರಾಮಾಯಣ, ಹಿರಿಯ ಕವಿ ಚೈತನ್ಯ ಅವರ ಕವಿತೆ ಸಾಲಿನಲ್ಲಿಯೂ ಸಂದೇಶ್ ಉಲ್ಲೇಖ ಇದೆ. ದೂರದ ಚೀನಾದಲ್ಲಿಯೂ ಸಂದೇಶ್ ಹೆಸರಿನ ತಿಂಡಿ ಇದೆ. ಅಲ್ಲಿ ಡಿಶ್ ಆದರೆ ಇಲ್ಲಿ ಸಿಹಿತಿಂಡಿ.. ವ್ಯತ್ಯಾಸ ಇದೆ. ಕೋಲ್ಕತ್ತಾದ ಸಂದೇಶ್ ಮೇಲೆ ಪೋರ್ಚುಗೀಸ್ ಪ್ರಭಾವವೂ ಇದೆ.
ತಯಾರಿಕೆ ಹೇಗೆ?
ಇಷ್ಟೆಲ್ಲ ಹೇಳಿದ ಮೇಲೆ ತಯಾರಿಕೆ ಬಗ್ಗೆ ಹೇಳದಿದ್ದರೆ ಹೇಗೆ?
ಬೇಕಾಗುವ ಸಾಮಗ್ರಿಗಳು:
ಚೆನ್ನಾ[ಸಾಫ್ಟ್ ಚೀಸ್, ಪನ್ನೀರು]
ಸಕ್ಕರೆ
ಬಾದಾಮಿ, ಪಿಸ್ತಾ, ಕೇಸರಿ ಮತ್ತು ಏಲಕ್ಕಿ [ತಕ್ಕಷ್ಟು ಬಳಕೆ ಮಾಡಿಕೊಳ್ಳಬಹದು]
ಸಣ್ಣದಾಗಿ ಕತ್ತರಿಸಿ ಚೆನ್ನಾವನ್ನು ಹದವಾಗಿ ಬಿಸಿ ಮಾಡಿಕೊಳ್ಳಬೇಕು. ಸಣ್ಣ ಚೆಂಡಿನ ಆಕಾರಕ್ಕೆ ಮಾಡಿಕೊಂಡರೆ ಕಛಗೊಲ್ಲಾ ಎಂದು ಕರೆಯುತ್ತಾರೆ. ನಂತರ ಸಕ್ಕರೆ ಮತ್ತು ಒಣ ಹಣ್ಣು ಮತ್ತು ಹಾಲಿನೊಂದಿಗೆ ಬಿಸಿ ಮಾಡುತ್ತಲೇ ಮಿಶ್ರಣ ಮಾಡಿದರೆ ಸಂದೇಶ್ ತಿನ್ನಲು ಸಿದ್ಧ. ಮೀಶ್ರಣ ಮಾಡುವಾಗ ನೈಸರ್ಗಿಕ ಬಣ್ಣವನ್ನು ಸೇರಿಸಿಕೊಳ್ಳಬಹುದು.