Asianet Suvarna News Asianet Suvarna News

ಇನ್ನಾದ್ರೂ ಸುಧಾರಿಸಿಕೊಳ್ಳಿ, ಭ್ರಮೆಯಿಂದ ಹೊರಬನ್ನಿ; ಪಾಕಿಗಳ ಟೀಕೆಗೆ ಮೊಹಮ್ಮದ್ ಶಮಿ ಖಡಕ್ ಉತ್ತರ!

ಪಾಕಿಸ್ತಾನ ಕ್ರಿಕೆಟಿಗರೂ ಇನ್ನೂ ಒಂದು ಭ್ರಮೆಯಲ್ಲಿದ್ದಾರೆ. ವಿಶ್ವದಲ್ಲಿ ನಮಗಿಂತ ಉತ್ತಮ ಬೌಲರ್ ಇರಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದಾರೆ. ಇನ್ನು ಎಷ್ಟು ದಿನ ಇದೇ ಭ್ರಮೆಯಲ್ಲಿ ಕಾಲಕಳೆಯುತ್ತೀರಿ ಎಂದು ಮೊಹಮ್ಮದ್ ಶಮಿ ಟೀಕೆಗ ಖಡಕ್ ಉತ್ತರ ನೀಡಿದ್ದಾರೆ.

Pakistan Some players cant digest Mohammed Shami slams controversy statement made by ex cricketers ckm
Author
First Published Nov 22, 2023, 4:50 PM IST

ನವದೆಹಲಿ(ನ.22) ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಬೌಲಿಂಗ್ ದಾಳಿ, ಪ್ರದರ್ಶನ, ಟಾಸ್ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಬಗೆ ಬಗೆ ಆರೋಪ ಮಾಡಿದ್ದರು. ಈ ಆರೋಪ, ಟೀಕೆಗಳಿಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಖಾಸಗಿ ಸ್ಪೋರ್ಟ್ ಬ್ರ್ಯಾಂಡ್ ನಡೆಸಿದ ಸಂದರ್ಶನದಲ್ಲಿ ಶಮಿ ಟ್ರೋಲ್ ಹಾಗೂ ಟೀಕಿಸುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಕೆಲವರಿಗೆ ನಮ್ಮ ಪ್ರದರ್ಶನವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಸುಧಾರಿಸಿಕೊಳ್ಳಿ ಎಂದು ಶಮಿ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯ ಆರಂಭಿಕ 4 ಪಂದ್ಯದಲ್ಲಿ ನಾನು ಆಡಿರಲಿಲ್ಲ. 5ನೇ ಪಂದ್ಯದಲ್ಲಿ 5 ವಿಕೆಟ್ ಬಳಿಕ 4 ವಿಕೆಟ್, ಮುಂದಿನ ಪಂದ್ಯದಲ್ಲಿ ಮತ್ತೆ 5 ವಿಕೆಟ್ ಹೀಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಟೀಂ ಇಂಡಿಯಾದ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ಇದನ್ನು ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಬ್ಬರ ಯಶಸ್ಸನ್ನು ಸಂಭ್ರಮಿಸಲು ಸಾಧ್ಯವಾಗದವರು ಉತ್ತಮ ಕ್ರಿಕೆಟಿಗನಾಗಲು ಅಥವಾ ಕ್ರೀಡಾಪಟುವಾಗಲು ಸಾಧ್ಯವಿಲ್ಲ ಎಂದು ಶಮಿ ಹೇಳಿದ್ದಾರೆ.

10ರಲ್ಲಿ ಪಾಸಾಗಿ 11ರಲ್ಲಿ ಫೇಲಾದ್ರಾ ರೋಹಿತ್ ಶರ್ಮಾ..? ಟೀಂ ಇಂಡಿಯಾ ಕ್ಯಾಪ್ಟನ್ ಮಾಡಿದ ಯಡವಟ್ಟೇನು?

ಕೆಲ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಭ್ರಮೆಯಲ್ಲಿದ್ದಾರೆ. ಪಾಕಿಸ್ತಾನಕ್ಕಿಂತ ಉತ್ತಮ ಬೌಲರ್ ಈ ವಿಶ್ವದಲ್ಲೇ ಇಲ್ಲ ಎಂದುಕೊಂಡಿದ್ದಾರೆ. ಒಂದು ವಿಕೆಟ್, ಸ್ವಿಂಗ್ ಮಾಡಿದ ತಕ್ಷಣ ಸಹಿಸಲು ಸಾಧ್ಯವಾಗದೇ ಆರೋಪ ಮಾಡುತ್ತಿದ್ದಾರೆ. ಭಾರತಕ್ಕೆ ಬೇರೆ ಬಾಲ್ ನೀಡಲಾಗುತ್ತಿದೆ. ಬೇರೆ ಕಂಪನಿ, ವೇಗಿಗಳಿಗೆ ನೆರವಾಗುವ ಬಾಲ್ ಎಂದೆಲ್ಲಾ ಆರೋಪ ಮಾಡುತ್ತಿದ್ದಾರೆ. ಭಾರತೀಯ ಬೌಲರ್‌ಗೆ ಬೇಕಾದ ಪಿಚ್ ಮಾಡಿದ್ದಾರೆ ಸೇರಿದಂತೆ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನೂ ಇದೇ ರೀತಿ ಆರೋಪ, ಟೀಕೆ ಮಾಡುತ್ತಾ ಎಷ್ಡು ದಿನ ದಿನದೂಡುತ್ತೀರಿ, ಕನಿಷ್ಠ ಸುಧಾರಣೆಯಾಗಿ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಲೀಗ್ ಹಂತದಲ್ಲಿ ನೀಡಿದ ಪ್ರದರ್ಶನ ಫೈನಲ್ ಪಂದ್ಯದಲ್ಲಿ ನೀಡಲು ಸಾಧ್ಯವಾಗಿಲ್ಲ ಅನ್ನೋ ನೋವಿದೆ. ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದೇ ಟ್ರೋಫಿ ಕೈಚೆಲ್ಲಿದ್ದೇವೆ. ಈ ನೋವು ಯಾವತ್ತೂ ಮಾಸುವುದಿಲ್ಲ. ನಾವು ಟ್ರೋಫಿ ಗೆಲ್ಲುವ ಅರ್ಹ ತಂಡವಾಗಿತ್ತು. ಹೀಗಾಗಿ ನೋವು ಆಘಾತದ ತೀವ್ರತೆ ಹೆಚ್ಚು ಎಂದು ಶಮಿ ಹೇಳಿದ್ದಾರೆ.

ಭಾವುಕರಾಗಿದ್ದ ಕೊಹ್ಲಿ-ರೋಹಿತ್ ಮುಖದಲ್ಲಿ ನಗು, ಮೋದಿ ಜೊತೆ ಕೈ ಕೈ ಹಿಡಿದ ಫೋಟೋ ವೈರಲ್!
 

Follow Us:
Download App:
  • android
  • ios