10ರಲ್ಲಿ ಪಾಸಾಗಿ 11ರಲ್ಲಿ ಫೇಲಾದ್ರಾ ರೋಹಿತ್ ಶರ್ಮಾ..? ಟೀಂ ಇಂಡಿಯಾ ಕ್ಯಾಪ್ಟನ್ ಮಾಡಿದ ಯಡವಟ್ಟೇನು?
ವಿಶ್ವಕಪ್ ಫೈನಲ್‌ನಲ್ಲಿನ ಟೀಂ ಇಂಡಿಯಾದ ಸೋಲಿಗೆ ಬ್ಯಾಟರ್ಸ್‌ಗಳ ವೈಫಲ್ಯವೇ ಪ್ರಮುಖ ಕಾರಣ. ಅದರಲ್ಲೂ ಯಂಗ್‌ಸ್ಟರ್ಗಳಾದ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಟಿ20 ಸ್ಪೆಷಲಿಸ್ಟ್ ಸೂರ್ಯ ಕುಮಾರ್ ಫ್ಲಾಪ್ ಶೋ ನೀಡಿದ್ರು. ಇಲ್ಲದಿದ್ರೆ, ಕಥೆಯೇ ಬೇರೆ ಇರ್ತಿತ್ತು
ಬೆಂಗಳೂರು(ನ.21): ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ವಿಶ್ವಕಪ್ ಫೈನಲ್‌ನ ಸೋಲಿನದ್ದೇ ಚರ್ಚೆ. ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಸೋಲಿಗೆ ನಾನಾ ಕಾರಣಗಳನ್ನ ನೀಡ್ತಿದ್ದಾರೆ. ಅದರಲ್ಲೂ ನಾಯಕ ರೋಹಿತ್ ಶರ್ಮಾರ ವೈಫಲ್ಯ ದಿಂದಲೇ ತಂಡಕ್ಕೆ ಹಿನ್ನಡೆಯಾಯ್ತು ಅನ್ನೋ ಮಾತುಗಳು ಜೋರಾಗಿವೆ. ಹಾಗಾದ್ರೆ, ರೋಹಿತ್ ಮಾಡಿದ ತಪ್ಪುಗಳಾದ್ರು ಏನು ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ವಿಶ್ವಕಪ್ ಫೈನಲ್‌ನಲ್ಲಿನ ಟೀಂ ಇಂಡಿಯಾದ ಸೋಲಿಗೆ ಬ್ಯಾಟರ್ಸ್‌ಗಳ ವೈಫಲ್ಯವೇ ಪ್ರಮುಖ ಕಾರಣ. ಅದರಲ್ಲೂ ಯಂಗ್‌ಸ್ಟರ್ಗಳಾದ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಟಿ20 ಸ್ಪೆಷಲಿಸ್ಟ್ ಸೂರ್ಯ ಕುಮಾರ್ ಫ್ಲಾಪ್ ಶೋ ನೀಡಿದ್ರು. ಇಲ್ಲದಿದ್ರೆ, ಕಥೆಯೇ ಬೇರೆ ಇರ್ತಿತ್ತು. ಈ ಮೂವರು ಹೈ ಪ್ರೆಶರ್ ಮ್ಯಾಚ್‌ನಲ್ಲಿ ತಂಡಕ್ಕೆ ಕೈಕೊಟ್ರು. ಇವರ ಜೊತೆಗೆ ನಾಯಕ ರೋಹಿತ್ ಶರ್ಮಾ ಮಾಡಿದ ಕೆಲ ತಪ್ಪುಗಳಿಂದಲೂ ತಂಡಕ್ಕೆ ಹಿನ್ನಡೆಯಾಯ್ತು ಅನ್ನೋ ಮಾತುಗಳು ಕೇಳಿ ಬರ್ತಿವೆ.
World Cup Final ನರೇಂದ್ರ ಮೋದಿ ಸ್ಟೇಡಿಯಂ ಸೈಲೆಂಟ್ ಆಗಿದ್ದು ನೋಡಿ ತೃಪ್ತಿಯಾಯ್ತು: ಪ್ಯಾಟ್ ಕಮಿನ್ಸ್
ವಿಶ್ವಕಪ್ ಟೂರ್ನಿಯುದ್ಧಕ್ಕೂ ರೋಹಿತ್ ಶರ್ಮಾ, ಖತರ್ನಾಕ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು. ಪವರ್‌ಪ್ಲೇನಲ್ಲಿ ಫಿಯರ್ಲೆಸ್ ಬ್ಯಾಟಿಂಗ್ನಿಂದ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ರು. ಹಿಟ್ಮ್ಯಾನ್ ಆಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯ್ತು. ಮಾಜಿ ಆಟಗಾರರು, ಕ್ರಿಕೆಟ್ ಎಕ್ಸ್ಪೆರ್ಟ್ಸ್ ರೋಹಿತ್ ಆಟವನ್ನ ಕೊಂಡಾಡಿದ್ರು. ಆದ್ರೆ, ಫೈನಲ್ನಲ್ಲಿ ರೋಹಿತ್ರ ಈ ಅಗ್ರೆಸಿವ್ ಅಪ್ರೋಚೆ.., ತಂಡವನ್ನ ಸಂಕಷ್ಟಕ್ಕೆ ದೂಡಿತು ಅಂದ್ರೆ ತಪ್ಪಿಲ್ಲ.
ಯೆಸ್, ರೋಹಿತ್ ಅಟ್ಯಾಕಿಂಗ್ ಗೇಮ್ ಮೂಲಕ ಆಸಿಸ್ ಬೌಲರ್ಗಳ ಮೇಲೆ ಸವಾರಿ ಮಾಡಿದ್ದೇನೋ ಸರಿ. ಆದ್ರೆ, ಗಿಲ್ ವಿಕೆಟ್ ಬಿದ್ದ ಮೇಲೆ ಎಚ್ಚೆತ್ತುಕೊಳ್ಳಬೇಕಿತ್ತು. ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಆಡಿದಂತೆ ಸಂದರ್ಭಕ್ಕೆ ತಕ್ಕಂತೆ ಆಡಬೇಕಿತ್ತು. ಬಿಗ್ ಇನ್ನಿಂಗ್ಸ್ ಕಟ್ಟಬೇಕಿತ್ತು. ಆದ್ರೆ, ರೋಹಿತ್ ಅದನ್ನೇ ಮಾಡಲಿಲ್ಲ. ಮ್ಯಾಕ್ಸ್ವೆಲ್ ಎಸೆದ ಓವರ್ನಲ್ಲಿ ಆಲ್ರೆಡಿ 10 ರನ್ ಬಂದಿದ್ದರೂ, ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿದ್ರು. ರೋಹಿತ್ ತಾಳ್ಮೆಯಿಂದ ಬ್ಯಾಟ್ ಬೀಸಿದ್ರೆ, ತಂಡ ಬಿಗ್ ಸ್ಕೋರ್ ಕಲೆಹಾಕೋ ಅವಕಾಶವಿತ್ತು.
ಆಸಿಸ್ ಕ್ರಿಕೆಟಿಗರ ಪತ್ನಿಯರ ಟೀಕಿಸುವುದು ನಿಲ್ಲಿಸಿ, ಫ್ಯಾನ್ಸ್‌ಗೆ ಹರ್ಭಜನ್ ಸಿಂಗ್ ಎಚ್ಚರಿಕೆ!
ಸೂರ್ಯ ಬದಲಿಗೆ ಅಶ್ವಿನ್‌ಗೆ ಅವಕಾಶ ನೀಡಬೇಕಿತ್ತಾ..?
ನಾಯಕತ್ವದಲ್ಲೂ ರೋಹಿತ್ ಶರ್ಮಾ ಎಡವಿದ್ರು. ಸಿರಾಜ್ ಹೊಸ ಬಾಲ್ನಲ್ಲಿ ಸ್ವಿಂಗ್ ಮಾಡ್ತಾರೆ. ಎಫೆಕ್ಟಿವ್ ಅಂತ ಗೊತ್ತಿದ್ರೂ, ಸಿರಾಜ್ ಬದಲು ಮೊಹಮ್ಮದ್ ಶಮಿ ಬೌಲಿಂಗ್ ನೀಡಿದ್ರು. ಮೊದಲ ಓವರ್ನಿಂದಲೇ ಆಸೀಸ್ ಬ್ಯಾಟರ್ಸ್ ಶಮಿಯ ಮೇಲೆ ಅಟ್ಯಾಕ್ ಮಾಡಿದ್ರು. ಇದು ತಂಡಕ್ಕೆ ಹಿನ್ನಡೆಯಾಯ್ತು.
ಅಲ್ಲದೇ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೂ ಫೇಲ್ ಆದ್ರು. ತಂಡಕ್ಕೆ ಆರನೇ ಬೌಲರ್ ಕೊರತೆ ಇದ್ರೂ, ಸೂರ್ಯಕುಮಾರ್ ಯಾದವರನ್ನ ಮುಂದುವರಿಸಿದ್ರು. ಸೂರ್ಯ ಬದಲಿಗೆ ಆರ್. ಅಶ್ವಿನ್ ಅಥವಾ ಶಾರ್ದೂಲ್ ಠಾಕೂರ್ ಅವ್ರನ್ನ ಆಡಿಸಬಹುದಾಗಿತ್ತು. ಅಶ್ವಿನ್ ಇದ್ದಿದ್ರೆ ಬೌಲಿಂಗ್ ಮತ್ತಷ್ಟು ಬಲಗೊಳ್ಳುತ್ತಿತ್ತು. ಆಸಿಸ್ ಪಡೆಯಲ್ಲಿ ನಾಲ್ವರು ಎಡಗೈ ಬ್ಯಾಟ್ಸ್ಮನ್ಗಳಿದ್ರು. ಎಡಗೈ ಬ್ಯಾಟ್ಸ್ಮನ್ಗಳು ಅಶ್ವಿನ್ ಸ್ಪಿನ್ಗೆ ಆಡಲು ಪರದಾಡ್ತಾರೆ. ಇದೆಲ್ಲ ಗೊತ್ತಿದ್ದು ಅಶ್ವಿನ್ರನ್ನ ಆಡಿಸದೇ ಇದ್ದದ್ದು ಮುಳುವಾಯ್ತು.
ಒಟ್ಟಿನಲ್ಲಿ 10 ಪಂದ್ಯಗಳಲ್ಲಿ ಮಿಂಚಿದ್ದ ರೋಹಿತ್, ಫೈನಲ್ ಸಮರದಲ್ಲಿ ಮಾತ್ರ ಎಚ್ಚರಿಕೆಯ ಹೆಜ್ಜೆ ಇಡಲಿಲ್ಲ. ಇದೇ ತಂಡದ ಯಶಸ್ಸಿಗೆ ಬ್ರೇಕ್ ಹಾಕ್ತು.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್