* ವೇಗದ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿರುವ ಜಮ್ಮು ಮೂಲದ ವೇಗಿ ಉಮ್ರಾನ್ ಮಲಿಕ್* ಕೇವಲ ವೇಗದ ಬೌಲಿಂಗ್ ಮಾಡಿದರೆ ಸಾಲದು ಎಂದು ಪಾಕ್ ವೇಗಿ ಶಾಹೀನ್ ಅಫ್ರಿದಿ* ಮಲಿಕ್‌ಗೆ ಲೈನ್ ಅಂಡ್ ಲೆಂಗ್ತ್‌ನತ್ತ ಗಮನ ಹರಿಸಲು ಸಲಹೆ ನೀಡಿದ ಅಫ್ರಿದಿ
ಲಾಹೋರ್(ಜೂ.04): ತಮ್ಮ ಮಾರಕ ವೇಗದ ಬೌಲಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಶಾಹೀನ್ ಅಫ್ರಿದಿ (Shaheen Afridi). 2021ರ ಐಸಿಸಿ ಟಿ20 ವಿಶ್ವಕಪ್ (ICC T20 World Cup), ಟೆಸ್ಟ್ ಸರಣಿಯಲ್ಲಿ ಕರಾರುವಕ್ಕಾದ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡಿದ್ದ ಶಾಹೀನ್ ಅಫ್ರಿದಿ, ವರ್ಷದ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿಗೂ ಪಾತ್ರರಾಗಿದ್ದರು. ಇದೀಗ ಶಾಹೀನ್ ಅಫ್ರಿದಿ ವೇಗದ ಬೌಲಿಂಗ್ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಕೇವಲ ವೇಗವೊಂದಿದ್ದರೇ ಸಾಲದು ಎನ್ನುವ ಮೂಲಕ ಭಾರತದ ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಕಾಲೆಳೆದಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಯುವ ವೇಗಿ ಉಮ್ರಾನ್ ಮಲಿಕ್, ಗುಜರಾತ್ ಟೈಟಾನ್ಸ್ (Gujarat Titans) ತಂಡದಲ್ಲಿ ಲಾಕಿ ಫರ್ಗ್ಯೂಸನ್153+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ವೇಗದ ಬೌಲಿಂಗ್ ಕುರಿತಂತೆ ಮಾತನಾಡಿರುವ ಶಾಹೀನ್ ಅಫ್ರಿದಿ, ಸರಿಯಾದ ಲೈನ್ ಹಾಗೂ ಲೆಂಗ್ತ್ ಇಲ್ಲದ ವೇಗದ ಬೌಲಿಂಗ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. ವೇಗದ ಬೌಲಿಂಗ್ ಜತೆಗೆ ಸ್ವಿಂಗ್ ಮಾಡುವ ಕೌಶಲ್ಯವನ್ನು ಕರಗತ ಮಾಡಿಕೊಂಡರೆ ಮಾತ್ರ ಬೌಲಿಂಗ್ ಪರಿಣಾಮಕಾರಿಯಾಗಲಿದೆ ಎಂದು ಪಾಕ್ ಎಡಗೈ ವೇಗಿ ಅಭಿಪ್ರಾಯಪಟ್ಟಿದ್ದಾರೆ.
ಕೇವಲ ವೇಗದ ಬೌಲಿಂಗ್‌ನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನಾನು ಯಾವತ್ತೂ ವೇಗದ ಬೌಲಿಂಗ್ ಮಾಡುವ ಬಗ್ಗೆ ಯೋಚಿಸಿರಲಿಲ್ಲ. ವೈಯುಕ್ತಿಕ ಅಭಿಪ್ರಾಯ ಹೇಳಬೇಕೆಂದರೇ ವೇಗದ ಬೌಲಿಂಗ್‌ನಿಂದ ಏನೂ ಮಾಡಲು ಸಾಧ್ಯವಿಲ್ಲ. ನೀವು ಸರಿಯಾದ ಲೈನ್, ಲೆಂಗ್ತ್ ಹಾಗೂ ಸ್ವಿಂಗ್ ಬೌಲಿಂಗ್ ಮಾಡದೇ ಹೋದರೆ ಸುಲಭವಾಗಿ ಬ್ಯಾಟರ್‌ನನ್ನು ವಂಚಿಸಲು ಸಾಧ್ಯವಿಲ್ಲ. ನಾನು ನನ್ನ ಫಿಟ್ನೆಸ್ ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಫಿಟ್ನೆಸ್ ಹೆಚ್ಚಿಸಿಕೊಂಡರೆ ಸಹಜವಾಗಿಯೇ ವೇಗ ಕೂಡಾ ಹೆಚ್ಚಾಗಲಿದೆ. ಮುಂಬರುವ ದಿನಗಳಲ್ಲಿ ನಾನು ಮತ್ತಷ್ಟು ಲೈನ್ ಅಂಡ್ ಲೆಂಗ್ತ್ ಜತೆಗೆ ವೇಗದ ಬೌಲಿಂಗ್ ಮಾಡುವ ವಿಶ್ವಾಸವಿದೆ ಎಂದು ಶಾಹೀನ್ ಅಫ್ರಿದಿ ಹೇಳಿದ್ದಾರೆ.
IPL 2022 ತಾಂತ್ರಿಕವಾಗಿ ಆಶಿಶ್ ನೆಹ್ರಾ ಐಪಿಎಲ್‌ನ ಬೆಸ್ಟ್ ಕೋಚ್ ಎಂದ ಗ್ಯಾರಿ ಕರ್ಸ್ಟನ್
ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪರ 24 ಟೆಸ್ಟ್ ಪಂದ್ಯಗಳನ್ನಾಡಿ 25.08ರ ಸರಾಸರಿಯಲ್ಲಿ 95 ವಿಕೆಟ್ ಕಬಳಿಸಿದ್ದರು. 22 ವರ್ಷದ ಶಾಹೀನ್ ಅಫ್ರಿದಿ 30 ಏಕದಿನ ಪಂದ್ಯಗಳಿಂದ 59 ಬಲಿ ಪಡೆದಿದ್ದರು. ಇನ್ನು 40 ಟಿ20 ಪಂದ್ಯಗಳನ್ನಾಡಿ 47 ವಿಕೆಟ್ ಉರುಳಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ 6 ವಿಕೆಟ್ ಕಬಳಿಸಿದ ದಾಖಲೆ ಕೂಡಾ ಶಾಹೀನ್ ಅಫ್ರಿದಿ ಹೆಸರಿನಲ್ಲಿದೆ.
