- Home
- Sports
- Cricket
- Arjun Tendulkar Wedding: ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ: ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!
Arjun Tendulkar Wedding: ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ: ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮಾರ್ಚ್ 5ರ ಗುರುವಾರದಂದು ಸಾನಿಯಾ ಚಾಂದೋಕ್ ಅವರೊಂದಿಗೆ ಸಪ್ತಪದಿ ತುಳಿದರು. ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ಕುಟುಂಬದ ಆಪ್ತರು, ಸ್ನೇಹಿತರು ಹಾಗೂ ಕ್ರೀಡಾ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು.
110

Image Credit : Instagram
ಅರ್ಜುನ್ ತೆಂಡೂಲ್ಕರ್ ಮದುವೆ
ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅವರ ವಿವಾಹದಲ್ಲಿ ಹರ್ಭಜನ್ ಸಿಂಗ್, ಅವರ ಪತ್ನಿ ಗೀತಾ ಬಸ್ರಾ ಹಾಗೂ ಇತರ ಕ್ರಿಕೆಟ್ ಗಣ್ಯರು ಭಾಗವಹಿಸಿದ್ದರು.
210
Image Credit : Instagram
ಹಲವು ದಿಗ್ಗಜ ಕ್ರಿಕೆಟಿಗರು ಹಾಜರ್
ಅರ್ಜುನ್-ಸಾನಿಯಾ ಮದುವೆಯಲ್ಲಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ, ಹರ್ಭಜನ್ ಸಿಂಗ್, ಗೀತಾ ಬಸ್ರಾ ಹಾಗೂ ಇತರರು ಪೋಸ್ ನೀಡಿದರು.
310
Image Credit : Instagram
ಪತ್ನಿಯರ ಜತೆ ಎಂಟ್ರಿಕೊಟ್ಟ ಮಾಜಿ ಕ್ರಿಕೆಟರ್ಸ್
ಅರ್ಜುನ್-ಸಾನಿಯಾ ಮದುವೆಗೆ ಹಲವು ಕ್ರಿಕೆಟಿಗರು ತಮ್ಮ ಪತ್ನಿಯರೊಂದಿಗೆ ಆಗಮಿಸಿದ್ದರು. ಎಡದಿಂದ ಜಹೀರ್ ಖಾನ್-ಸಾಗರಿಕಾ, ಯುವರಾಜ್ ಸಿಂಗ್-ಹೇಝಲ್ ಕೀಚ್, ಅಜಿತ್ ಅಗರ್ಕರ್ ಮತ್ತು ಅವರ ಪತ್ನಿ, ಹರ್ಭಜನ್ ಸಿಂಗ್-ಗೀತಾ ಬಸ್ರಾ ಹಾಗೂ ಪತ್ನಿ ಸಮೇತ ಆಶಿಶ್ ನೆಹ್ರಾ ಇದ್ದಾರೆ.
410
Image Credit : Instagram
ಮಹರಾಷ್ಟ್ರ ಸಿಎಂ, ಡಿಸಿಎಂ ಭಾಗಿ
ಅರ್ಜುನ್-ಸಾನಿಯಾ ಅವರ ವಿವಾಹ ಸಮಾರಂಭಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಆಗಮಿಸಿದ್ದರು.
510
Image Credit : Instagram
ಅಜಿತ್ ಅಗರ್ಕರ್, ಜಹೀರ್ ಖಾನ್ ಭಾಗಿ
ಅರ್ಜುನ್-ಸಾನಿಯಾ ಮದುವೆಯಲ್ಲಿ ಅಜಿತ್ ಅಗರ್ಕರ್, ಜಹೀರ್ ಖಾನ್ ಹಾಗೂ ಇತರರು ಪೋಸ್ ನೀಡುತ್ತಿರುವುದು.
610
Image Credit : Instagram
ಆದಿತ್ಯ ಠಾಕ್ರೆ, ಉದ್ದವ್ ಠಾಕ್ರೆ ಭಾಗಿ
ಆದಿತ್ಯ ಠಾಕ್ರೆ ಮತ್ತು ಅವರ ತಂದೆ ಉದ್ಧವ್ ಠಾಕ್ರೆ ಅವರು ಅರ್ಜುನ್-ಸಾನಿಯಾ ಜೋಡಿಗೆ ಮದುವೆಯ ಶುಭಾಶಯ ಕೋರಿದರು.
710
Image Credit : Instagram
ಪತ್ನಿ ಜತೆ ಹಾಜರಾದ ಯುವಿ
ಅರ್ಜುನ್-ಸಾನಿಯಾ ಅವರ ಮದುವೆಗೆ ಯುವರಾಜ್ ಸಿಂಗ್ ತಮ್ಮ ಪತ್ನಿ ಹೇಝಲ್ ಕೀಚ್ ಅವರೊಂದಿಗೆ ಆಗಮಿಸಿದ್ದರು.
810
Image Credit : Instagram
ಧೋನಿ-ಸಾಕ್ಷಿ ಕೂಡಾ ಭಾಗಿ
ಅರ್ಜುನ್-ಸಾನಿಯಾ ಅವರ ವಿವಾಹ ಸಮಾರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಕಾಣಿಸಿಕೊಂಡರು.
910
Image Credit : Instagram
ಪತ್ನಿ ಜತೆ ಮದುವೆಯಲ್ಲಿ ಕಾಣಿಸಿಕೊಂಡ ಇರ್ಫಾನ್ ಪಠಾಣ್
ಅರ್ಜುನ್-ಸಾನಿಯಾ ಮದುವೆಗೆ ಇರ್ಫಾನ್ ಪಠಾಣ್ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು.
1010
Image Credit : Instagram
ಗರ್ಲ್‌ಫ್ರೆಂಡ್ ಜತೆ ಬಂದ ಪೃಥ್ವಿ ಶಾ
ಕ್ರಿಕೆಟಿಗ ಪೃಥ್ವಿ ಶಾ ಅವರು ತಮ್ಮ ಗೆಳತಿ ಆಕೃತಿ ಜೊತೆ ಅರ್ಜುನ್ ತೆಂಡೂಲ್ಕರ್ ಮದುವೆಗೆ ಬಂದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

