Asianet Suvarna News Asianet Suvarna News

T20 World Cup: ಸೆಮೀಸ್‌ಗೆ ಲಗ್ಗೆ ಇಡಲು ಪಾಕ್‌ ಕಾತರ!

*ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಪಾಕಿಸ್ತಾನ 
*ಯುಎಇನಲ್ಲಿ (UAE) ಆಡಿರುವ ಕಳೆದ 14 ಪಂದ್ಯಗಳಲ್ಲಿ ಪಾಕ್ ಗೆಲುವು‌
*ಉಭಯ ತಂಡಗಳ ಟಿ20 ಮಾದರಿಯಲ್ಲಿ ಇದೇ ಮೊದಲ ಮುಖಾಮುಖಿ

Pakistan and Namibia are set to lock horns in T20 World Cup in Abu Dhabi
Author
Bengaluru, First Published Nov 2, 2021, 7:26 AM IST
  • Facebook
  • Twitter
  • Whatsapp

ಅಬು ಧಾಬಿ (ನ .2): ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಪಾಕಿಸ್ತಾನ (Pakistan) ತಂಡ ಮಂಗಳವಾರ (ನ .2) ನಮೀಬಿಯಾ (Namibia) ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲೂ ಗೆದ್ದು ಸೆಮೀಸ್‌ ಸ್ಥಾನ ಅಧಿಕೃತಗೊಳಿಸುವ ಕಾತರದಲ್ಲಿದೆ. ಉತ್ಕೃಷ್ಟಲಯದಲ್ಲಿರುವ ಬಾಬರ್‌ ಆಜಂ (Babar Azam) ಪಡೆ ಯುಎಇನಲ್ಲಿ (UAE) ಆಡಿರುವ ಕಳೆದ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ತನ್ನ ಅಜೇಯ ಓಟ ಮುಂದುವರಿಸಲು ಎದುರು ನೋಡುತ್ತಿದೆ.

ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

ಇನ್ನು ನಮೀಬಿಯಾ ತಾನಾಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋತಿದ್ದು, ಸೆಮೀಸ್‌ ರೇಸ್‌ನಲ್ಲಿ ಉಳಿಯಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಉಭಯ ತಂಡಗಳು ಟಿ20 ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಪಂದ್ಯ ಕುತೂಹಲ ಮೂಡಿಸಿದೆ.

ಸಂಭವನೀಯ ಆಟಗಾರರ ಪಟ್ಟಿ

ಪಾಕಿಸ್ತಾನ : ಮೊಹಮ್ಮದ್ ರಿಜ್ವಾನ್ (Mohammad Rizwan) , ಬಾಬರ್ ಅಜಮ್ (Babar Azam), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಮ್, ಶಾದಾಬ್ ಖಾನ್, ಹಸನ್ ಅಲಿ, ಹಾರಿಸ್ ರೌಫ್, ಶಾಹೀನ್ ಅಫ್ರಿದಿ

9 ತಿಂಗಳ ವಿರಾಟ್‌ ಮಗಳು ವಮಿಕಾಗೆ ಅತ್ಯಾಚಾರದ ಬೆದರಿಕೆ..! ಇದೇನಾ ಸಂಸ್ಕೃತಿ..?

ನಮೀಬಿಯಾ: ಕ್ರೇಗ್ ವಿಲಿಯಮ್ಸ್, ಮೈಕೆಲ್ ವ್ಯಾನ್ ಲಿಂಗೆನ್, ಝೇನ್ ಗ್ರೀನ್ (Zane Green), ಗೆರ್ಹಾರ್ಡ್ ಎರಾಸ್ಮಸ್ (Gerhard Erasmus), ಡೇವಿಡ್ ವೈಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್

ಪಿಚ್‌ ರಿಪೋರ್ಟ್‌

ಅಬುಧಾಬಿಯ (Abu Dhabi) ಪಿಚ್ ಯಾವುದೇ ರೀತಿಯಿಂದಲೂ ಬ್ಯಾಟಿಂಗ್‌ಗೆ (Batting) ಉತ್ತಮವಾಗಿಲ್ಲ. ವಿಶ್ವಕಪ್‌ನಲ್ಲಿನ ಮೊದಲ ಇನ್ನಿಂಗ್ಸ್ ಸ್ಕೋರ್ ಸರಾಸರಿ (Average) ಗಮನಿಸಿದರೆ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮವಲ್ಲ ಎಂಬುದನ್ನು ತೋರಿಸುತ್ತದೆ. ಇದಲ್ಲದೆ, ಈ ಮೈದಾನದಲ್ಲಿ 75 ಪ್ರತಿಶತ ಪಂದ್ಯಗಳನ್ನು ಚೇಸಿಂಗ್ ತಂಡಗಳೇ (Chasing Team)) ಗೆದ್ದಿವೆ. ಇಲ್ಲಿ 8 T20Is T20 ವಿಶ್ವಕಪ್ 2021ರ ಪಂದ್ಯಗಳ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್  ಕೇವಲ 128.

ದಕ್ಷಿಣ ಆಫ್ರಿಕಾಕ್ಕೆ ಸೆಮೀಸ್‌ ರೇಸಲ್ಲಿ ಉಳಿವ ಗುರಿ!

ಸತತ 2 ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದಕ್ಷಿಣ ಆಫ್ರಿಕಾ (South Africa) ತಂಡ ಮಂಗಳವಾರ ( (ನ. 2) ಬಾಂಗ್ಲಾದೇಶ (Bangladesh) ವಿರುದ್ಧ ಸೆಣಸಾಡಲಿದೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಎದುರು ನೋಡುತ್ತಿರುವ ಹರಿಣಗಳಿಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಬಾಂಗ್ಲಾದೇಶ ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, 4ನೇ ಸೋಲನ್ನು ತಪ್ಪಿಸುವ ಒತ್ತಡದಲ್ಲಿದೆ.

ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

T20 World Cup 2021 ಟೂರ್ನಿಯಲ್ಲಿ ಇಂಗ್ಲೆಂಡ್(England) ಮೊದಲ ತಂಡವಾಗಿ ಸೆಮಿಫೈನಲ್ (Semifinal) ಪ್ರವೇಶವನ್ನು ಖಚಿತಪಡಿಸಿದೆ. ಜೋಸ್ ಬಟ್ಲರ್(Jos buttler) ಆಕರ್ಷಕ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಇಂಗ್ಲೆಂಡ್, ಶ್ರೀಲಂಕಾ(Sri Lanka) ವಿರುದ್ಧ ರನ್ ಗೆಲುವು ದಾಖಲಿಸಿದೆ. ಸತತ 4 ಗೆಲುವು ದಾಖಲಿಸಿದ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಲಂಕಾ ಮಣಿಸಿ ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

Follow Us:
Download App:
  • android
  • ios