Asianet Suvarna News Asianet Suvarna News

T20 World Cup 2021: ಲಂಕಾ ಮಣಿಸಿ ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

  • ಸೆಮಿಫೈನಲ್ ಪ್ರವೇಶ ಖಚಿತ ಪಡಿಸಿದ ಇಂಗ್ಲೆಂಡ್
  • ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ 26 ರನ್ ಗೆಲುವು
  • ಬಟ್ಲರ್ ಅಬ್ಬರಕ್ಕೆ ಬೆಚ್ಚಿ ಬಿದ್ದ ಶ್ರೀಲಂಕಾ
T20 World Cup 2021 England almost confirms Semi final entry after beat srilanka by 26 runs ckm
Author
Bengaluru, First Published Nov 1, 2021, 11:19 PM IST

ಶಾರ್ಜಾ(ನ.01): T20 World Cup 2021 ಟೂರ್ನಿಯಲ್ಲಿ ಇಂಗ್ಲೆಂಡ್(England) ಮೊದಲ ತಂಡವಾಗಿ ಸೆಮಿಫೈನಲ್ (Semifinal) ಪ್ರವೇಶವನ್ನು ಖಚಿತಪಡಿಸಿದೆ. ಜೋಸ್ ಬಟ್ಲರ್(Jos buttler) ಆಕರ್ಷಕ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಇಂಗ್ಲೆಂಡ್, ಶ್ರೀಲಂಕಾ(Srilanka) ವಿರುದ್ಧ ರನ್ ಗೆಲುವು ದಾಖಲಿಸಿದೆ. ಸತತ 4 ಗೆಲುವು ದಾಖಲಿಸಿದ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

T20 World Cup: ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಸೋಲಿಗೆ ಕಾರಣವೇನು..?

ಜೋಸ್ ಬಟ್ಲರ್ ಸಿಡಿಸಿದ ಅಜೇಯ 101 ರನ್ ಹಾಗಾ ನಾಯಕ ಇಯಾನ್ ಮಾರ್ಗನ್ ಸಿಡಿಸಿದ 40 ರನ್ ನೆರವಿನಿಂದ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿತು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದ ಇಂಗ್ಲೆಂಡ್ ಬಟ್ಲರ್ ಸ್ಫೋಟಕ ಬ್ಯಾಟಿಂಗ್‌ನಿಂದ ಚೇತರಿಸಿಕೊಂಡಿತು. ಈ ಮೂಲಕ ಇಂಗ್ಲೆಂಡ್ 164 ರನ್ ಟಾರ್ಗೆಟ್ ನೀಡಿತು. 

ಬೃಹತ್ ಟಾರ್ಗೆಟ್ ಪಡೆದ ಶ್ರೀಲಂಕಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂಗ್ಲೆಂಡ್ ಬಲಿಷ್ಠ ಬೌಲಿಂಗ್ ದಾಳಿ ಎದುರು ಶ್ರೀಲಂಕಾಗೆ ಚೇಸಿಂಗ್ ಕಷ್ಟವಾಯಿತು. ಪಥುಮ್ ನಿಸಾಂಕ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಕುಸಾಲ್ ಪರೇರಾ 7 ರನ್ ಸಿಡಿಸಿ ಔಟಾದರು.

ಮೊಹಮ್ಮದ್ ಶಮಿ ನಿಂದಕರ ಬಾಯಿ ಮುಚ್ಚಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ನುಡಿ...!

ಚಾರಿತ್ ಅಸಲಂಕಾ 21 ರನ್ ಕಾಣಿಕೆ ನೀಡಿದರು. ಆದರೆ 34 ರನ್‌ಗೆ ಲಂಕಾ 3 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆವಿಷ್ಕೋ ಫರ್ನಾಂಡೋ ಲಂಕಾ ತಂಡಕ್ಕೆ ನೆರವಾಗಲಿಲ್ಲ. ಕೇವಲ 13 ರನ್ ಸಿಡಿಸಿ ಔಟಾದರು. ಕೊಂಚ ಹೋರಾಟ ನೀಡಿದ ಭಾನುಕ ರಾಜಪಕ್ಸೆ 26 ರನ್ ಸಿಡಿಸಿದರು.

ನಾಯಕ ದಸೂನ್ ಶನಕ ಹಾಗೂ ವಾವಿಂಡು ಹಸರಂಗ ಹೋರಾಟ ಲಂಕಾ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಶ್ರೀಲಂಕಾ ತಂಡದ ಚೇಸಿಂಗ್ ಮತ್ತಷ್ಟು ಕಠಿಣವಾಯಿತು. ಶ್ರೀಲಂಕಾ ಗೆಲುವಿಗೆ ಅಂತಿಮ 24 ಎಸೆತದಲ್ಲಿ 41 ರನನ್ ಅವಶ್ಯಕತೆ ಇತ್ತು. ಹಸರಂಗ ಹಾಗೂ ಶನಕಾ ಹೋರಾಟ ಲಂಕಾ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು.

ವಾವಿಂಡು ಹಸರಂಗ 34 ರನ್ ಸಿಡಿಸಿ ಔಟಾದರು. ದಸೂನ್ ಶನಕಾ 26 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಅಷ್ಟರಲ್ಲೇ ಶ್ರೀಲಂಕಾ ಸೋಲಿನ ಹಾದಿಯಲ್ಲಿ ಸಾಗಿತು. ಲಂಕಾ ಗೆಲುವಿಗೆ ಅಂತಿಮ 12 ಎಸೆತದಲ್ಲಿ 30 ರನ್ ಬೇಕಿತ್ತು. ದುಷ್ಮಂತ್ ಚಮೀರಾ 4 ರನ್ ಸಿಡಿಸಿ ಔಟಾದರು. ಚಮಿಕಾ ಕರುಣಾರತ್ನೆ ರನ್ ಸಿಡಿಸಲಿಲ್ಲ. 18.2 ಓವರ್‌ಗೆ ಲಂಕಾದ 9 ವಿಕೆಟ್ ಪತನಗೊಂಡಿತು. ಮಹೀಶಾ ತೀಕ್ಷನಾ ವಿಕೆಟ್ ಪತನದೊಂದಿಗೆ ಶ್ರೀಲಂಕಾ 19 ಓವರ್‌ಗಳಲ್ಲಿ 137 ರನ್‌ಗೆ ಆಲೌಟ್ ಆಯಿತು.

T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

ಇಂಗ್ಲೆಂಡ್ ತಂಡ 26 ರನ್ ಗೆಲುವು ದಾಖಲಿಸಿತು.  ಈ ಮೂಲಕ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿತು. ಈ ಗೆಲುವಿನೊಂದಿಗ ನಾಯಕ ಇಯಾನ್ ಮಾರ್ಗನ್ ಟಿ20ಯಲ್ಲಿ ಅತೀ ಹೆಚ್ಚು ಗೆಲುವು ಸಾಧಿಸಿದಿ ನಾಯಕ ಅನ್ನೋ ದಾಖಲೆ ಬರೆದರು

ಟಿ20ಯಲ್ಲಿ ಗರಿಷ್ಠ ಗೆಲುವು ದಾಖಲಿಸಿದ ನಾಯಕ
ಇಯಾನ್ ಮಾರ್ಗನ್ 43 (68  ಪಂದ್ಯ)
ಅಸ್ಗರ್ ಅಫ್ಘಾನ್ 42 (52 ಪಂದ್ಯ)
ಎಂ.ಎಸ್.ಧೋನಿ 42 (72 ಪಂದ್ಯ)
ಸರ್ಫರಾಜ್ ಅಹಮ್ಮದ್ 29 (37 ಪಂದ್ಯ)
ವಿರಾಟ್ ಕೊಹ್ಲಿ 29 (47 ಪಂದ್ಯ)

ಅಂಕಪಟ್ಟಿ:
ಶ್ರೀಲಂಕಾ ವಿರುದ್ಧದ ಗೆಲುವಿನ ಬಳಿಕ ಇಂಗ್ಲೆಂಡ್ ತಂಡ 8 ಅಂಕ ಸಂಪಾದಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಸತತ 4 ಗೆಲುವಿನ ಮೂಲಕ ಇಂಗ್ಲೆಂಡ್ ತಂಡದ ಸೆಮಿಫೈನಲ್ ಕನಸು ಕೈಗೂಡಿದೆ. ಇತ್ತ ಶ್ರೀಲಂಕಾ ಮತ್ತೊಂದು ಸೋಲಿಗೆ ಗುರಿಯಾಯಿತು. ಈ ಮೂಲಕ ಶ್ರೀಲಂಕಾ ಆಡಿದ 4 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿದೆ.  

Follow Us:
Download App:
  • android
  • ios