ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಎದುರು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಮುಂಬೈ(ನ.24): 2023ರ ಐಸಿಸಿ ಏಕದಿನ ವಿಶ್ವಕಪ್ ಟೀವಿ ವೀಕ್ಷಣೆಯಲ್ಲೂ ಹೊಸ ದಾಖಲೆ ಬರೆದಿದೆ. ನ.19ರಂದು ನಡೆದ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಒಟ್ಟು 30 ಕೋಟಿ ಮಂದಿ ವೀಕ್ಷಿಸಿದರು ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಯಾವುದೇ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾದ ಗರಿಷ್ಠ ವೀಕ್ಷಕರ ದಾಖಲೆಯಾಗಿದೆ. ಇನ್ನು ಇಡೀ ಟೂರ್ನಿಯನ್ನು ಟೀವಿಯಲ್ಲಿ ಒಟ್ಟು ಸುಮಾರು 52 ಕೋಟಿ (51.8 ಕೋಟಿ) ಮಂದಿ ವೀಕ್ಷಿಸಿದರು ಎಂದು ಸಂಸ್ಥೆಯು ತಿಳಿಸಿದೆ.

ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಫೈನಲ್ ಪಂದ್ಯವನ್ನು ಏಕಕಾಲಕ್ಕೆ 5.9 ಕೋಟಿ ಮಂದಿ ವೀಕ್ಷಿಸಿದ್ದು, ಡಿಜಿಟಲ್‌ನಲ್ಲಿ ಇದು ಕೂಡ ಹೊಸ ದಾಖಲೆ ಎನಿಸಿದೆ. ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಎದುರು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಪಿಚ್ ಬಗ್ಗೆ ನಮಗಿಂತ ಚೆನ್ನಾಗಿ ಆಸ್ಟ್ರೇಲಿಯಾಗೆ ಗೊತ್ತಿತ್ತು: ರವಿಚಂದ್ರನ್ ಅಶ್ವಿನ್

ಮುಂಬೈ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬಳಸಲಾದ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಪಿಚ್ ಬಗ್ಗೆ ಭಾರತ ತಂಡಕ್ಕಿಂತ ಆಸ್ಟ್ರೇಲಿಯಾಗೆ ಉತ್ತಮವಾಗಿ ತಿಳಿದಿತ್ತು ಎಂದು ಭಾರತದ ತಾರಾ ಆಲ್ರೌಂಡರ್ ಆರ್. ಅಶ್ವಿನ್ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿರುವ ಅವರು, ‘ಆಸೀಸ್ ಎಷ್ಟರ ಮಟ್ಟಿಗೆ ಭಾರತೀಯ ಪಿಚ್‌ಗಳ ಬಗ್ಗೆ ಅಧ್ಯಯನ ನಡೆಸಿದೆ ಎನ್ನುವ ವಿಷಯ ನನ್ನನ್ನು ಬೆರಗಾಗಿಸಿತು’ ಎಂದಿದ್ದಾರೆ. 

ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಕ್ವಾರ್ಟರ್‌ಗೆ ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಲಗ್ಗೆ

‘ಮೊದಲ ಇನ್ನಿಂಗ್ಸ್ ಬಳಿಕ ಪಿಚ್ ಶಿಥಿಲಗೊಳ್ಳುತ್ತಿದೆಯೇ ಎಂದು ನಾನು ಪರಿಶೀಲಿಸುತ್ತಿದ್ದೆ. ಈ ವೇಳೆ ತಂಡದ ಪ್ರಧಾನ ಆಯ್ಕೆಗಾರ ಜಾರ್ಜ್ ಬೈಲಿಯನ್ನು ಸಾಮಾನ್ಯವಾಗಿ ದೊಡ್ಡ ಪಂದ್ಯಗಳಲ್ಲಿ ಆಸೀಸ್ ಮೊದಲು ಬ್ಯಾಟ್ ಮಾಡುತ್ತದೆ. ಈ ಪಂದ್ಯದಲ್ಲಿ ಏಕೆ ಮೊದಲು ಬೌಲ್ ಮಾಡಿದಿರಿ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ನಾವಿಲ್ಲಿ ಐಪಿಎಲ್ ಹಾಗೂ ದ್ವಿಪಕ್ಷೀಯ ಸರಣಿಗಳನ್ನು ಆಡಿದ್ದೇವೆ. ನಮ್ಮ ಅನುಭವದ ಪ್ರಕಾರ, ಕೆಂಪು ಮಣ್ಣಿನ ಪಿಚ್ ಶಿಥಿಲಗೊಳ್ಳಲಿದೆ. ಆದರೆ ಕಪ್ಪು ಮಣ್ಣಿನ ಪಿಚ್‌ನಲ್ಲಿ ಪಂದ್ಯ ಸಾಗಿದಂತೆ ಬ್ಯಾಟ್ ಮಾಡಲು ಅನುಕೂಲವಾಗಲಿದೆ. ಕೆಂಪು ಮಣ್ಣಿನ ಪಿಚ್ ಗಳಲ್ಲಿ ಇಬ್ಬನಿಯ ಪರಿಣಾಮ ಹೆಚ್ಚಿರುವುದಿಲ್ಲ. ಆದರೆ ಕಪ್ಪು ಮಣ್ಣಿನ ಪಿಚ್ ಗಳಲ್ಲಿ ಮಧ್ಯಾಹ್ನದ ವೇಳೆ ಚೆಂಡು ಸ್ಪಿನ್ ಆಗಲಿದ್ದು, ಸಂಜೆಯಾಗುತ್ತಲೇ ಇಬ್ಬನಿ ಬೀಳುವಾಗ ಮಣ್ಣು ತೇವಾಂಶ ಹಿಡಿದಿಟ್ಟುಕೊಳ್ಳಲಿದೆ. ಪಿಚ್ ಸಿಮೆಂಟ್‌ನಂತೆ ಗಟ್ಟಿಯಾಗಲಿದೆ. ಇದರಿಂದಾಗಿ ಬೌಲ್ ಮಾಡುವ ತಂಡಕ್ಕೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಕಷ್ಟ ಎಂದರು. ಅವರ ಮಾತುಗಳು ನನ್ನನ್ನು ಮೂಖಃವಿಸ್ಮಿತಗೊಳಿಸಿತು’ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ ನಿರಾಸಕ್ತಿ?

ಭಾರತ-ಆಸ್ಟ್ರೇಲಿಯಾ ಟಿ20: ಬೆಂಗಳೂರಿನ ಪಂದ್ಯದ ಟಿಕೆಟ್ ಸೇಲ್ ಡಿಸೆಂಬರ್ 05ರಿಂದ ಆರಂಭ

ಬೆಂಗಳೂರು: ಡಿ.3ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್ ಮಾರಾಟ ಆನ್‌ಲೈನ್ ನಲ್ಲಿ ನ.25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ. ಆನ್‌ಲೈನ್ ನಲ್ಲಿ ಖರೀದಿಸಿದ ಟಿಕೆಟ್‌ನ ಪ್ರತಿಗಳನ್ನು ನ.30-ಡಿ.1ರವರೆಗೂ ಕ್ರೀಡಾಂಗಣದ ಬಳಿ ಇರುವ ಕೌಂಟರ್‌ಗಳಲ್ಲಿ ಪಡೆಯಬಹುದು ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ.