ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‌ಗೆ ಪ್ರಣಯ್, ಸಾತ್ವಿಕ್-ಚಿರಾಗ್ ಲಗ್ಗೆ
ವಿಶ್ವ ನಂ.5 ಪ್ರಣಯ್ ಗುರುವಾರ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ನೆಸೆನ್ ವಿರುದ್ಧ 21-12, 21-18ರಲ್ಲಿ ಗೆಲುವು ಪಡೆದಿದ್ದು, ಅಂತಿಮ 8ರ ಸುತ್ತಿನಲ್ಲಿ ಜಪಾನ್‌ನ ಕೊಡಾಯಿ ನರೋಕಾ ಸವಾಲು ಎದುರಾಗಲಿದೆ.
ಶೆನ್‌ಝೆನ್(ಚೀನಾ): ಇಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಎಚ್.ಎಸ್.ಪ್ರಣಯ್, ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ವಿಶ್ವ ನಂ.5 ಪ್ರಣಯ್ ಗುರುವಾರ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ನೆಸೆನ್ ವಿರುದ್ಧ 21-12, 21-18ರಲ್ಲಿ ಗೆಲುವು ಪಡೆದಿದ್ದು, ಅಂತಿಮ 8ರ ಸುತ್ತಿನಲ್ಲಿ ಜಪಾನ್‌ನ ಕೊಡಾಯಿ ನರೋಕಾ ಸವಾಲು ಎದುರಾಗಲಿದೆ. ಇನ್ನು, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಜಪಾನ್ ಅಕೀರಾ ಕೊಗಾ-ತೈಚಿ ಸಾಯಿಟೊ ವಿರುದ್ಧ 21-15, 21-16ರಲ್ಲಿ ಜಯಗಳಿಸಿದರು.
ಮಹಿಳಾ ಫುಟ್ಬಾಲ್: ರಾಜ್ಯ ತಂಡಕ್ಕೆ 8-0 ಭರ್ಜರಿ ಜಯ
ಬೆಂಗಳೂರು: ನಗರದಲ್ಲಿ ಆರಂಭಗೊಂಡ 2023-24ರ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಗುರುವಾರ ನಡೆದ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಆತಿಥೇಯ ತಂಡ 8-0 ಗೋಲುಗಳಿಂದ ಜಯಗಳಿಸಿತು. ರಾಜ್ಯದ ಪರ ಮೊನಾಲಿಸಾ 15ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆಗೆ ಕಾರಣರಾದರು. ಬಳಿಕ ರಾಜ್ಯ ಗೋಲಿನ ಸುರಿಮಳೆ ಸುರಿಸಿತು. ಕಾವ್ಯಾ 4 ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಮೊನಾಲಿಸಾ 2, ರೋಸಿ, ಐಶ್ವರ್ಯಾ ತಲಾ 1 ಗೋಲು ದಾಖಲಿಸಿದರು. ರಾಜ್ಯ ತಂಡ ಮುಂದಿನ ಪಂದ್ಯದಲ್ಲಿ ಶನಿವಾರ ಅಸ್ಸಾಂ ವಿರುದ್ಧ ಸೆಣಸಲಿದೆ.
ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ನಿರಾಸಕ್ತಿ?
ಬೆಂಗಳೂರು ಎಫ್‌ಸಿ ಚಾಂಪಿಯನ್
ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಆಯೋಜಿಸಿದ ಸೂಪರ್ ಡಿವಿಶನ್ ಫುಟ್ಬಾಲ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಎಫ್‌ಸಿ(ಮೀಸಲು ತಂಡ) ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡ 18 ಪಂದ್ಯಗಳಲ್ಲಿ 16 ರಲ್ಲಿ ಜಯ, 2ರಲ್ಲಿ ಡ್ರಾದೊಂದಿಗೆ ಅಜೇಯವಾಗಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ರನ್ನರ್-ರಪ್ ಎನಿಸಿಕೊಂಡಿತು. ವಿಜೇತ ತಂಡಗಳಿಗೆ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ಟ್ರೋಫಿ ಹಸ್ತಾಂತರಿಸಲಾಯಿತು.
ಮಹಿಳಾ ಟೆನಿಸ್ ಟೂರ್ನಿ: ಕ್ವಾರ್ಟರ್‌ಗೆ ಋತುಜಾ
ಬೆಂಗಳೂರು: ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಭಾರತದ ತಾರಾ ಟೆನಿಸ್ ಆಟಗಾರ್ತಿ ಋತುಜಾ ಭೋಸ್ಲೆ ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಅಂತಿಮ ಎಸೆತದಲ್ಲಿ ರಿಂಕು ಸಿಕ್ಸರ್‌ಗೆ ಆಸ್ಟ್ರೇಲಿಯಾ ಪಂಚರ್, ವಿಶ್ವಕಪ್ ಸೋಲಿಗೆ ಮುಲಾಮ ಹಚ್ಚಿದ ಗೆಲುವು!
ನಗರದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಪ್ರಿ ಕ್ವಾರ್ಟರ್‌ನಲ್ಲಿ ಭಾರತದವರೇ ಆದ ಪ್ರಾಂಜಲಾ ಯಡ್ಲಪಲ್ಲಿ ವಿರುದ್ದ 6-4, 6-3 ಅಂತರದಲ್ಲಿ ಗೆಲುವು ಸಾಧಿಸಿದರು. ವೈಷ್ಣವಿ ಆಡ್ಕರ್, ಜೀಲ್ ದೇಸಾಯಿ, ಡಿಲೆಟ್ಟಾ ಚೆರುಬಿನಿ, ಥಾಯ್ಲೆಂಡ್‌ನ ಲಾನ್‌ಲನಾ ಕಜಕಸ್ತಾನದ ನಿಗಿನಾ, ಜರ್ಮನಿಯ ಅಂಥೋನಿಯಾ ಸ್ಮಿತ್ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು. ಡಬಲ್ಸ್‌ನಲ್ಲಿ ಋತುಜಾ-ಕಜಕಸ್ತಾನದ ಝಿಕೆಬ್. ರಶ್ಮಿಕಾ-ವೈದೇಹಿ ಸೆಮಿಫೈನಲ್‌ಗೇರಿದರು.