2021ರ ಟಿ20 ವಿಶ್ವಕಪ್‌ ಬಳಿಕ ದ್ರಾವಿಡ್‌ ಕೋಚ್‌ ಹುದ್ದೆಗೇರಿದ್ದು, ಕಳೆದ ವಾರ ವಿಶ್ವಕಪ್‌ ಫೈನಲ್‌ನೊಂದಿಗೆ ಅವರ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ. ಆದರೆ ಭಾರತದ ಕೋಚ್‌ ಹುದ್ದೆಯಲ್ಲಿ ಮುಂದುವರಿಯದಿರಲು ದ್ರಾವಿಡ್ ನಿರ್ಧರಿಸಿದ್ದು, ಈ ಬಗ್ಗೆ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ.

ನವದೆಹಲಿ(ನ.24): ಟೀಂ ಇಂಡಿಯಾ ಕೋಚ್‌ ಆಗಿ ಮುಂದುವರಿಯಲು ರಾಹುಲ್‌ ದ್ರಾವಿಡ್‌ ನಿರಾಸಕ್ತಿ ತೋರಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ನೂತನ ಪ್ರಧಾನ ಕೋಚ್‌ ಸ್ಥಾನಕ್ಕೆ ವಿವಿಎಸ್‌ ಲಕ್ಷ್ಮಣ್‌ ನೇಮಕಗೊಳ್ಳುವ ನಿರೀಕ್ಷೆಯಿದೆ.

2021ರ ಟಿ20 ವಿಶ್ವಕಪ್‌ ಬಳಿಕ ದ್ರಾವಿಡ್‌ ಕೋಚ್‌ ಹುದ್ದೆಗೇರಿದ್ದು, ಕಳೆದ ವಾರ ವಿಶ್ವಕಪ್‌ ಫೈನಲ್‌ನೊಂದಿಗೆ ಅವರ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ. ಆದರೆ ಭಾರತದ ಕೋಚ್‌ ಹುದ್ದೆಯಲ್ಲಿ ಮುಂದುವರಿಯದಿರಲು ದ್ರಾವಿಡ್ ನಿರ್ಧರಿಸಿದ್ದು, ಈ ಬಗ್ಗೆ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅವರು ಐಪಿಎಲ್‌ ತಂಡವೊಂದರ ಕೋಚ್‌ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Reports: ಐಪಿಎಲ್‌ ಕೋಚಿಂಗ್‌ನತ್ತ ಕಣ್ಣಿಟ್ಟ ದ್ರಾವಿಡ್‌, ಟೀಮ್‌ ಇಂಡಿಯಾಗೆ ವಿವಿಎಸ್‌ ಹೊಸ ಕೋಚ್‌?

ಇನ್ನು, ಲಕ್ಷ್ಮಣ್‌ ಎನ್‌ಸಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಭಾರತದ ಕೋಚ್‌ ಆಗಿದ್ದಾರೆ. ಮುಂದಿನ ತಿಂಗಳ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ದೀರ್ಘಾವಧಿ ಕೋಚ್‌ ಆಗಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಟಿ20ಗೆ ರೋಹಿತ್‌ ಶೀಘ್ರದಲ್ಲೇ ಗುಡ್‌ಬೈ?

ನವದೆಹಲಿ: ಭಾರತ ಟೆಸ್ಟ್‌ ಹಾಗೂ ಏಕದಿನ ತಂಡಗಳ ನಾಯಕ ರೋಹಿತ್‌ ಶರ್ಮಾ, ಸದ್ಯದಲ್ಲೇ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದ್ದು, 2024ರ ಟಿ20 ವಿಶ್ವಕಪ್‌ನಲ್ಲಿ ಅವರು ಆಡುವುದಿಲ್ಲ ಎನ್ನಲಾಗುತ್ತಿದೆ. 2022ರ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ರೋಹಿತ್‌ ಭಾರತ ಪರ ಟಿ20 ಪಂದ್ಯವನ್ನಾಡಿಲ್ಲ. ಏಕದಿನ ವಿಶ್ವಕಪ್‌ಗೂ ಮೊದಲೇ ಬಿಸಿಸಿಐ ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಜೊತೆ ರೋಹಿತ್‌ ಚರ್ಚೆ ನಡೆಸಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಅಂತಿಮ ಎಸೆತದಲ್ಲಿ ರಿಂಕು ಸಿಕ್ಸರ್‌ಗೆ ಆಸ್ಟ್ರೇಲಿಯಾ ಪಂಚರ್, ವಿಶ್ವಕಪ್ ಸೋಲಿಗೆ ಮುಲಾಮ ಹಚ್ಚಿದ ಗೆಲುವು!

‘ರೋಹಿತ್‌ ಕಳೆದೊಂದು ವರ್ಷದಿಂದ ಅಂ.ರಾ. ಟಿ20 ಆಡಿಲ್ಲ. ಅವರ ಸಂಪೂರ್ಣ ಗಮನ ಏಕದಿನ ವಿಶ್ವಕಪ್‌ ಮೇಲಿತ್ತು. ಈ ಸಂಬಂಧ ಅಗರ್ಕರ್‌ ಜೊತೆ ರೋಹಿತ್‌ ಸುದೀರ್ಘ ಚರ್ಚೆ ನಡೆಸಿದ್ದು, ಅಂ.ರಾ.ಟಿ20ಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಲು ಅವರು ಇಚ್ಛಿಸಿದ್ದಾರೆ. ಈ ನಿರ್ಧಾರ ಸಂಪೂರ್ಣವಾಗಿ ಹಿತ್‌ರದ್ದೇ. ಕ್ರಿಕೆಟ್‌ ಬೋರ್ಡ್‌ನಿಂದ ಯಾವುದೇ ಒತ್ತಡವಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಭಾರತ-ಆಸೀಸ್‌ ಟಿ20: ಬೆಂಗಳೂರಿನ ಪಂದ್ಯದ ಟಿಕೆಟ್‌ ಸೇಲ್‌ ನಾಳೆ ಶುರು

ಬೆಂಗಳೂರು: ಡಿ.3ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್‌ ಮಾರಾಟ ಆನ್‌ಲೈನ್‌ನಲ್ಲಿ ನ.25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ. ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ನ ಪ್ರತಿಗಳನ್ನು ನ.30, ಡಿ.1 ಹಾಗೂ ಡಿ.2ರಂದು ಕ್ರೀಡಾಂಗಣದ ಬಳಿ ಇರುವ ಕೌಂಟರ್‌ಗಳಲ್ಲಿ ಪಡೆಯಬಹುದು ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ.