ಪಾಕಿಸ್ತಾನ ಅಭಿಮಾನಿಗಳು ಮಾತ್ರವಲ್ಲ, ಅಫ್ರಿದಿ ಕೂಡ ಪುಡಿ ಮಾಡಿದ್ದಾರೆ TV
ಭಾರತ ವಿರುದ್ಧದ ಪಂದ್ಯ ಸೋತ ಬಳಿಕ ಪಾಕಿಸ್ತಾನ ಅಭಿಮಾನಿಗಳು ಟಿವಿ ಪುಡಿ ಮಾಡಿರುವುದು ಹಲವು ಬಾರಿ ವರದಿಯಾಗಿದೆ. ಸೋಲು, ಗೆಲುವು ಇದ್ದಿದ್ದೆ, ಟಿವಿ ಪುಡಿ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯೇ ಸಿಟ್ಟಿನಿಂದ ಟಿವಿ ಪುಡಿ ಮಾಡಿದ್ದಾರೆ. ಈ ಕುರಿತು ಅಫ್ರಿದಿಯೇ ಹೇಳಿದ್ದಾರೆ, ಕೇಳಿ.
ಕರಾಚಿ(ಡಿ.30): ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಭಿಮಾನಿಗಳಿಗೆ ಯುದ್ದಕ್ಕಿಂತ ಮಿಗಿಲು. ಕ್ರಿಕೆಟಿಗರೇ ಆಗರಲಿ, ಅಭಿಮಾನಿಗಳೇ ಇರಲಿ, ಇಲ್ಲಿ ಯಾರೂ ಕೂಡ ಸೋಲನ್ನ ಸಹಿಸುವುದಿಲ್ಲ. ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಾರೆ. ಇನ್ನು ಫಲಿತಾಂಶ ಹೊರಬಿದ್ದ ಬಳಿಕ ಸೋತವರ ಆಕ್ರೋಶ ವಿವರಿಸಲು ಅಸಾಧ್ಯ. ವಿಶ್ವಕಪ್ ಟೂರ್ನಿ ಪಂದ್ಯದ ಬಳಿಕ ಪಾಕಿಸ್ತಾನ ಅಭಿಮಾನಿಗಳು ಟಿವಿ ಪುಡಿ ಮಾಡಿದ ಸುದ್ದಿ ಸಾಮಾನ್ಯ. ಹೊಸತು ಏನಪ್ಪಾ ಅಂದರೆ, ಪಾಕಿಸ್ತಾನ ಅಭಿಮಾನಿಗಳು ಮಾತ್ರವಲ್ಲ, ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡ ಟಿವಿ ಪುಡಿ ಮಾಡಿದ್ದಾರೆ.
ಇದನ್ನೂ ಓದಿ: ಹಿಂದು ಕನೇರಿಯಾಗೆ ಪಾಕ್ ಕ್ರಿಕೆಟ್ ತಂಡದಿಂದ ಧಾರ್ಮಿಕ ಕಿರುಕುಳ!
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಟಿವಿ ಪುಡಿ ಮಾಡಿರುವುದು ಪಂದ್ಯದ ಫಲಿತಾಂಶದಿಂದ ಅಲ್ಲ. ಬದಲಾಗಿ ಶಾಹಿದ್ ಅಫ್ರಿದಿಯನ್ನು ಮಗಳು ಭಾರತೀಯ ಸಂಪ್ರದಾಯದಂತೆ ಆರತಿ ಎತ್ತಿ ಸ್ವಾಗತ ಮಾಡಿದ ಕಾರಣಕ್ಕೆ ಅಫ್ರಿದಿ ಟಿವಿಯನ್ನು ಪುಡಿ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ:ಹಿಂದೂ ಅನ್ನೋ ಕಾರಣಕ್ಕೆ ತುಳಿದರು, ಪ್ರಧಾನಿಗೆ ಮನವಿ ಮಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!
ಸಂದರ್ಶನವೊಂದರಲ್ಲಿ ಶಾಹಿದ್ ಅಫ್ರಿದಿಗೆ ಟಿವಿ ಪುಡಿ ಮಾಡಿದ್ದೀರಾ ಎಂದು ನಿರೂಪಕಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಫ್ರಿದಿ, ಹೌದು, ನಾನು ಪದೇ ಪದೇ ಪತ್ನಿಗೆ ಹೇಳುತ್ತಿದ್ದೆ. ಮಕ್ಕಳಿರುವಾಗ ಟಿವಿ ನೋಡಬೇಡ. ಮಕ್ಕಳಿಗೆ ಟಿವಿ ತೋರಿಸಬೇಡಿ ಎಂದಿದ್ದೆ. ಆದರೆ ಪತ್ನಿ ಸೀರಿಯಲ್ ನೋಡುವದರಲ್ಲೇ ಬ್ಯುಸಿ. ಒಂದು ಬಾರಿ ನಾನು ರೂನಿಂದ ಹೊರಗೆ ಬಂದಾಗ ಟಿವಿಯಲ್ಲಿ ಭಾರತದ ಧಾರವಾಹಿ ಪ್ರಸಾರವಾಗುತ್ತಿತ್ತು. ಇದರಲ್ಲಿನ ಆರತಿ ಸೀನ್ ಅನುಕರಣೆ ಮಾಡಿ, ನನಗೆ ಆರತಿ ಮೂಲಕ ಸ್ವಾಗತ ಮಾಡಿದಳು. ಸಿಟ್ಟಿನಿಂದ ನಾನು ಟಿವಿಯನ್ನೇ ಪುಡಿ ಮಾಡಿದೆ ಎಂದು ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ: ಕಿರುಕುಳ ಕೊಟ್ಟರೂ ಹಿಂದು ಧರ್ಮ ತ್ಯಜಿಸಲು ಮನಸ್ಸಾಗಲಿಲ್ಲ: ಪಾಕ್ ಕ್ರಿಕೆಟಿಗ
ಸಂದರ್ಶನದಲ್ಲಿ ಅಫ್ರಿದಿ ಮಾತಿಗೆ ನೆರೆದಿದ್ದವರು ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಇದು ಶಾಹಿದ್ ಅಫ್ರಿದಿಯ ಹಳೇ ಸಂದರ್ಶನದ ವಿಡಿಯೋ. ಈ ವಿಡಿಯೋ ಮತ್ತೆ ಸದ್ದು ಮಾಡಲು ಕಾರಣವೂ ಇದೆ. ಈಗಾಗಲೇ ಪಾಕಿಸ್ತಾನ ಮಾಜಿ ವೇಗಿ, ನಿಷೇಧಿತ ಕ್ರಿಕೆಟಿಗ ದಾನೀಶ್ ಕನೇರಿಯಾ ಹಿಂದೂ ಆದರ ಕಾರಣ ಪಾಕ್ ತಂಡದಲ್ಲಿ ಕಿರುಕುಳ ನೀಡಲಾಯಿತು ಎಂದಿದ್ದರು. ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಲಾಗುತ್ತಿದೆ ಅನ್ನೋ ಚರ್ಚೆ ಜೋರಾಗಿದೆ.
ಭಾರತದಲ್ಲಿ ಭದ್ರತೆಯೇ ಇಲ್ಲ, ಪಾಕಿಸ್ತಾನ ಅತ್ಯಂತ ಸುರಕ್ಷಿತ ದೇಶ; ಪಿಸಿಬಿ ಮುಖ್ಯಸ್ಥ!
ಹಿಂದೂ, ಹಿಂದೂ ಸಂಪ್ರದಾಯ ಕುರಿತು ಪಾಕ್ ಬಹುಸಂಖ್ಯಾತರ ಮನದಲ್ಲೇನಿದೆ ಅನ್ನೋದನ್ನು ತಿಳಿ ಹೇಳಲು ಈ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ. ಹಿಂದೂಗಳನ್ನು ಮಾತ್ರವಲ್ಲ, ಹಿಂದೂ ಆಚಾರ ವಿಚಾರ ಅನುಸರಿಸಿದರೂ ಯಾರೇ ಆದರೂ ಅಪಾಯ ತಪ್ಪಿದ್ದಲ್ಲ ಅನ್ನೋ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.