ಭಾರತದಲ್ಲಿ ಭದ್ರತೆಯೇ ಇಲ್ಲ, ಪಾಕಿಸ್ತಾನ ಅತ್ಯಂತ ಸುರಕ್ಷಿತ ದೇಶ; ಪಿಸಿಬಿ ಮುಖ್ಯಸ್ಥ!

ಭಯೋತ್ಪಾದಕರ ದಾಳಿಯಿಂದ 10 ವರ್ಷಗಳ ಬಳಿಕ ಪಾಕಿಸ್ತಾನ ತನ್ನ ನೆಲದಲ್ಲಿ ಟೆಸ್ಟ್ ಸರಣಿ ಆಯೋಜಿಸಿದೆ. ಈ ಸರಣಿ ಬಳಿಕ ಪಾಕಿಸ್ತಾನದ ವರಸೆ ಬದಲಾಗಿದೆ. ಇದೀಗ ಭಾರತದಲ್ಲಿ ಅಭದ್ರತೆ ಕಾಡುತ್ತಿದೆ. ಪಾಕಿಸ್ತಾನ ಅತ್ಯಂತ ಸುರಕ್ಷಿತ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳುತ್ತಿದೆ.

Security risk in India but pakistan safest country says PCB  chairman

ಕರಾಚಿ(ಡಿ.23): ಉಗ್ರರನ್ನು ಪೋಷಿಸಿ  ಬೆಳೆಸುತ್ತಿರುವ ಪಾಕಿಸ್ತಾನ ಇನ್ನು ಬುದ್ದಿ ಕಲಿತಿಲ್ಲ. ಪ್ರತಿ ಬಾರಿ ಕೂಡ ಉಗ್ರರು ಎಂದ ತಕ್ಷಣ ಭಾರತದತ್ತ ಬೊಟ್ಟು ಮಾಡುತ್ತಿರುವ ಪಾಕಿಸ್ತಾನ ಇದೀಗ ವಿವಾದಾತ್ಮಕ ಹೇಳಿಕೆ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಯೋಜಿಸಲು ಪಾಕಿಸ್ತಾನ ಅತ್ಯಂತ ಸುರಕ್ಷಿತ ದೇಶ. ಭಾರತದಲ್ಲಿ ಭದ್ರತೆ ಇಲ್ಲ ಎಂದು ಪಾಕಿಸ್ತಾನ ಕ್ರಿಕಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಾನಿ ಹೇಳಿದ್ದಾರೆ.

ಇದನ್ನೂ ಓದಿ: ಕಟಕ್‌ನಲ್ಲಿ ವಿಂಡೀಸ್ ಉಡೀಸ್; ಏಕದಿನ ಸರಣಿ ಗೆದ್ದು ದಾಖಲೆ ಬರೆದ ಭಾರತ!

2009ರ ಭಯೋತ್ಪಾದಕ ದಾಳಿ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ತನ್ನ ತವರು ನೆಲದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಯೋಜಿಸಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಟೆಸ್ಟ್ ಆಯೋಜಿಸಿದ ಪಾಕಿಸ್ತಾನ ಇದೀಗ ಅತ್ಯಂತ ಸುರಕ್ಷಿತ ದೇಶ ಎಂದು ಬೊಬ್ಬಿರಿಯುತ್ತಿದೆ. 

ಇದನ್ನೂ ಓದಿ: 300+ ಚೇಸಿಂಗ್; ಟೀಂ ಇಂಡಿಯಾ ನಂ.1!

ಶ್ರೀಲಂಕಾ ತಂಡವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲು ಹಲವು ಕಸರತ್ತು ನಡೆಸಿತ್ತು. ನರಕ ಪ್ರವಾಸಕ್ಕೆ ಶ್ರೀಲಂಕಾ ಹಿರಿಯ ಕ್ರಿಕೆಟಿಗರಾದ ಲಸಿತ್ ಮಲಿಂಗಾ ಸೇರಿದಂತೆ ಪ್ರಮುಖರು ನಿರಾಕರಿಸಿದ್ದರು. ಯುವ ಕ್ರಿಕೆಟಿರ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಲಂಕಾ ವಿರುದ್ದ 2 ಟೆಸ್ಟ್ ಪಂದ್ಯದ ಬಳಿಕ ಪಾಕಿಸ್ತಾನದ ವರಸೆ ಬದಲಾಗಿದೆ. 

ಇದನ್ನೂ ಓದಿ: 22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

ಭಾರತದಲ್ಲಿ ಭದ್ರತೆ ಇಲ್ಲ. ಕ್ರಿಕೆಟಿಗರು ಭಾರತ ಪ್ರವಾಸ ಮಾಡಲು ಸುರಕ್ಷಿತವಲ್ಲ ಎಂದು ಪಾಕಿಸ್ತಾನ ಮುಖ್ಯಸ್ಥ ಹೇಳಿದ್ದಾರೆ. ಭಯೋತ್ಪಾದಕರ ದೇಶ ಇನ್ನು ಎಲ್ಲಾ ತಂಡಗಳನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. 10 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಸರಣಿ ನಡೆದಿರಲಿಲ್ಲ. ಇದೀಗ ಭಾರತವನ್ನು ಬೊಟ್ಟು ಮಾಡುತ್ತಿದೆ. 

Latest Videos
Follow Us:
Download App:
  • android
  • ios