Asianet Suvarna News Asianet Suvarna News

KPL ಕ್ರಿಕೆಟ್ ಫಿಕ್ಸಿಂಗ್; ಪುತ್ರನ ಮೇಲಿನ ಆರೋಪಕ್ಕೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ!

ಕೆಪಿಎಲ್ ಟೂರ್ನಿ ಫಿಕ್ಸಿಂಗ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಒತ್ತಡದ ಕರೆಗಳು ಬರುತ್ತಿವೆ ಅನ್ನೋದನ್ನು ಸ್ವತಃ ಪೊಲೀಸರೇ ಬಹಿರಂಗ ಪಡಿಸಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಬೊಮ್ಮಾಯಿ ಪುತ್ರನ ಮೇಲೂ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸ್ವತಃ ಗೃಹ ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ. 
 

No pressure for police to inquiry kpl fixing confirms Home minister basavaraj bommai
Author
Bengaluru, First Published Nov 20, 2019, 1:44 PM IST

ಮೈಸೂರು(ನ.20): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(KPL) ನಡೆದಿರುವ ಫಿಕ್ಸಿಂಗ್ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿತ್ತು, ಇದೀಗ ಹನಿ ಟ್ರಾಪ್ ಮೂಲಕ ಆಟಾಗಾರರನ್ನು ಫಿಕ್ಸಿಂಗ್ ಖೆಡ್ಡಾಗೆ ಬೀಳಿಸಲಾಗಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪುತ್ರನ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: ಕೆಪಿಎಲ್‌ ಫಿಕ್ಸಿಂಗ್‌: ರಾಜ್ಯ ಕ್ರಿಕೆಟ್‌ ಸಂಸ್ಥೆಗೇ ನೋಟಿಸ್‌!

ಮೈಸೂರಿನಲ್ಲಿ ಮಾತನಾಡಿದ ಬೊಮ್ಮಾಯಿ, ಕೆಪಿಎಲ್ ಫಿಕ್ಸಿಂಗ್ ತನಿಖೆಗೆ ನನ್ನ ಪುತ್ರ ಅಡ್ಡಿಯಾಗಿಲ್ಲ. ಪೊಲೀಸರ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ನನ್ನ ಮಗನಿಗೂ ತನಿಖೆಗೂ ಯಾವುದೇ ಸಂಬಂಧವಿಲ್ಲ. ನಾನು ಕ್ರಿಕೆಟಿಗ, ನನ್ನ ಮಗ ಕೂಡ ಕ್ರಿಕೆಟಿಗ ಅನ್ನೋ ಕಾರಣಕ್ಕೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಕಠಿಣ ತನಿಖೆಗೆ ಆದೇಶಿಸಿದ್ದೇನೆ. ನನ್ನ ಪುತ್ರ ಪೊಲೀಸರಿಗೆ ಒತ್ತಡ ಹಾಕಿದ್ದಾನೆ ಅನ್ನೋ ಆರೋಪಕ್ಕೆ ಪೊಲೀಸರನ್ನೇ ಕೇಳಿ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: KPL ಫಿಕ್ಸಿಂಗ್: ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿಯ ಬಂಧನ

ಇದೇ ವೇಳೆ ಕಾಂಗ್ರೆಸ್ ಶಾಸಕ, ಮಾಜಿ ಸಚವಿ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದ ತನಿಖೆ ಕುರಿತು ಕೆಲ ಮಾಹಿತಿ ಬಹಿರಂ ಪಡಿಸಿದ್ದಾರೆ. ರಾಜಕೀಯ ಪೈಪೋಟಿ ಮತ್ತು ರಾಜಕೀಯ ಅಸ್ಥಿತ್ವಕ್ಕಾಗಿ ನಡೆದಿರುವ ಹತ್ಯೆ ಯತ್ನ ಎಂದು  ಬೊಮ್ಮಾಯಿ ಮೈಸೂರಿನಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂವಾಗಿದೆ. ಸೈದ್ದಾಂತಿಕ ಭಿನ್ನಭಿಪ್ರಾಯ ಹಾಗೂ ರಾಜಕೀಯ ಅಸ್ಥಿತ್ವಕ್ಕಾಗಿ ಹತ್ಯೆ ನಡೆದಿದೆ. ಇನ್ನೆರಡು ದಿನದಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಬಂಧಿತ ಆರೋಪಿ ಪಿಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯಲ್ಲಿ ಸಕ್ರಿಯನಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದಿದ್ದಾರೆ.

ತನ್ವೀರ್ ಸೇಠ್ ಮೇಲಿನ ಹಲ್ಲೆ, ರಾಜು ಹತ್ಯೆ ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಕೆಲ ಹತ್ಯೆ ಪ್ರಕರಣಕ್ಕೂ ಸಾಮ್ಯತೆ ಇದೆ. ಹೀಗಾಗಿ ಈ ಎಲ್ಲಾ ಹತ್ಯೆ ಪ್ರಕರಣಗಳಿಗೆ ಲಿಂಕ್ ಇದ್ದಂತಿದೆ. ಈ ನಿಟ್ಟಿನಲ್ಲೂ ತನಿಖೆ ಚುರಕಾಗಿದೆ ಎಂದರು. ತನಿಖೆ ಪೂರ್ಣಗೊಂಡ ಬಳಿಕ ಬಹಿರಂಗವಾಗಿರೋ ಅಂಶಗಳು ಸತ್ಯವಾಗಿದ್ದರೆ, ಅಂತಹ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

Follow Us:
Download App:
  • android
  • ios