Asianet Suvarna News Asianet Suvarna News

ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಇದೀಗ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ದಿಗ್ಗಜ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡಕ್ಕೆ ನೀಡಿದ್ದ ಕೆಎಸ್‌ಸಿಎ ಸಂಸ್ಥೆ ಕೆಪಿಎಲ್ ಟೂರ್ನಿಯಿಂದಾಗಿ ಅಪವಾದ ಎದುರಿಸುವಂತಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Karnataka Premier League was a black mark to Indian Cricket
Author
Bengaluru, First Published Nov 9, 2019, 12:52 PM IST

ಬೆಂಗ​ಳೂರು(ನ.09): ಭಾರ​ತೀಯ ಕ್ರಿಕೆಟ್‌ನಲ್ಲಿ ಕರ್ನಾ​ಟಕ ತಂಡಕ್ಕೆ ದೊಡ್ಡ ಹೆಸರಿದೆ. ಕರ್ನಾ​ಟಕದ ಆಟ​ಗಾ​ರರ ಬಗ್ಗೆ ದೇಶಾ​ದ್ಯಂತ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಲ್ಲಿ ವಿಶೇಷ ಪ್ರೀತಿ ಇದೆ. ಬಿ.ಎಸ್‌.ಚಂದ್ರಶೇಖರ್‌, ಇಎಎಸ್‌ ಪ್ರಸನ್ನ, ಜಿ.ಆರ್‌.ವಿಶ್ವನಾಥ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಜಾವ​ಗಲ್‌ ಶ್ರೀನಾಥ್‌ರಂತ​ಹ ಸಾರ್ವ​ಕಾಲಿಕ ಶ್ರೇಷ್ಠ ಕ್ರಿಕೆ​ಟಿ​ಗ​ರನ್ನು ರಾಜ್ಯ ಕೊಡುಗೆ ನೀಡಿದೆ. ಹೆಚ್ಚಿನ ವಿವಾದಗಳಿ​ಲ್ಲದೆ ದೇಶದ ಕ್ರಿಕೆಟ್‌ಗೆ ಪ್ರತಿಭೆಗಳನ್ನು ಪೂರೈ​ಸು​ತ್ತಿದ್ದ ಕರ್ನಾ​ಟಕದಲ್ಲೀಗ ಕೆಪಿ​ಎಲ್‌ ಟಿ20 ಟೂರ್ನಿಯಿಂದಾಗಿ ಕಳಂಕ ಮೆತ್ತಿಕೊಂಡಿದೆ.

KPL ಫಿಕ್ಸಿಂಗ್: ಗೌತಮ್, ಖಾಜಿ ಅಮಾನತು ಮಾಡಿದ KSCA

ಕರ್ನಾ​ಟಕ ಪ್ರೀಮಿ​ಯರ್‌ ಲೀಗ್‌ನ ಸ್ಪಾಟ್‌ ಫಿಕ್ಸಿಂಗ್‌, ಬೆಟ್ಟಿಂಗ್‌ ಪ್ರಕ​ರ​ಣ ದೇಶದ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಲ್ಲಿ ಭಾರೀ ಆಘಾತ ಮೂಡಿ​ಸಿದೆ. ರಾಜ್ಯದ ಯುವ ಪ್ರತಿಭೆಗಳನ್ನು ಮುಖ್ಯ​ವಾ​ಹಿ​ನಿಗೆ ತಂದು, ಭಾರತ ತಂಡ ಇಲ್ಲವೇ ಐಪಿ​ಎಲ್‌ ತಂಡ​ಗ​ಳಲ್ಲಿ ಸ್ಥಾನ ಗಿಟ್ಟಿಸಲು ನೆರ​ವಾ​ಗುವ ಉದ್ದೇ​ಶ​ದಿಂದ ಆರಂಭ​ಗೊಂಡ ಟೂರ್ನಿ ಇದೀಗ ಅನ​ಗತ್ಯ ವಿವಾದಕ್ಕೆ ಸಿಲು​ಕಿದೆ.

KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್

ಕೆಪಿಎಲ್‌ನಿಂದಾಗೇ ಕೆ.ಸಿ.​ಕಾ​ರ್ಯಪ್ಪ, ಶಿವಿಲ್‌ ಕೌಶಿಕ್‌ರಂತ​ಹ ಆಟ​ಗಾ​ರರು ಐಪಿ​ಎಲ್‌ ತಂಡ​ಗ​ಳಿಗೆ ಆಯ್ಕೆಯಾದರು. ದೇಶದ ನಂ.1 ಟಿ20 ಲೀಗ್‌ ಎಂದು ಕರೆ​ಸಿ​ಕೊ​ಳ್ಳುವ ಕೆಪಿ​ಎಲ್‌, ಭ್ರಷ್ಟಾ​ಚಾರದ ಗೂಡಾಗಿರುವುದು ಕ್ರಿಕೆಟ್‌ ವಲ​ಯ​ದಲ್ಲಿ ಬೇಸರಕ್ಕೆ ಕಾರ​ಣ​ವಾ​ಗಿದೆ. ಸಿ.ಎಂ.ಗೌ​ತಮ್‌, ಅಬ್ರಾರ್‌ ಖಾಜಿ​ಯಂತಹ ಹಿರಿಯ ಹಾಗೂ ರಣಜಿ ತಂಡ​ದಲ್ಲಿ ಹಲವು ವರ್ಷಗಳ ಕಾಲ ಆಡಿದ ಆಟ​ಗಾ​ರರೇ ಭ್ರಷ್ಟಾ​ಚಾರದಲ್ಲಿ ಭಾಗಿ​ಯಾ​ಗಿ​ರು​ವುದು ಅಭಿ​ಮಾ​ನಿ​ಗ​ಳಿಗೆ ಇನ್ನೂ ನಂಬ​ಲಾ​ಗದ ಸಂಗ​ತಿ​ಯಾ​ಗಿದೆ.

ಆಜೀವ ನಿಷೇ​ಧಕ್ಕೆ ಆಗ್ರ​ಹ: ಆಟಕ್ಕೆ ಕಳಂಕ ತಂದಿ​ರುವ ಆಟ​ಗಾ​ರ​ರನ್ನು ಕೆಎಸ್‌ಸಿಎ ತಕ್ಷಣ ಅಮಾ​ನ​ತು​ಗೊ​ಳಿ​ಸಿದೆ. ಆದರೆ ಅವರ ಮೇಲೆ ಆಜೀವ ನಿಷೇಧ ಹೇರ​ಬೇಕು ಎಂದು ಹಲವರು ಆಗ್ರ​ಹಿ​ಸು​ತ್ತಿ​ದ್ದಾರೆ. ಐಪಿ​ಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕರಣದಲ್ಲಿ ಸಿಲುಕಿದ ಕಾರಣಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜ​ಸ್ಥಾನ ರಾಯಲ್ಸ್‌ ತಂಡ​ವನ್ನು 2 ವರ್ಷಗಳ ಕಾಲ ನಿಷೇಧಗೊಳಿ​ಸ​ಲಾ​ಗಿತ್ತು. ಕೆಪಿಎಲ್‌ನಲ್ಲಿ ಭ್ರಷ್ಟಾಚಾರ ನಡೆ​ಸಿ​ರುವ ತಂಡ​ಗ​ಳನ್ನೂ ನಿಷೇಧಗೊ​ಳಿ​ಸು​ವಂತೆ ಕೂಗು ಕೇಳಿ​ಬ​ರು​ತ್ತಿದೆ. ನಂಬ​ಲಾ​ರ್ಹ ಮೂಲ​ಗಳ ಪ್ರಕಾರ, ಕೆಪಿ​ಎಲ್‌ ಪ್ರಕ​ರಣ ಬಿಸಿ​ಸಿಐಗೆ ಭಾರೀ ಮುಜು​ಗರ ತಂದಿದ್ದು, ಟೂರ್ನಿಯ ಮಾನ್ಯತೆಯನ್ನು ರದ್ದು​ಗೊ​ಳಿ​ಸುವ ಸಾಧ್ಯತೆ ಇದೆ ಎನ್ನ​ಲಾ​ಗಿದೆ.

ದೊಡ್ಡ ವ್ಯಕ್ತಿಗಳು ಭಾಗಿ?

ಕೆಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕ​ರ​ಣ ದಿನೇ ದಿನೇ ಹೊಸ ತಿರು​ವು​ಗ​ಳನ್ನು ಪಡೆ​ದು​ಕೊ​ಳ್ಳು​ತ್ತಿದೆ. ಆಟ​ಗಾ​ರರು, ಕೋಚ್‌, ತಂಡ​ಗಳ ಮಾಲೀ​ಕ ಸಿಕ್ಕಿ​ಬಿ​ದ್ದಿ​ದ್ದಾರೆ. ಮೂಲ​ಗಳ ಪ್ರಕಾ​ರ ಮತ್ತಷ್ಟು ಆಟ​ಗಾ​ರರು ಭ್ರಷ್ಟಾಚಾರದಲ್ಲಿ ತೊಡ​ಗಿ​ರು​ವು​ದಾಗಿ ತಿಳಿ​ದು​ಬಂದಿದೆ. ಅಷ್ಟೇ ಅಲ್ಲ, ಹಗರಣದಲ್ಲಿ ರಾಜ್ಯ ಕ್ರಿಕೆಟ್‌ನ ಕೆಲ ದೊಡ್ಡ ವ್ಯಕ್ತಿ​ಗಳ ಹೆಸರು ಸಹ ಇದೆ ಎಂಬ ಸುದ್ದಿ ಹರಿ​ದಾ​ಡು​ತ್ತಿದೆ. ಸದ್ಯ​ದಲ್ಲೇ ಈ ಪ್ರಕ​ರಣದಲ್ಲಿ ಇನ್ನೂ ಕೆಲ​ವರು ಸಿಕ್ಕಿ​ಬೀ​ಳಬ​ಹುದು ಎನ್ನಲಾ​ಗಿದೆ.
 

Follow Us:
Download App:
  • android
  • ios