ಸುನಿಲ್ ಗವಾಸ್ಕರ್ ಪಾದಕ್ಕೆರಗಿದ ಸೆಂಚುರಿ ಸ್ಟಾರ್ ನಿತೀಶ್ ರೆಡ್ಡಿ ತಂದೆ, ಭಾವುಕ ಕ್ಷಣದ ವಿಡಿಯೋ!

ಆಸಿಸ್ ನೆಲದಲ್ಲಿ ಸೆಂಚುರಿ ಸಿಡಿಸಿ ಟೀಂ ಇಂಡಿಯಾ ಕಾಪಾಡಿದ ನಿತೀಶ್ ರೆಡ್ಡಿ ಸಾಧನೆಗೆ ತಂದೆ ಮುತ್ಯಾಲ ರೆಡ್ಡಿ ಭಾವುಕರಾಗಿದ್ದರು. ಬಳಿಕ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಭೇಟಿಯಾಗುತ್ತಿದ್ದಂತೆ ಪಾದಕ್ಕೆರಗಿ ಆಶೀರ್ವಾದ ಪಡೆದಿದ್ದಾರೆ. ಈ ಭಾವುಕ ಕ್ಷಣದ ವಿಡಿಯೋ ಸೆರೆಯಾಗಿದೆ.

Nitish kumar Reddy father wins heart by touching touching feet of Sunil Gavaskar ckm

ಮೆಲ್ಬೋರ್ನ್(ಡಿ.29) ಆಸ್ಟ್ರೇಲಿಯಾ ವಿರುದ್ದದ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ಭಾರತಕ್ಕೆ ನಿತೀಶ್ ರೆಡ್ಡಿ ಸೆಂಚುರಿ ಸಮಾಧಾನ ತಂದುಕೊಟ್ಟಿತ್ತು. ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು.  ಇಷ್ಟೇ ಅಲ್ಲ ಆಸಿಸ್ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ  21 ವರ್ಷದ ನಿತೀಶ್ ರೆಡ್ಡಿ ಸಾಮರ್ಥ್ಯ ಸಾಬೀತುಪಡಿಸಿದ್ದರು. ನಿತೀಶ್ ಸಾಧನೆಯನ್ನು ಕ್ರಿಕೆಟ್ ದಿಗ್ಗಜರು ಶ್ಲಾಘಿಸಿದ್ದಾರೆ. ಇತ್ತ ನಿತೀಶ್ ರೆಡ್ಡಿ ತಂದೆ ಮುತ್ಯಾಲ ರೆಡ್ಡಿ ಭಾವುಕರಾಗಿದ್ದಾರೆ. ನಿತೀಶ್ ಸೆಂಚುರಿ ಭಾರಿಸುತ್ತಿದ್ದಂತೆ ಮುತ್ಯಾಲ ರೆಡ್ಡಿ ಕಣ್ಣುಗಳು ತೇವಗೊಂಡಿತ್ತು. ಬಳಿಕ ನಿತೀಶ್ ರೆಡ್ಡಿ ತಂದೆ ಕೆಲ ಕ್ರಿಕೆಟ್ ದಿಗ್ಗಜರನ್ನು ಭೇಟಿಯಾಗಿದ್ದಾರೆ. ಈ ಪೈಕಿ ಸುನಿಲ್ ಗವಾಸ್ಕರ್ ಭೇಟಿಯಾಗುತ್ತಿದ್ದಂತೆ ಮತ್ಯಾಲ ರೆಡ್ಡಿ ಪಾದಕ್ಕೆ ಎರಗಿದ್ದಾರೆ. ಈ ಭಾವುಕ ಕ್ಷಣಗಳ ವಿಡಿಯೋ ಸೆರಿಯಾಗಿದೆ.

ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೂರನೇ ದಿನ ನಿತೀಶ್ ರೆಡ್ಡಿ ಅದ್ಭುತ ಇನ್ನಿಂಗ್ಸ್ ಮೂಲಕ ದಿಟ್ಟ ಹೋರಾಟ ನೀಡಿದ್ದರು. ಟೀಂ ಇಂಡಿಯಾ ವಿಕೆಟ್ ಕಳೆದುಕೂಂಡು ಮೊದಲ ಇನ್ನಿಂಗ್ಸ್‌ನಲ್ಲಿ ಹೀನಾಯ ಸ್ಥಿತಿ ತಲುಪುತ್ತಿದ್ದಂತೆ ನಿತೀಶ್ ರೆಡ್ಡಿ ವಿಕೆಟ್ ಉಳಿಸಿಕೊಂಡು ಆಸಿಸ್ ಬೌಲರ್‌ಗಳಿಗೆ ತಿರುಗೇಟು ನೀಡಿದ್ದರು. ಈ ಮೂಲಕ ಚೊಚ್ಚಲ ಶತಕ ಸಿಡಿಸಿದ್ದರು. ನಿತೀಶ್ ರೆಡ್ಡಿ ಶತಕದಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಹೀನಾಯ ಸ್ಥಿತಿಯಿಂದ ಪಾರಾಗಿತ್ತು. ನಿತೀಶ್ ರೆಡ್ಡಿ ಬ್ಯಾಟಿಂಗ್‌ನ್ನು ತಂದೆ ಮುತ್ಯಾಲ ರೆಡ್ಡಿ ಹಾಗೂ ಕುಟುಂಬ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದರು. ಸೆಂಚುರಿ ಸಿಡಿಸುತ್ತಿದ್ದಂತೆ ಮುತ್ಯಾಲ ರೆಡ್ಡಿ ಭಾವುಕರಾಗಿದ್ದರು. 

ಬಾಡಿಗೆ ಮನೆಯಿಂದ ಬಾಕ್ಸಿಂಗ್ ಡೇ ಹೀರೋ: ಅಪ್ಪನ ಪ್ರತಿ ಬೆವರಿನ ಹನಿಗೂ ಚಿನ್ನದ ಬೆಲೆ ತಂದ ನಿತೀಶ್ ರೆಡ್ಡಿ!

ಪಂದ್ಯದ ನಾಲ್ಕನೇ ದಿನ ಮುತ್ಯಾಲ ರೆಡ್ಡಿ ಕ್ರಿಕೆಟ್ ದಿಗ್ಗಜರನ್ನು ಭೇಟಿಯಾಗಿದ್ದಾರೆ. ಸುನಿಲ್ ಗವಾಸ್ಕರ್ ಭೇಟಿಯಾಗುತ್ತಿದ್ದಂತೆ ಮುತ್ಯಾಲ ರೆಡ್ಡಿ ಪಾದಕ್ಕೆ ಏರಗಿದ್ದಾರೆ. ಗವಾಸ್ಕರ್ ತಡೆದರು ಮುತ್ಯಾಲ ರೆಡ್ಡಿ ಪಾದಮುಟ್ಟಿ ನಮಸ್ಕರಿಸಿದ್ದಾರೆ. ಮುತ್ಯಾಲ ರೆಡ್ಡಿಗೆ ಆಶೀರ್ವಾದ ಮಾಡಿದ ಸುನಿಲ್ ಗವಾಸ್ಕರ್ ಬಳಿಕ ತಬ್ಬಿಕೊಂಡು ಅಭಿನಂದನೆ ತಿಳಿಸಿದ್ದಾರೆ. ತಂದೆ ತ್ಯಾಗ, ಮಗನ ಸಾಧನೆಗೆ ಅತೀವ ಹೆಮ್ಮೆಯಾಗುತ್ತಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. 21ನೇ ವಯಸ್ಸಿನಲ್ಲಿ ನಿತೀಶ್ ರೆಡ್ಡಿ ತೋರಿದ ಬ್ಯಾಟಿಂಗ್ ಪ್ರದರ್ಶನ, ಆಸಿಸ್ ಬೌಲರ್‌ಗಳ ಮುಂದೆ ತಾಳ್ಮೆಯ ಹಾಗೂ ದಿಟ್ಟ ಹೋರಾಟ ಆತನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ. 

 

 

ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಸಿಡಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಅಕ್ಷದೀಪ್, ರಿಷಬ್ ಪಂತ್, ರವೀಂದ್ರ ಜಡೇಜಾ ನಿರಾಸೆಗೊಳಿಸಿದರು. 

ಯಶಸ್ವಿ ಜೈಸ್ವಾಲ್ ದಿಟ್ಟ ಹೋರಾಟ ನೀಡ 82 ರನ್ ಸಿಡಿಸಿದ್ದರು. ಆದರೆ ದಿಢೀರ್ ವಿಕೆಟ್ ಪತನದಿಂದ ಭಾರತ ಇನ್ನಿಂಗ್ಸ್ ಹಿನ್ನಡೆ ಭೀತಿಗೆ ಸಿಲುಕಿತ್ತು. ಆದರೆ ನಿತೀಶ್ ರೆಡ್ಡಿ ಹೋರಾಟ ಪಂದ್ಯದ ದಿಕ್ಕು ಬದಲಿಸಿತು. ಆಕರ್ಷಕ ಶತಕ ಸಿಡಿಸಿ ಮಿಂಚಿದರು. ನಿತೀಶ್ ರೆಡ್ಡಿ 114 ರನ್ ಸಿಡಿಸಿದ್ದರು. ಭಾರತ 369 ರನ್ ಸಿಡಿಸಿತ್ತು. ಸದ್ಯ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿದೆ. ಈ ಮೂಲಕ 333 ರನ್ ಮುನ್ನಡೆ ಪಡೆದುಕೊಂಡಿದೆ. 5ನೇ ಹಾಗೂ ಅಂತಿಮ ದಿನದಾಟ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಆಸಿಸ್ ಆಲೌಟ್ ಮಾಡಿ ಬೃಹತ್ ಟಾರ್ಗೆಟನ್ನು ಟೀಂ ಇಂಡಿಯಾ ಚೇಸ್ ಮಾಡುತ್ತಾ ಅನ್ನೋು ಪ್ರಶ್ನೆಗಳು ಮೂಡಿದೆ. ಸದ್ಯ ಯುವ ಕ್ರಿಕೆಟಿಗರು ಉತ್ತಮ ಫಾರ್ಮ್‌ನಲ್ಲಿರುವುದು ಸಾಮಾಧಾನ ತಂದಿದೆ.

ನಿತೀಶ್ ರೆಡ್ಡಿ ಶತಕಕ್ಕೆ ಕೈಮುಗಿದು ಆನಂದಭಾಷ್ಪ ಸುರಿಸಿದ ತಂದೆ! ಮಿಲಿಯನ್ ಡಾಲರ್ ಕ್ಷಣದ ವಿಡಿಯೋ ವೈರಲ್

 

Latest Videos
Follow Us:
Download App:
  • android
  • ios