ಬೆಂಗಳೂರಲ್ಲಿಂದು ಕಿವೀಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ..!
ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ 8 ಪಂದ್ಯಗಳಲ್ಲಿ 8 ಅಂಕದೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಸೆಮೀಸ್ ಗೇರಲು ಕಾತರಿಸುತ್ತಿರುವ ಕಳೆದೆರಡು ಬಾರಿಯ ರನ್ನರ್-ಅಪ್ ಕಿವೀಸ್ ಮುಂದಿರುವುದು ಒಂದೇ ಆಯ್ಕೆ. ಸದ್ಯ ತಂಡ +0.398 ನೆಟ್ ರನ್‌ರೇಟ್ ಹೊಂದಿದ್ದು, ಪಾಕಿಸ್ತಾನ(+0.036) ಹಾಗೂ ಅಫ್ಘಾನಿಸ್ತಾನ (-0.338) ಕೂಡಾ ತಲಾ 8 ಅಂಕ ಹೊಂದಿರುವ ಕಾರಣ ಕಿವೀಸ್‌ಗೆ ದೊಡ್ಡ ಜಯ ಅನಿವಾರ್ಯ.
ಬೆಂಗಳೂರು(ನ.09): ಈ ಬಾರಿ ವಿಶ್ವಕಪ್‌ನ ಆರಂಭದಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ್ದ ನ್ಯೂಜಿಲೆಂಡ್, ಸದ್ಯ ಸೆಮಿ ಫೈನಲ್‌ಗೇರಲು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವಿನ ಜೊತೆಗೆ ಮಳೆ ರಾಯನ ಕೃಪೆಯನ್ನು ನಂಬಿ ಕೂತಿದೆ. ತಂಡ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದು ದೊಡ್ಡ ಗೆಲುವಿಗೆ ಹಪಹಪಿಸುತ್ತಿದೆ.
ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ 8 ಪಂದ್ಯಗಳಲ್ಲಿ 8 ಅಂಕದೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಸೆಮೀಸ್ ಗೇರಲು ಕಾತರಿಸುತ್ತಿರುವ ಕಳೆದೆರಡು ಬಾರಿಯ ರನ್ನರ್-ಅಪ್ ಕಿವೀಸ್ ಮುಂದಿರುವುದು ಒಂದೇ ಆಯ್ಕೆ. ಸದ್ಯ ತಂಡ +0.398 ನೆಟ್ ರನ್‌ರೇಟ್ ಹೊಂದಿದ್ದು, ಪಾಕಿಸ್ತಾನ(+0.036) ಹಾಗೂ ಅಫ್ಘಾನಿಸ್ತಾನ (-0.338) ಕೂಡಾ ತಲಾ 8 ಅಂಕ ಹೊಂದಿರುವ ಕಾರಣ ಕಿವೀಸ್‌ಗೆ ದೊಡ್ಡ ಜಯ ಅನಿವಾರ್ಯ.
ಯಾರಾಗ್ತಾರೆ ಟೀಂ ಇಂಡಿಯಾಗೆ ಸೆಮೀಸ್ ಎದುರಾಳಿ? ಇಂಡೋ-ಪಾಕ್ ಸೆಮೀಸ್ ಸಾಧ್ಯತೆ ಎಷ್ಟು?
ಒಂದು ವೇಳೆ ತಂಡ ಸೋತರೆ ಆಗ ಪಾಕ್, ಆಫ್ಘನ್ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ಬರಲು ಪ್ರಾರ್ಥಿಸಬೇಕು. ಈನಡುವೆ ಪಂದ್ಯಕ್ಕೆ ಮಳೆ ಭೀತಿ ಇದ್ದು, ಪಂದ್ಯ ರದ್ದಾದರೆ ತಂಡದ ಸೆಮೀಸ್ ಆಸೆ ಭಗ್ನಗೊಳ್ಳಬಹುದು.
ನ್ಯೂಜಿಲೆಂಡ್ ತಂಡವು ಕಳೆದ 7 ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ಶ್ರೀಲಂಕಾ ಎದುರು ಗೆಲುವು ಸಾಧಿಸಿ ಬೀಗಿದೆ. ಇದಷ್ಟೇ ಅಲ್ಲದೇ 2011ರ ಏಕದಿನ ವಿಶ್ವಕಪ್ ಬಳಿಕ ಕಳೆದೆರಡು ವಿಶ್ವಕಪ್ ಮುಖಾಮುಖಿಯಲ್ಲೂ ಲಂಕಾ ಎದುರು ಕಿವೀಸ್ ಗೆಲುವು ಸಾಧಿಸಿದೆ. ಹೀಗಾಗಿ ಇತಿಹಾಸದ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಬೆನ್ನಿಗಿಟ್ಟುಕೊಂಡು ಕಣಕ್ಕಿಳಿಯಲು ಕೇನ್ ವಿಲಿಯಮ್ಸನ್ ಪಡೆ ಸಜ್ಜಾಗಿದೆ.
ಏಕದಿನ ಪಂದ್ಯಗಳಲ್ಲಿ ವಿಶ್ವದ ನಂ.1 ಬ್ಯಾಟರ್ ಎನಿಸಿಕೊಂಡ ಶುಭ್‌ಮನ್ ಗಿಲ್: ಬೌಲಿಂಗ್‌ನಲ್ಲೂ ಸಿರಾಜ್‌ಗೆ ಅಗ್ರಸ್ಥಾನ
ನ್ಯೂಜಿಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸಬೇಕಿದ್ದರೆ, ಆರಂಭಿಕರಾದ ಡೆವೊನ್ ಕಾನ್‌ವೇ ಹಾಗೂ ಬೆಂಗಳೂರು ಮೂಲದ ರಚಿನ್ ರವೀಂದ್ರ ಉತ್ತಮ ಆರಂಭ ಒದಗಿಸಿಕೊಡಬೇಕಿದೆ. ಇನ್ನುಳಿದಂತೆ ನಾಯಕ ಕೇನ್ ವಿಲಿಯಮ್ಸನ್, ಡೇರಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಫ್ಸ್ ಜವಾಬ್ದಾರಿಯುತ ಆಟ ಆಡಬೇಕಿದೆ. ಬೌಲಿಂಗ್‌ನಲ್ಲಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಜತೆಗೆ ಲಾಕಿ ಫರ್ಗ್ಯೂಸನ್ ವೇಗದ ದಾಳಿಯಲ್ಲಿ ಲಂಕಾ ಬ್ಯಾಟರ್‌ಗಳ ಬಲಿ ಪಡೆದರಷ್ಟೇ ಸೆಮೀಸ್ ಕನಸು ಜೀವಂತವಾಗುಳಿಯಲಿದೆ.
ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ ನೋಡಿ
ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್(ನಾಯಕ), ಡೇರಲ್ ಮಿಚೆಲ್, ಟಾಮ್ ಲೇಥಮ್, ಗ್ಲೆನ್ ಫಿಲಿಫ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಪರೆರಾ, ಕುಸಾಲ್ ಮೆಂಡೀಸ್(ನಾಯಕ), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜಲೋ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಮಹೀಶ್ ತೀಕ್ಷಣ, ದುಸ್ಮಂತಾ ಚಮೀರಾ, ಕಸುನ್ ರಜಿತಾ, ದಿಲ್ಷ್ಯಾನ್ ಮಧುಶನಕ.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್.