Asianet Suvarna News Asianet Suvarna News

ಯಾರಾಗ್ತಾರೆ ಟೀಂ ಇಂಡಿಯಾಗೆ ಸೆಮೀಸ್ ಎದುರಾಳಿ? ಇಂಡೋ-ಪಾಕ್ ಸೆಮೀಸ್ ಸಾಧ್ಯತೆ ಎಷ್ಟು?

ಬಹುತೇಕ ಕ್ರೀಡಾಭಿಮಾನಿಗಳು ಭಾರತ ತಂಡ ಸೆಮೀಸ್‌ನಲ್ಲಿ ಬದ್ಧವೈರಿ ಪಾಕ್‌ ವಿರುದ್ಧ ಆಡಿ ಗೆಲ್ಲುವುದನ್ನು ನೋಡಲು ಕಾಯುತ್ತಿದ್ದಾರೆ. ಇದು ಸಾಧ್ಯವಾಗುವುದು ನ.11ರಂದು ಇಂಗ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೆ ಮಾತ್ರ. ಪಾಕ್‌ನ ಪಂದ್ಯಕ್ಕೂ ಮುನ್ನ ಕಿವೀಸ್‌, ಆಫ್ಘನ್‌ ಪಂದ್ಯಗಳು ನಡೆಯಲಿದ್ದು, ಸೆಮೀಸ್‌ಗೇರಬೇಕಿದ್ದರೆ ತಾನು ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದು ಪಾಕ್‌ಗೆ ಮೊದಲೇ ತಿಳಿಯಲಿದೆ.

Who will face India in Semi Final All possibilities Cricket fans need to know kvn
Author
First Published Nov 9, 2023, 11:53 AM IST

ನವದೆಹಲಿ(ನ.09): ವಿಶ್ವಕಪ್‌ ಮುಕ್ತಾಯದ ಹಂತಕ್ಕೆ ತಲುಪಿದ್ದು, ಇನ್ನು ಲೀಗ್‌ ಹಂತದಲ್ಲಿ 3 ದಿನ, 5 ಪಂದ್ಯ ಬಾಕಿ ಇವೆ. ಆದರೆ ಈಗಾಗಲೇ ಸೆಮಿಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಭಾರತ, ತನ್ನ ಎದುರಾಳಿ ಯಾರಾಗಲಿದ್ದಾರೆ ಎಂಬುದನ್ನು ಕಾತರದಿಂದ ಎದುರು ನೋಡುತ್ತಿದೆ.

ಒಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ-ದ.ಆಫ್ರಿಕಾ ಮುಖಾಮುಖಿಯಾಗುವುದು ಖಚಿತವಾಗಿದೆ. ಉಳಿದಂತೆ ಭಾರತ ವಿರುದ್ಧದ ಸೆಮೀಸ್‌ ಆಡಲು 3 ತಂಡಗಳ ನಡುವೆ ಪೈಪೋಟಿ ಇದೆ. ನ್ಯೂಜಿಲೆಂಡ್‌, ಪಾಕಿಸ್ತಾನ, ಅಫ್ಘಾನಿಸ್ತಾನ ರೇಸ್‌ನಲ್ಲಿವೆ.

ಈ ಮೂರೂ ತಂಡಗಳು ಸದ್ಯ ತಲಾ 8 ಅಂಕ ಹೊಂದಿವೆ. ಆದರೆ ನೆಟ್‌ ರನ್‌ರೇಟ್ ಆಧಾರದಲ್ಲಿ ನ್ಯೂಜಿಲೆಂಡ್‌(+0.398) ಮುಂದಿದ್ದು, ಅಂಕಪಟ್ಟಿಯ 4ನೇ ಸ್ಥಾನದಲ್ಲಿದೆ. ಪಾಕಿಸ್ತಾನ(+0.036) 5ನೇ ಹಾಗೂ ಅಫ್ಘಾನಿಸ್ತಾನ(-0.338) 6ನೇ ಸ್ಥಾನದಲ್ಲಿದೆ. ಕಿವೀಸ್‌ಗೆ ಲಂಕಾ ವಿರುದ್ಧ, ಪಾಕ್‌ಗೆ ಇಂಗ್ಲೆಂಡ್‌ ವಿರುದ್ಧ ಹಾಗೂ ಆಫ್ಘನ್‌ಗೆ ದ.ಆಫ್ರಿಕಾ ವಿರುದ್ಧ ಪಂದ್ಯ ಬಾಕಿ ಇದೆ. ಮೂರೂ ತಂಡಗಳ ಕೊನೆ ಪಂದ್ಯದ ಫಲಿತಾಂಶ ಸೆಮೀಸ್‌ಗೇರುವ ತಂಡವನ್ನು ಖಚಿತಪಡಿಸಲಿದೆ.

World Cup 2023: ಒಂದು ತಿಂಗಳ ಬಳಿಕ ಕೊನೆಗೂ ಗೆಲುವಿನ ಸಮಾಧಾನ ಕಂಡ ಇಂಗ್ಲೆಂಡ್‌!

ಒಂದು ವೇಳೆ ಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೆ ಕಿವೀಸ್‌ಗೆ 1 ಅಂಕ ಸಿಗಲಿದೆ. ಆಗ ಪಾಕ್‌, ಆಫ್ಘನ್‌ ಎರಡೂ ಸೋತರಷ್ಟೇ ಕಿವೀಸ್‌ಗೆ ಸೆಮೀಸ್‌ನಲ್ಲಿ ಸ್ಥಾನ ಸಿಗಲಿದೆ.

ಭಾರತ vs ಪಾಕ್‌ ಸೆಮೀಸ್‌ ಸಾಧ್ಯತೆ!

ಬಹುತೇಕ ಕ್ರೀಡಾಭಿಮಾನಿಗಳು ಭಾರತ ತಂಡ ಸೆಮೀಸ್‌ನಲ್ಲಿ ಬದ್ಧವೈರಿ ಪಾಕ್‌ ವಿರುದ್ಧ ಆಡಿ ಗೆಲ್ಲುವುದನ್ನು ನೋಡಲು ಕಾಯುತ್ತಿದ್ದಾರೆ. ಇದು ಸಾಧ್ಯವಾಗುವುದು ನ.11ರಂದು ಇಂಗ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೆ ಮಾತ್ರ. ಪಾಕ್‌ನ ಪಂದ್ಯಕ್ಕೂ ಮುನ್ನ ಕಿವೀಸ್‌, ಆಫ್ಘನ್‌ ಪಂದ್ಯಗಳು ನಡೆಯಲಿದ್ದು, ಸೆಮೀಸ್‌ಗೇರಬೇಕಿದ್ದರೆ ತಾನು ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದು ಪಾಕ್‌ಗೆ ಮೊದಲೇ ತಿಳಿಯಲಿದೆ.

ಅವನ ಆಟಕ್ಕೆ ಶುಭ ಕೋರಲ್ಲ; ಆದ್ರೆ ಆತ ದುಡಿಯೋ ದುಡ್ಡಲ್ಲಿ ಹೆಚ್ಚು ಲಾಭ ಬೇಕೆಂದ Mohammed Shami ಮಾಜಿ ಪತ್ನಿ

ಮೊದಲ ಸಲ ಚಾಂಪಿಯನ್ಸ್‌ ಟ್ರೋಫಿಗೆ ಆಫ್ಘನ್‌ ಅರ್ಹತೆ!

ನವದೆಹಲಿ: ಎರಡೂವರೆ ದಶಕಗಳ ಇತಿಹಾಸವಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಅಫ್ಘಾನಿಸ್ತಾನ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದೆ. ಸೋಮವಾರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಸೋಲುವುದರೊಂದಿಗೆ ಅಂಕಪಟ್ಟಿಯಲ್ಲಿ ಆಫ್ಘನ್‌ ಅಗ್ರ-8ರಲ್ಲೇ ಸ್ಥಾನ ಖಚಿತಪಡಿಸಿಕೊಂಡು, 2025ರ ಚಾಂಪಿಯನ್ಸ್‌ ಟ್ರೋಫಿಗೆ ಟಿಕೆಟ್‌ ಪಡೆದುಕೊಂಡಿತು. 2025ರ ಟೂರ್ನಿಗೆ ಆತಿಥೇಯ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್‌, ದ.ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ಅರ್ಹತೆ ಪಡೆದಿದ್ದು, ಇನ್ನೆರಡು ಸ್ಥಾನಗಳು ಬಾಕಿ ಇವೆ.
 

Follow Us:
Download App:
  • android
  • ios