Asianet Suvarna News Asianet Suvarna News

ಏಕದಿನ ಪಂದ್ಯಗಳಲ್ಲಿ ವಿಶ್ವದ ನಂ.1 ಬ್ಯಾಟರ್‌ ಎನಿಸಿಕೊಂಡ ಶುಭ್‌ಮನ್‌ ಗಿಲ್‌: ಬೌಲಿಂಗ್‌ನಲ್ಲೂ ಸಿರಾಜ್‌ಗೆ ಅಗ್ರಸ್ಥಾನ

ವಿಶ್ವಕಪ್‌ನಲ್ಲಿನ ಉತ್ತಮ ಪ್ರದರ್ಶನದಿಂದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ODI ಪಟ್ಟಿಗಳಲ್ಲಿ ಅಗ್ರ 10 ರೊಳಗೆ ಪ್ರಮುಖ ಬದಲಾವಣೆಯಾಗುತ್ತಿದ್ದು, ಹೆಚ್ಚು ಭಾರತೀಯರು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

shubman gill ends babar azam s reign becomes no 1 odi batter of the world siraj becomes no 1 bowler ash
Author
First Published Nov 8, 2023, 3:30 PM IST

ನವದೆಹಲಿ (ನವೆಂಬರ್ 8, 2023): ಇತ್ತೀಚಿನ ಐಸಿಸಿ ಪುರುಷರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಭಾರತದ ಶುಭ್‌ಮನ್ ಗಿಲ್ ಮತ್ತೊಂದು ಸಾಧನೆ ಮಾಡಿದ್ದಾರೆ. ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದು, ಕಳೆದ 2 ವರ್ಷಗಳಿಂದ ವಿಶ್ವದ ನಂ.1 ODI ಬ್ಯಾಟರ್ ಆಗಿದ್ದ ಬಾಬರ್‌ ಅಜಮ್‌ ಅವರನ್ನು ಹಿಂದಿಕ್ಕಿದ್ದಾರೆ.

2023 ರ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನಕ್ಕೆ ಉತ್ತಮ ಆರಂಭದ ಹಿನ್ನಲೆಯಲ್ಲಿ ಬಾಬರ್‌ ಅಜಮ್‌ ಹಿಂದಿಕ್ಕಿ ಶುಭ್‌ಮನ್‌ ಗಿಲ್ ಅಗ್ರಸ್ಥಾನಕ್ಕೆ ಏರಿದರು. ಹಾಗೂ ಈ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಭಾರತದ ನಾಲ್ಕನೇ ಏಕದಿನ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ.

ಇದನ್ನು ಓದಿ: ಅವನ ಆಟಕ್ಕೆ ಶುಭ ಕೋರಲ್ಲ; ಆದ್ರೆ ಆತ ದುಡಿಯೋ ದುಡ್ಡಲ್ಲಿ ಹೆಚ್ಚು ಲಾಭ ಬೇಕೆಂದ MOHAMMED SHAMI ಮಾಜಿ ಪತ್ನಿ

ಬಲಗೈ ಆಟಗಾರ ಶುಭ್‌ಮನ್‌ ಗಿಲ್‌ ಕಳೆದ ವಾರದಲ್ಲಿ ಶ್ರೀಲಂಕಾ ವಿರುದ್ಧ 92 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಗಳಿಸಿದ್ದಾರೆ ಮತ್ತು ಇದುವರೆಗಿನ ಪಂದ್ಯಾವಳಿಯಲ್ಲಿ 6 ಇನ್ನಿಂಗ್ಸ್‌ಗಳಿಂದ 219 ರನ್ ಗಳಿಸಿದ್ದಾರೆ. ಗಿಲ್ ಡೆಂಗ್ಯೂ ಸೋಂಕಿಗೆ ಒಳಗಾದ ಹಿನ್ನೆಲೆ  ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಾವಳಿಯ ಭಾರತದ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಮತ್ತೊಂದೆಡೆ, ಬಾಬರ್ ಅಜಂ ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ ಒಟ್ಟು 282 ರನ್ ಗಳಿಸಿದ್ದಾರೆ. ಗಿಲ್‌ಗಿಂತ ಬಾಬರ್‌ ಆರು ರೇಟಿಂಗ್ ಪಾಯಿಂಟ್‌ಗ ಕಡಿಮೆ ಇದ್ದು, ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಶುಭ್‌ಮನ್‌ ಗಿಲ್ ಪ್ರಸ್ತುತ 830 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಬಾಬರ್ ಅಜಂ (824) ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (771) ಅಂಕ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. 

ಇದನ್ನು ಓದಿ: ಗ್ಲೆನ್‌ ಮ್ಯಾಕ್ಸ್‌ವೆಲ್‌ ಮನುಷ್ಯನೇ ಅಲ್ಲ: ವಿಶ್ವಕಪ್‌ನಲ್ಲಿ ಕ್ರೇಜಿ ಆಟವಾಡಿದ ಆರ್‌ಸಿಬಿ ಬ್ಯಾಟರ್‌ಗೆ ನೆಟ್ಟಿಗರ ಮೆಚ್ಚುಗೆ

ಗಿಲ್‌ ಮಾತ್ರವಲ್ಲ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು, ಬೌಲರ್‌ಗಳ ಶ್ರೇಯಾಂಕದಲ್ಲಿ, ಮೊಹಮ್ಮದ್ ಸಿರಾಜ್ ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳ ಹಿನ್ನಲೆಯಲ್ಲಿ ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.

ವಿಶ್ವಕಪ್‌ನಲ್ಲಿನ ಉತ್ತಮ ಪ್ರದರ್ಶನದಿಂದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ODI ಪಟ್ಟಿಗಳಲ್ಲಿ ಅಗ್ರ 10 ರೊಳಗೆ ಪ್ರಮುಖ ಬದಲಾವಣೆಯಾಗುತ್ತಿದ್ದು, ಹೆಚ್ಚು ಭಾರತೀಯರು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿದ್ದು, ವಿಶ್ವ ಬೌಲಿಂಗ್ ವಿಭಾಗದ ಟಾಪ್ 10 ಪಟ್ಟಿಯಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. 

ಮೊಹಮ್ಮದ್‌ ಸಿರಾಜ್ ಎರಡು ಸ್ಥಾನಗಳನ್ನು ಸುಧಾರಿಸಿಕೊಂಡು ನಂ.1 ODI ಬೌಲರ್ ಆಗಿ ಕಿರೀಟವನ್ನು ಮರಳಿ ಪಡೆದಿದ್ದಾರೆ. ಹಾಗೂ, ಸಹ ಆಟಗಾರರಾದ ಕುಲ್‌ದೀಪ್‌ ಯಾದವ್ (ನಾಲ್ಕನೇ ಸ್ಥಾನಕ್ಕೆ), ಜಸ್ಪ್ರೀತ್ ಬುಮ್ರಾ (ಎಂಟನೇ ಸ್ಥಾನಕ್ಕೆ) ಮತ್ತು ಮೊಹಮ್ಮದ್ ಶಮಿ (10 ನೇ ಸ್ಥಾನಕ್ಕೆ) ಜಿಗಿದಿದ್ದಾರೆ.

Follow Us:
Download App:
  • android
  • ios