ಆರ್‌ಸಿಬಿಗೆ ಟ್ರೋಫಿ ಕಿರೀಟ ತೊಡಿಸಿದ ಎಲ್ಲಿಸ್ ಪೆರ್ರಿ ಅಭಿಮಾನಿಗಳ ನೆಚ್ಚಿನ ಆಟಗಾರ್ತಿ. ಬ್ಯಾಟಿಂಗ್ ಜೊತೆಗೆ ಬ್ಯೂಟಿಯಲ್ಲೂ ಪೆರ್ರಿ ಎಲ್ಲರ ಫೇವರಿಟ್. ಇದೀಗ ಆರ್‌ಸಿಬಿಯ ಕೀ ಪ್ಲೇಯರ್ ಮೇಲೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ಕಣ್ಣು ಬಿದ್ದಿದೆ. ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿಯನ್ನೇ ಪಟಾಯಿಸಿ ಮದುವೆಯಾದ ಮರುಳಿ ವಿಜಯ್‌ಗೆ ಪೆರ್ರಿ ಜೊತೆ ಡೇಟಿಂಗ್ ಮಾಡುವಾಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೆರ್ರಿ ನೀಡಿದ ಉತ್ತರವೇನು? 

ಬೆಂಗಳೂರು(ಮಾ.19) ಮಹಿಳಾ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ ಮಹಿಳಾ ತಂಡ ಟ್ರೋಫಿ ಸಾಧನೆ ಮಾಡಿದೆ. ಆರ್‌ಸಿಬಿ ಗರ್ಲ್ಸ್ ಪ್ರಶಸ್ತಿಯಲ್ಲಿ ತಂಡದ ಪ್ರಮುಖ ಆಚಗಾರ್ತಿ ಎಲ್ಲಿಸ್ ಪೆರ್ರಿ ಕೂಡುಗೆ ಅಪಾರ. ಪ್ರತಿ ಪಂದ್ಯದಲ್ಲಿ ಅಬ್ಬರಿಸಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಬ್ಯಾಟಿಂಗ್ ಜೊತೆಗೆ ಬ್ಯೂಟಿಯಿಂದಲೂ ಎಲ್ಲಿಸ್ ಪೆರ್ರಿ ಅಭಿಮಾನಿಗಳ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಮೋಸ್ಟ್ ಬ್ಯೂಟಿಫುಲ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಅನ್ನೋ ಪಟ್ಟಗಿಟ್ಟಿಸಿಕೊಂಡಿರುವ ಎಲ್ಲಿಸ್ ಪೆರ್ರಿ ಆರ್‌ಸಿಬಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಬ್ಯೂಟಿ ಎಲ್ಲಿಸ್ ಪೆರ್ರಿ ಜೊತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮುರಳಿ ವಿಜಯ್‌ಗೆ ಡಿನ್ನರ್ ಡೇಟ್ ಮಾಡುವಾಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಎಲ್ಲಿಸ್ ಪೆರ್ರಿ ಕೂಡ ಉತ್ತರಿಸಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪತ್ನಿಯನ್ನೇ ಪಟಾಯಿಸಿ ಮದುವೆಯಾಗಿರುವ ಮರುಳಿ ವಿಜಯ್‌ಗೆ ಇದೀಗ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಜೊತೆ ಡಿನ್ನರ್ ಡೇಟ್ ಮಾಡುವಾಸೆ ವ್ಯಕ್ತಪಡಿಸಿದ್ದಾರೆ. ಮುರಳಿ ವಿಜಯ್ ತನ್ನ ಆಸೆ ವ್ಯಕ್ತಪಡಿಸಿದ್ದು ಕೆಲ ವರ್ಷಗಳ ಹಿಂದೆ. ಲಾಕ್‌ಡೌನ್ ಸಂದರ್ಭದಲ್ಲಿನ ಸಂದರ್ಶನದಲ್ಲಿ ಮುರಳಿ ವಿಜಯ್, ಪೆರ್ರಿ ಅತ್ಯಂತ ಸಂದರವಾಗಿದ್ದಾರೆ. ಉತ್ತಮ ಕ್ರಿಕೆಟ್ ಆಟಗಾರ್ತಿಯಾಗಿರುವ ಪೆರ್ರಿ ಜೊತೆ ಡಿನ್ನರ್ ಡೇಟ್ ಮಾಡುವಾಸೆ ಇದೆ ಎಂದು ವಿಜಯ್ ಹೇಳಿದ್ದಾರೆ.

ಆರ್‌ಸಿಬಿ ಚೆಲುವೆ ಪೆರ್ರಿಗೆ 'ಒಡೆದ ಕಾರು ಗಾಜಿನ' ಗಿಫ್ಟ್ ಕೊಟ್ಟ TATA ಮೋಟರ್ಸ್‌..!

ಮುರಳಿ ವಿಜಯ್ ಈ ಮಾತು ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ಎಲ್ಲಿಸ್ ಪೆರ್ರಿ ಸಂದರ್ಶನದ ವೇಳೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಮರುಳಿ ವಿಜಯ್ ನಿಮ್ಮ ಜೊತೆ ಡಿನ್ನರ್ ಡೇಟ್ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಉತ್ತರವೇನು ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಪೆರ್ರಿ, ಮರಳಿ ವಿಜಯ್ ಪಾವತಿಸುವುದಾದರೆ ನನಗೆ ಒಕೆ ಎಂದಿದ್ದರು. 

Scroll to load tweet…

ಎಲ್ಲಿಸ್ ಪೆರ್ರಿ ಉತ್ತರ, ಮರುಳಿ ವಿಜಯ್ ಹಳೇ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದೆ. ಮಹಿಳಾ ಆರ್‌ಸಿಬಿ ತಂಡ ಲೀಗ್ ಹಂತ ಹಾಗೂ ಪ್ಲೇ ಆಫ್ ಹಂತದಲ್ಲಿ ದಿಟ್ಟ ಹೋರಾಟ ನೀಡಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವಲ್ಲಿ ಎಲ್ಲಿಸ್ ಪೆರ್ರಿ ಕೊಡುಗೆ ಅಪಾರವಾಗಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಅಬ್ಬರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಇನ್ನು ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದವೂ ಅಬ್ಬರಿಸಿ ಗೆಲುವು ತಂದುಕೊಟ್ಟಿದ್ದರು. ಪೆರ್ರಿ ಇದೀಗ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದ್ದಾರೆ. 

WPL ಕಪ್ ಮಾತ್ರವಲ್ಲ, ಬಹುತೇಕ ಎಲ್ಲಾ ಪ್ರಶಸ್ತಿ ಗೆದ್ದ ನಮ್ಮ ಆರ್‌ಸಿಬಿ..! ಅದರಲ್ಲೂ ರೆಕಾರ್ಡ್

ತಮಿಳುನಾಡು ರಣಜಿ ತಂಡದಲ್ಲಿ ಒಂದೇ ತಂಡಕ್ಕೆ ಆಡಿದ, ಟೀಂ ಇಂಡಿಯಾದಲ್ಲೂ ಜೊತೆಯಾಗಿ ಆಡಿದ ಆಪ್ತ ದಿನೇಶ್ ಕಾರ್ತಿಕ್ ಮೊದಲ ಪತ್ನಿಯನ್ನೇ ಪಟಾಯಿಸಿದ್ದ ಮುರಳಿ ವಿಜಯ್ ಕೊನೆಗೆ ಮದುವೆಯಾಗಿದ್ದರು. ಆಪ್ತ ಗೆಳೆಯನೇ ತನ್ನ ಹೆಂಡತಿಯನ್ನು ಮದುವೆಯಾದ ಬಳಿಕ ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಕ್ರಿಕೆಟ್ ಮೇಲೆ ಹಿಡಿತ ಸಡಿಲಗೊಂಡಿತು. ಟೀಂ ಇಂಡಿಯಾದಿಂದ ಹೊರಬಿದ್ದರು. ದಿನೇಶ್ ಕಾರ್ತಿಕ್ ಈ ಆಘಾತದಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ತೆಗೆದುಕೊಂಡರು. ಬಳಿಕ ಟೀಂ ಇಂಡಿಯಾಗೂ ಕಮ್‌ಬ್ಯಾಕ್ ಮಾಡಿದ್ದರು. ಇದೇ ವೇಳೆ ಕಾರ್ತಿಕ್ ಬಾಳಿಗೆ ಭಾರತದ ಖ್ಯಾತ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಆಗಮನವಾಗಿತ್ತು. ಸ್ನೇಹ, ಪ್ರೀತಿಯಾಗಿ ಮದುವೆ ಅರ್ಥ ಪಡೆದುಕೊಂಡಿತ್ತು.