Asianet Suvarna News Asianet Suvarna News

ಧೋನಿ, ಕೊಹ್ಲಿ, ಸಚಿನ್‌, ರೋಹಿತ್‌ ಇವರೆಲ್ಲರ ಸಂಪತ್ತು ಕೂಡಿಸಿದ್ರೂ, ಭಾರತದ ಈ ಮಾಜಿ ಕ್ರಿಕೆಟರ್‌ ಶ್ರೀಮಂತಿಕೆಗೆ ಸಮವಲ್ಲ!


Indias Richest Cricketer ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರು ಏಪ್ರಿಲ್ 1967 ರಲ್ಲಿ ಜನಿಸಿದರು ಮತ್ತು ಅವರು ರಂಜಿತ್ ಸಿಂಹ ಪ್ರತಾಪ್ ಸಿಂಹ ಗಾಯಕ್ವಾಡ್ ಮತ್ತು ಶುಭಾಂಗಿನಿರಾಜೆ ಅವರ ಏಕೈಕ ಪುತ್ರ.

Meet India richest cricketer Samarjit singh Ranjitsinh Gaekwad much richer than Dhoni Kohli san
Author
First Published Jun 25, 2024, 7:50 PM IST

ಭಾರತದಲ್ಲಿ ಕ್ರಿಕೆಟ್‌ ನಿಸ್ಸಂದೇಹವಾಗಿ ಅತ್ಯಂತ ಪ್ರಖ್ಯಾತ ಕ್ರೀಡೆ. ಏಕೆಂದರೆ, ಈ ಕ್ರೀಡೆಯನ್ನು ಪ್ರೀತಿ ಮಾಡುವ ಲಕ್ಷಾಂತರ ಜನರು ದೇಶದಲ್ಲಿದ್ದಾರೆ. ಕ್ರಿಕೆಟ್‌ ಎಷ್ಟು ಪ್ರಖ್ಯಾತವಾಗಿದೆಯೋ, ಭಾರತೀಯ ಕ್ರಿಕೆಟಿಗರು ಕೂಡ ಅಷ್ಟೇ ಫೇಮಸ್‌. ಕ್ರಿಕೆಟ್‌ನಿಂದಾಗಿ ಅವರು ದೊಡ್ಡ ಪ್ರಮಾಣದ ಸಂಭಾವನೆ ಹಾಗೂ ಜಾಹೀರಾತು ಆಫರ್‌ಗಳನ್ನೂ ಪಡೆಯುತ್ತಾರೆ. ದೇಶದ ಅಗ್ರ ಕ್ರಿಕೆಟಿಗರು ಪ್ರತಿ ವರ್ಷ ಕ್ರಿಕೆಟ್‌ ಆಡದೇ ಇದ್ದರೂ ಕೂಡ ಬಿಸಿಸಿಐ ಕೇಂದ್ರ ಗುತ್ತಿಗೆಯ ಕಾರಣಕ್ಕಾಗಿ ಅಂದಾಜು 7 ಕೋಟಿ ರೂಪಾಯಿ ವೇತನ ಪಡೆದುಕೊಳ್ಳುತ್ತಾರೆ. ಕ್ರಿಕೆಟ್‌ನಿಂದ ಮಾತ್ರವಲ್ಲದೆ, ಜಾಹೀರಾತಿನಿಂದಲೂ ದೊಡ್ಡ ಕ್ರಿಕೆಟಿಗರು ಭಾರೀ ಹಣ ಸಂಪಾದನೆ ಮಾಡುತ್ತಾರೆ. ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ಎಂಎಸ್‌ ಧೋನಿ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರು ಎಂದೇ ಪರಿಗಣಿಸಲಾಗುತ್ತದೆ. ಆದರೆ, ಭಾರತದಲ್ಲಿ ಇವರೆಲ್ಲರಿಗಿಂತ ಶ್ರೀಮಂತ ಮಾಜಿ ಕ್ರಿಕೆಟಿಗರು ಒಬ್ಬರಿದ್ದಾರೆ. ಸಚಿನ್‌, ಕೊಹ್ಲಿ, ಧೋನಿ, ರೋಹಿತ್‌ ಶರ್ಮ, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ ಇವರೆಲ್ಲರ ಆಸ್ತಿಯನ್ನು ಒಟ್ಟುಗೂಡಿಸಿದರೂ ಇವರ ಆಸ್ತಿಗೆ ಸಿರಿವಂತಿಕೆಗೆ ಸಮನಲ್ಲ. ಈ ಮಾಜಿ ಆಟಗಾರನ ಹೆಸರು ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್.

ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರು ಏಪ್ರಿಲ್ 1967 ರಲ್ಲಿ ಜನಿಸಿದರು ಮತ್ತು ಅವರು ರಂಜಿತ್ ಸಿಂಹ ಪ್ರತಾಪ್ ಸಿಂಹ ಗಾಯಕ್ವಾಡ್ ಮತ್ತು ಶುಭಾಂಗಿನಿರಾಜೆ ಅವರ ಏಕೈಕ ಪುತ್ರ. ಸಮರ್ಜಿತ್‌ಸಿಂಗ್ ರಂಜಿತ್‌ಸಿಂಗ್ ಗಾಯಕ್ವಾಡ್ ತಮ್ಮ ಶಾಲಾ ಶಿಕ್ಷಣಕ್ಕಾಗಿ ಪ್ರತಿಷ್ಠಿತ ದಿ ಡೂನ್ ಶಾಲೆಗೆ ಹೋಗಿದ್ದರು. ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಸಮರ್ಜಿತ್‌ ರಂಜಿತ್‌ ಸಿಂಗ್‌, ತಮ್ಮ ಶಾಲೆಯ ಫುಟ್‌ಬಾಲ್‌, ಟೆನಿಸ್‌ ಹಾಗೂ ಕ್ರಿಕೆಟ್‌ ಟೀಮ್‌ಗೆ ಕ್ಯಾಪ್ಟನ್‌ ಆಗಿದ್ದರು.

ಸಮರ್ಜಿತ್ ಸಿಂಗ್‌ ರಂಜಿತ್ ಸಿಂಗ್ ಗಾಯಕ್ವಾಡ್ ಅವರು ರಣಜಿ ಟ್ರೋಫಿಯಲ್ಲಿ ಬರೋಡಾ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಆಡಿದ್ದರು. ಅವರು 1987/88 ಮತ್ತು 1988/89 ಋತುಗಳಲ್ಲಿ ಬರೋಡಾ ತಂಡದ ಪರವಾಗಿ ಆಟವಾಡಿದ್ದರು. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಸಮರ್ಜಿತ್‌ಸಿಂಗ್ ರಂಜಿತ್ಸಿಂಗ್ ಗಾಯಕ್ವಾಡ್ ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.

ಹುಡ್ಗೀರು ಮನ್ಸು ಮಾಡಿದ್ರೆ ಹುಡುಗರಿಂದ ಏನ್‌ ಬೇಕಾದ್ರೂ ಮಾಡಿಸ್ತಾರೆ: ಎಂಥಾ ಮಾತು ಆಡಿಬಿಟ್ರು ನಟಿ ನಿವೇಥಾ!

ಸಮರ್ಜಿತ್ ಸಿಂಗ್‌ ಅವರ ಒಟ್ಟಾರೆ ಆಸ್ತಿ 20 ಸಾವಿರ ಕೋಟಿಗಿಂತಲೂ ಹೆಚ್ಚು. ಇವರು ಭಾರತದ ಶ್ರೀಮಂತ ಕ್ರಿಕೆಟಿಗ. ಅವರ ತಂದೆ ರಂಜಿತ್‌ಸಿಂಹ ಪ್ರತಾಪ್‌ಸಿಂಹ ಗಾಯಕ್ವಾಡ್ ಅವರ ಮರಣದ ನಂತರ, ಜೂನ್ 2012 ರಲ್ಲಿ ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ಸಮರ್ಜಿತ್‌ಸಿಂಹ ರಂಜಿತ್‌ಸಿಂಹ ಗಾಯಕ್ವಾಡ್ ಅವರು ಬರೋಡಾದ ಮಹಾರಾಜರಾಗಿ ಪಟ್ಟಾಭಿಷೇಕಕ್ಕೆ ಒಳಗಾಗಿದ್ದರಯ.. ಲಕ್ಷ್ಮಿ ವಿಲಾಸ್ ಅರಮನೆಯು ಅತಿದೊಡ್ಡ ಖಾಸಗಿ ನಿವಾಸವಾಗಿದೆ. ಗುಜರಾತ್ ಮತ್ತು ಬನಾರಸ್‌ನ 17 ಪ್ರಮುಖ ದೇವಾಲಯಗಳ ದೇವಾಲಯದ ಟ್ರಸ್ಟ್‌ಗಳನ್ನು ಸಹ ರಂಜಿತ್‌ಸಿನ್ಹ್ ಗಾಯಕ್ವಾಡ್ ನಿಯಂತ್ರಿಸುತ್ತಾರೆ. ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರು ಗುಜರಾತ್ ನ ವಾಂಕನೇರ್ ರಾಜ್ಯಕ್ಕೆ ಸೇರಿದ ರಾಧಿಕರಾಜೆ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದಾರೆ.

ನಿವೇತಾ ಪೇತುರಾಜ್‌-ಉದಯನಿಧಿ ಸ್ಟ್ಯಾಲಿನ್‌ ಕುರಿತಾಗಿ 'ಬಿಗ್‌; ಗಾಸಿಪ್‌, 'ಇದೆಲ್ಲ ಸುಳ್ಳು..' ಎಂದ ನಟಿ!

Latest Videos
Follow Us:
Download App:
  • android
  • ios