manipulative Women Comments of Nivetha Pethuraj ಮಹಿಳೆಯರ ಕುರಿತಾಗಿ ತಮಿಳು ನಟಿ ನಿವೇಥಾ ಪೇತುರಾಜ್‌ ಹೇಳಿರುವ ವಿಡಿಯೋ ಸಖತ್‌ ವೈರಲ್‌ ಆಗಿದೆ. ಇದರಲ್ಲಿ ಮಹಿಳೆಯರು ತುಂಬಾ ಮ್ಯಾನ್ಯುಪ್ಯುಲೇಟಿವ್‌ ಎಂದು ಅವರು ಹೇಳಿದ್ದಾರೆ.

ನಟಿ ನಿವೇಥಾ ಪೇತುರಾಜ್‌ ಮಹಿಳೆಯರ ಕುರಿತಾಗಿ ನೀಡಿರುವ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಹೆಚ್ಚಿನವರು ಈ ವಿಚಾರವನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ನಿವೇತಾ ಪೇತುರಾಜ್‌ ನಟನೆಯ ಪರುವು ತೆಲುಗಿ ವೆಬ್‌ಸಿರೀಸ್‌ ಜೂನ್‌ 14ಕ್ಕೆ ಬಿಡುಗಡೆಯಾಗಿದೆ. ಈ ನಿಟ್ಟಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೇತಾಗೆ ವೆಬ್‌ಸಿರೀಸ್‌ನಲ್ಲಿ ಅವರು ಅಭಿನಯಿಸಿರುವ ಪಲ್ಲವಿ 'ಡಾಲಿ' ಪಾತ್ರದ ಬಗ್ಗೆ ಪ್ರಮುಖ ಪ್ರಶ್ನೆ ಕೇಳಲಾಗಿತ್ತು. ನೀವು ಈಗಾಗಲೇ ಮಾತನಾಡುವ ವೇಳೆ ನಿಮ್ಮ ವೈಯಕ್ತಿಕ ಜೀವನನ್ನೂ ಈ ಡಾಲಿ ಪಾತ್ರಕ್ಕೂ ಸಾಕಷ್ಟು ಕನೆಕ್ಟ್‌ ಇದೆ ಎಂದು ಹೇಳಿದ್ದೀರಿ. ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಯಾವುದೇ ಕೆಲಸ ಮಾಡೋಕೆ ಮುಂಚೆ ಆಲೋಚನೆ ಮಾಡಬೇಕು ಎಂದು ಹೇಳಿದ್ದೀರಿ. ಹಾಗಾಗಿ ಈ ಸಿರೀಸ್‌ ಮಾಡುವಾಗ ನಿಮಗೆ ಡಿಸ್ಟರ್ಬ್‌ ಮಾಡಿದಂಥ ಒಂದು ಸಂಗತಿ ಯಾವುದು ಎಂದು ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಆಕೆ, ಡಾಲಿ ಅನ್ನೋ ಪಾತ್ರ ತುಂಬಾನೇ ಮ್ಯಾನ್ಯುಪ್ಯುಲೇಟಿವ್‌. ಸಾಮಾನ್ಯವಾಗಿ ಹೆಚ್ಚಿನ ರಿಲೇಷನ್‌ಷಿಪ್‌ಗಳಲ್ಲಿ, ನಿಜವಾಗಿ ಹೇಳಬೇಕೆಂದರೆ, ಯುವತಿಯರು ತುಂಬಾನೇ ಮ್ಯಾನ್ಯುಪ್ಯುಲೇಟಿವ್‌ ಆಗಿ ಇರುತ್ತಾರೆ. ಹುಡುಗರಿಗೆ ಇದು ಗೊತ್ತೇ ಆಗೋದಿಲ್ಲ. ಇದಕ್ಕೆ ದುರಾದೃಷ್ಟ ಎಂದೇ ಹೇಳಬೇಕು. ಇದು ಇರುವುದು ಇದೇ ರೀತಿ. ಈ ಪಾತ್ರ ಮಾಡುವಾಗ ಅದು ನನಗೆ ಗೊತ್ತಿರಲಿಲ್ಲ. ಆದರೆ, ಈ ಸಿರೀಸ್‌ನ ಎಂಟೂ ಎಪಿಸೋಡ್‌ ನೋಡಿದ ಬಳಿಕ ಇದು ನನ್ನ ಅರಿವಿಗೆ ಬಂದಿದೆ. ಯುವತಿಯರು ಮನಸ್ಸು ಮಾಡಿದರೆ, ಹುಡುಗರಿಂದ ಏನು ಬೇಕಾದರೂ ಮಾಡಿಸುತ್ತಾರೆ. ಇದು ಒಳ್ಳೆಯ ವಿಚಾರಕ್ಕೂ ಆಗಿರಬಹುದು. ಕೆಟ್ಟ ವಿಚಾರಕ್ಕೂ ಆಗಿರಬಹುದು. ಜಗತ್ತನ್ನೇ ಗೆಲ್ಲಲು ಯುವತಿಯೊಬ್ಬಳು ಒಬ್ಬ ಹುಡುಗನಿಗೆ ಬೆಂಬಲವಾಗಿ ನಿಲ್ಲಬಹುದು. ಅದೇ ರೀತಿ, ಒಬ್ಬನನ್ನು ಸಾಯಿಸೋಕು ಕೂಡ ಯುವತಿಯರು ಕಾರಣವಾಗಬಹುದು ಎಂದು ನಿವೇಥಾ ಹೇಳಿದ್ದಾರೆ.

ಹೆಚ್ಚಿನವರು ನಿವೇಥಾ ಹೇಳಿದ ಮಾತನ್ನು ರೇಣುಕಾಸ್ವಾಮಿ ಮರ್ಡರ್‌ ಕೇಸ್‌ಗೆ ಲಿಂಕ್‌ ಮಾಡಿಸಿದ್ದಾರೆ. ಹಾಗೇನಾದರೂ ಪವಿತ್ರಾ ಗೌಡ, ಈ ವಿಚಾರವನ್ನು ದರ್ಶನ್‌ಗೆ ಹೇಳುವ ಬದಲು ಪೊಲೀಸ್‌ ಠಾಣೆಗೆ ಹೋಗಿ ವ್ಯವಸ್ಥಿತವಾಗಿ ದೂರು ದಾಖಲು ಮಾಡಿದ್ದರೆ, ಖಂಡಿತವಾಗಿ ಇಂದು ಇಂಥ ದಿನಗಳು ಬರುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುಡುಗಿಯುರು ಪ್ರತಿ ವಿಚಾರವನ್ನೂ ಮ್ಯಾನ್ಯುಪ್ಯುಲೇಟಿವ್‌ ಆಗಿ ಯೋಚನೆ ಮಾಡ್ತಾರೆ. ಅದೇ ಕಾರಣಕ್ಕೆ ದರ್ಶನ್‌ ಇಂದು ಜೈಲುಪಾಲಾಗಬೇಕಾಗಿ ಬಂದಿದೆ. ಬಹುಶಃ ಜೈಲಲ್ಲಿರುವ ದರ್ಶನ್‌ಗೂ ಕೂಡ ಪವಿತ್ರಾ ಗೌಡ ಕಾರಣಕ್ಕಾಗಿಯೇ ತಾವು ಜೈಲಲಿದ್ದೇನೆ ಅನ್ನೋ ಅರಿವು ಕೂಡ ಇರಲಿಕ್ಕಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

ನಿವೇತಾ ಪೇತುರಾಜ್‌-ಉದಯನಿಧಿ ಸ್ಟ್ಯಾಲಿನ್‌ ಕುರಿತಾಗಿ 'ಬಿಗ್‌; ಗಾಸಿಪ್‌, 'ಇದೆಲ್ಲ ಸುಳ್ಳು..' ಎಂದ ನಟಿ!

ಇನ್ನು ನಿವೇಥಾ ಪೇತುರಾಜ್‌ ಬಗ್ಗೆ ಹೇಳುವುದಾದರೆ, ಅವರು ಹೆಸರೂ ಕೂಡ ನಟ ಹಾಗೂ ಡಿಎಂಕೆ ರಾಜಕಾರಣಿ ಉದಯನಿಧಿ ಸ್ಟ್ಯಾಲಿನ್‌ ಜೊತೆ ಕೇಳಿ ಬಂದಿತ್ತು. ತಮಿಳುನಾಡು ಸರ್ಕಾರದಲ್ಲಿ ಕ್ರೀಡಾ ಸಚಿವನಾಗಿರುವ ಉದಯನಿಧಿ ಸ್ಟ್ಯಾಲಿನ್‌, ನಿವೇಥಾ ಪೇತುರಾಜ್‌ಗಾಗಿ ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದಾರೆ. ಆಕೆಗೆ ದುಬೈನಲ್ಲಿ ಫ್ಲ್ಯಾಟ್‌ ಕೂಡ ಕೊಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಅದಲ್ಲದೆ, ಉದಯನಿಧಿ ಸ್ಟ್ಯಾಲಿನ್‌ನ ಭೇಟಿ ಮಾಡುವ ಸಲುವಾಗಿ ಆಕೆ ದುಬೈನಿಂದ ಚೆನ್ನೈಗೆ ಬರುತ್ತಲೇ ಇರುತ್ತಾರೆ ಎನ್ನಲಾಗಿತ್ತು. ತಮ್ಮ ಕುರಿತಾಗಿ ಬಂದ ಈ ಸುದ್ದಿಗಳನ್ನು ನಿರಾಕರಿಸಿದ್ದ ನಿವೇಥಾ ಪೇತುರಾಜ್‌, ನಾನು ದುಬೈನಲ್ಲ ಮನೆ ಕೊಂಡುಕೊಳ್ಳುವಷ್ಟು ಆರ್ಥಿಕವಾಗಿ ಸಬಲಳಾಗಿದ್ದೇನೆ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ನಟಿ ನಿವೇತಾ ಆಹಾರದಲ್ಲಿ ಜಿರಳೆ; ಆನ್‌ಲೈನ್‌ ಆರ್ಡರ್ ಸೃಷ್ಟಿಸಿದ ಅವಾಂತರ!

Scroll to load tweet…