ಐಪಿಎಲ್‌ನಲ್ಲಿ ಇಲ್ಲ, ಪಾಕಿಸ್ತಾನ ರಸ್ತೆಯಲ್ಲಿ ಸೆಲ್ವಾರ್ ಕಮೀಜ್ ತೊಟ್ಟು ತಿರುಗಾಡುತ್ತಿರುವ ಮ್ಯಾಕ್ಸ್‌ವೆಲ್, ಮ್ಯಾಕ್ಸಿ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಐಪಿಎಲ್‌ನಿಂದ ದೂರ ಉಳಿದಿರುವ ಮ್ಯಾಕ್ಸಿ ಪಾಕ್ ಬೀದಿಯಲ್ಲಿ ಏನು ಮಾಡುತ್ತಿದ್ದಾರೆ.
ಲಾಹೋರ್ (ಏ.28) ಐಪಿಎಲ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಿ ಕ್ರಿಕೆಟಿಗರು ಅಬ್ಬರಿಸುತ್ತಿದ್ದಾರೆ. ಆದರೆ ಈ ಬಾರಿ ಸ್ಪೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಕಾಣಿಸುತ್ತಿಲ್ಲ. 2026ರ ಐಪಿಎಲ್ ಟೂರ್ನಿಯಿಂದ ದೂರ ಉಳಿದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ರಾಂತಿಗೆ ಜಾರಿಲ್ಲ. ಬದಲಾಗಿ ಸದ್ಯ ಮ್ಯಾಕ್ಸ್‌ವೆಲ್ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ. ಪಾಕಿಸ್ತಾನದ ಉಡುಗೆ ಶೆಲ್ವಾರ್ ಕಮೀಜ್ ತೊಟ್ಟು ಮ್ಯಾಕ್ಸ್‌ವೆಲ್ ತಿರುಗಾಡುತ್ತಿದ್ದಾರೆ. ಮ್ಯಾಕ್ಸ್‌ವೆಲ್ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನದ ಸಾಂಪ್ರದಾಯಿಕ ಉಡುಗೆ ಶೆಲ್ವಾರ್ ಕಮೀಜ್ ತೊಟ್ಟು ತಿರುಗಾಡುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್ ಬಿಳಿ ಶೆಲ್ವಾರ್ ಕಮೀಜ್, ಸನ್ ಗ್ಲಾಸ್, ಕ್ಯಾಪ್ ಹಾಗೂ ಬ್ಯಾಗ್ ಹಿಡಿರುವ ಮ್ಯಾಕ್ಸ್‌ವೆಲ್ ಎಲ್ಲೆಡೆ ತಿರುಗಾಡುತ್ತಿದ್ದಾರೆ.
ಪಿಎಸ್ಎಲ್‌ನಲ್ಲಿ ಮ್ಯಾಕ್ಸ್‌ವೆಲ್
ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ನೇರವಾಗಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆಡುತ್ತಿದ್ದಾರೆ. ಹೈದರಾಬಾದ್ ಕಿಂಗ್ಸ್‌ಮನ್ ತಂಡದ ಪರ ಆಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲಾಹೋರ್, ಕರಾಚಿ, ರಾವಲ್ಪಿಂಡಿ, ಮುಲ್ತಾನ್ ನಗರದಲ್ಲಿ ಪಿಎಸ್ಎಲ್ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕಾಗಿ ವಿಮಾನ ನಿಲ್ದಾಣಕ್ಕೆ ಕಿಂಗ್ಸ್‌ಮನ್ ತಂಡ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಈ ವೇಳೆ ಇಡೀ ತಂಡ ಪಾಕಿಸ್ತಾನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿತ್ತು.
ಗ್ರೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ತಂಡದ ಸದಸ್ಯರು ಧರಿಸಿದ ಈ ಉಡುಗೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಒಂದೆಡೆ ಪಾಕಿಸ್ತಾನದ ಸಾಂಪ್ರದಾಯಿಕ ಡ್ರೆಸ್ ಎಂಬ ಮಾತುಗಳು ಕೇಳಿಬಂದರೆ, ಮತ್ತೊಂದೆಡೆ ಪಾಕಿಸ್ತಾನ ಬಲವಂತವಾಗಿ ತಂಡದ ಟ್ರಾವೆಲ್ ವೇಳೆ ಈ ರೀತಿಯ ಡ್ರೆಸ್ ಹಾಕಿಸುತ್ತಿದೆ ಅನ್ನೋ ಟೀಕೆಗಳು ವ್ಯಕ್ತವಾಗುತ್ತಿದೆ.
2026ರ ಐಪಿಎಲ್‌ನಿಂದ ಹೊರಗುಳಿದ ಮ್ಯಾಕ್ಸ್‌ವೆಲ್
206ರ ಐಪಿಎಲ್ ಟೂರ್ನಿಯಿಂದ ಮ್ಯಾಕ್ಸ್‌ವೆಲ್ ಹೊರಗುಳಿದಿದ್ದಾರೆ. ಐಪಿಎಲ್ ಹರಾಜಿನ ವೇಳೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಲಿಲ್ಲ. ಈ ಕುರಿತು ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ ಕೆಲ ಆವೃತ್ತಿಗಳಲ್ಲಿ ಅಬ್ಬರಿಸಿದ್ದ ಮ್ಯಾಕ್ಸ್‌ವೆಲ್ ಬಳಿಕ ಸಂಪೂರ್ಣ ವೈಫಲ್ಯ ಕಂಡಿತ್ತು. ಮ್ಯಾಕ್ಸ್‌ವೆಲ್ ಇತ್ತೀಚಿನ ಕೆಲ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿಯಾಗಿಲ್ಲ. ಸತತ ಕಳಪೆ ಪ್ರದರ್ಶನ ಮೂಲಕ ನಿರಾಸೆ ಅನುಭವಿಸಿದ್ದರು. ಇತ್ತ ಈ ಬಾರಿ ಮ್ಯಾಕ್ಸ್‌ವೆಲ್ ಹರಾಜಿನಲ್ಲಿ ಮಾರಾಟವಾಗೋದೆ ಅನುಮಾನ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಖುದ್ದಾಗಿ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿದೆ ದೂರ ಉಳಿದಿದ್ದರು.


