ಹಲವು ಪ್ರತಿಭೆಗಳು ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ. ಇದೀಗ ಲಡಾಖ್ ಶಾಲಾ ಬಾಲಕಿಯ ಕ್ರಿಕೆಟ್ ಆಟಕ್ಕೆ ಇದೀಗ ಜನರು ಫಿದಾ ಆಗಿದ್ದಾರೆ. ಹೆಲಿಕಾಪ್ಟರ್ ಶಾಟ್ ಸೇರಿದಂತೆ ಹಲವು ಕ್ರಿಕೆಟ್ ಶಾಟ್‌ಗಳನ್ನು ಕರಗತ ಮಾಡಿಕೊಂಡಿದ್ದಾಳೆ. 6ನೇ ತರಗತಿ ಬಾಲಕಿಯ ಕ್ರಿಕೆಟ್ ವೈರಲ್ ವಿಡಿಯೋ ಇಲ್ಲಿದೆ. 

ಲಡಾಖ್(ಅ.15): ಆರನೇ ತರಗತಿ ವಿದ್ಯಾರ್ಥಿನಿ. ಹೆಸರು ಮಖ್ಸೋಮ. ಲಡಾಖ್ ಪ್ರಾಂತ್ಯದ ಈ ಬಾಲಕಿ ಕ್ರಿಕೆಟ್ ಆಟಕ್ಕೆ ಇದೀಗ ನೆಟ್ಟಿಗರು ಫಿದಾ ಆಗಿದ್ದಾರೆ. ಹೊಡಿ ಬಡಿ ಆಟದ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಪ್ರತಿ ಎಸೆತಕ್ಕೆ ಪ್ರತ್ಯುತ್ತರ ನೀಡುವ ಈ ಬಾಲಕಿ ಪ್ರತಿಭೆಗೆ ಸಲಾಂ ಹೇಳಿದ್ದಾರೆ. ಲಡಾಖ್ ಶಾಲಾ ಶಿಕ್ಷಣ ನಿರ್ದೇಶಕ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಈಕೆಯ ಕ್ರಿಕೆಟ್ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ನನ್ನ ತಂದೆ, ಶಾಲೆಯಲ್ಲಿ ಶಿಕ್ಷಕರು ಆಟವಾಡಲು ಪ್ರೇರೇಪಿಸಿದ್ದಾರೆ. ಅವರ ಮಾರ್ಗದರ್ಶನದಂತೆ ಕ್ರಿಕೆಟ್ ಆಡುತ್ತಿದ್ದೇನೆ. ತಂದೆ ನನಗೆ ಹೆಲಿಕಾಪ್ಟರ್ ಶಾಟ್ ಬಾರಿಸುವುದನ್ನು ಕಲಿಸಿದ್ದಾರೆ ಎಂದು ಬಾಲಕಿ ಹೇಳಿದ್ದಾರೆ. ಇಷ್ಟೇ ಅಲ್ಲ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ. ಕೊಹ್ಲಿಯಂತೆ ಆಡಲು ಬಯಸುತ್ತೇನೆ ಎಂದು ಮಖ್ಸೋಮ ಹೇಳಿದ್ದಾಳೆ.

ಲಡಾಖ್ ಶಾಲಾ ಬಾಲಕಿ ಮಖ್ಸೋಮ ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದಾಳೆ. ಹೀಗಾಗಿ ಒಂದನೇ ತರಗತಿಯಿಂದಲೇ ಕ್ರಿಕೆಟ್ ಆಡಲು ಶುರುಮಾಡಿದ್ದಾಳೆ. ಈ ವಿಡಿಯೋದಲ್ಲಿ ಬಾಲಕಿ ಎಲ್ಲಾ ಎಸೆತಕ್ಕೂ ಟಿ20 ಶೈಲಿಯಲ್ಲಿ ಉತ್ತರಿಸಿದ್ದಾಳೆ. ಒಂದು ಹೊಡೆತಕ್ಕೆ ಬೌಲ್ ಮೈದಾನದಿಂದ ಹೊರಕ್ಕೆ ಬಿದ್ದಿದೆ. ಈಕೆಯ ಕ್ರಿಕೆಟಿಂಗ್ ಶಾಟ್ಸ್ ಅದ್ಭುತವಾಗಿದೆ. ದಿಟ್ಟ ಹೊಡೆತ ಹಾಗೂ ರನ್ನಿಂಗ್ ಕೂಡ ಮಾಡುತ್ತಿದ್ದಾಳೆ. ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಭಾರಿ ಲೈಕ್ಸ್ ಹಾಗೂ ಕಮೆಂಟ್ಸ್ ಬಂದಿದೆ.

Scroll to load tweet…

ಸೆಪ್ಟೆಂಬರ್‌ನಲ್ಲಿ ಲಡಾಖ್ ಪ್ರವಾಸಕ್ಕೆ ಹೋಗ್ಲೇ ಬೇಕು!

ನಾನು ಬಾಲ್ಯದಿಂದಲೇ ಕ್ರಿಕೆಟ್ ಆಡುತ್ತಿದ್ದೇನೆ. ನಾನು ಹೆಲಿಕಾಪ್ಟರ್ ಶಾಟ್ ಬಾರಿಸಲು ಕಲಿಯುತ್ತಿದ್ದೇನೆ. ಇದರ ಜೊತೆಗೆ ಹಲವು ಶಾಟ್ಸ್ ಕಲಿಯುತ್ತಿದ್ದೇನೆ. ಒಂದು ರನ್ ಓಡಿದ ಬಳಿಕ 2 ರನ್ ಓಡುವಾಗ ಸುಸ್ತಾಗುತ್ತಿದೆ. 3ನೇ ರನ್ ಓಡುವುದು ಬೇಡ ಎನಿಸುತ್ತದೆ. ನನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ. ಕೊಹ್ಲಿಯಂತೆ ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಮಖ್ಸೋಮ ಹೇಳಿದ್ದಾರೆ.

ಮದುವೆ ಎಂದರೇನು ? ಎಕ್ಸಾಂನಲ್ಲಿ ಹುಡುಗಿ ಕೊಟ್ಟ ಉತ್ತರ ಎಷ್ಟು ಮಜವಾಗಿದೆ ನೋಡಿ !

ಹಲವು ಶೀಘ್ರದಲ್ಲೇ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಆಡುವಂತಾಗಲಿ ಎಂದು ಹಾರೈಸಿದ್ದಾರೆ. ಇನ್ನೂ ಹಲವರು ಉತ್ತಮ ಪ್ರತಿಭೆಯನ್ನು ಬೆಳಕಿಗೆ ತಂದ ಲಢಾಕ್ ಶಾಲಾ ಶಿಕ್ಷಣ ನಿರ್ದೇಶಕರಿಗೆ ಧನ್ಯವಾದ ಎಂದಿದ್ದಾರೆ. ಈ ಮಕ್ಕಳಿಗೆ ಸೌಲಭ್ಯಗಳು ಸಿಗುವಂತಾಗಲಿ. ಈ ನಿಟ್ಟಿನಲ್ಲಿನ ಕೆಲಸಗಳು ನಡೆಯಲಿ. ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಬೇಕು ಅನ್ನೋ ಆಗ್ರಹವೂ ಕೇಳಿಬಂದಿದೆ.