Asianet Suvarna News Asianet Suvarna News

KPL ಫಿಕ್ಸಿಂಗ್: ಗೌಪ್ಯ ಸ್ಥಳದಲ್ಲಿ ಮಾಡೆಲ್ ವಿಚಾರಣೆ, ನಟಿಯರ ಹೆಸರು ಬಹಿರಂಗ!

ಕರ್ನಾಟಕ ಪ್ರಿಮಿಯರ್ ಲೀಗ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಕೊಂಡಿದೆ. ಸಿಸಿಬಿ ಪೊಲೀಸರು ಈಗಾಗಲೇ ಕ್ರಿಕೆಟಿಗರು , ಫ್ರಾಂಚೈಸಿ ಮಾಲೀಕರು, ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪ್ರಮುಖ ಆಡಳಿತ ಮಂಡಳಿಯ ವಿಚಾರಣೆ ನಡೆಸಿದೆ. ಇದೀಗ ಕೆಎಸ್‌ಸಿ ಸದಸ್ಯರು ಹಾಗೂ ಕೆಪಿಎಲ್ ಜೊತೆ ಗುರುತಿಸಿಕೊಂಡಿರುವ ಮಾಡೆಲ್ ಹಾಗೂ ನಟಿಯರ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಹಲವು ನಟಿಯರ ಹೆಸರು ಬಹಿರಂಗಗೊಂಡಿದೆ. 

KPL Fixing probe ccb police issued notice to model and ksca members
Author
Bengaluru, First Published Jan 23, 2020, 11:12 AM IST
  • Facebook
  • Twitter
  • Whatsapp

ಬೆಂಗಳೂರು(ಜ.23): ಕೆಪಿಎಲ್ ಟೂರ್ನಿಯಲ್ಲಿ ನಡೆದಿರುವ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಹಗರಣದ ವ್ಯಾಪಕತೆ ತೀವ್ರವಾಗುತ್ತಿದೆ. ದಿನದಿಂದಕ್ಕೆ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬುಕ್ಕಿಗಳು, ಕ್ರಿಕೆಟಿಗರು, ಫ್ರಾಂಚೈಸಿ ಮಾಲೀಕರ ಬೆನ್ನಲ್ಲೇ ಕರ್ನಾಟಕ ಕ್ರಿಕೆಟ್ ಸಂಸ್ಥೆ ಸದಸ್ಯರ ವಿಚಾರಣೆ ಆರಂಭವಾಗಿದೆ. 

ಇದನ್ನೂ ಓದಿ: KPL ಬೆಟ್ಟಿಂಗ್ ಪ್ರಕರಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ಸಿಸಿಬಿ ದಾಳಿ

ಕರ್ನಾಟಕ ಕ್ರಿಕೆಟ್ ಸಂಸ್ಥೆ ಸದಸ್ಯರಿಗೆ ಸಿಸಿಬಿ ಪೊಲೀಸರ ಡ್ರಿಲ್ ಆರಂಭಗೊಂಡಿದೆ. ಈಗಾಗಲೇ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ.ಮ್ಯಾಚ್ ಫಿಕ್ಸಿಂಗ್ನಲ್ಲಿ ಕೆಎಸ್ಸಿಎ ಸದಸ್ಯರ ಪಾಲು ಎಷ್ಟಿದೆ..? ಕುರಿತು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದಸ್ಯರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ವಿಚಾರಣೆ ವೇಳೆ ಮತ್ತಷ್ಚು ಕೆಎಸ್‌ಸಿಎ ಸದಸ್ಯರ ಮೇಲೆ ಅನುಮಾನ ವ್ಯಕ್ತವಾಗಿದೆ. 

ಇದನ್ನೂ ಓದಿ: KPL ಫಿಕ್ಸಿಂಗ್: ಅರೆಸ್ಟ್ ಆಗಿದ್ದ CM ಗೌತಮ್, ಖಾಜಿಗೆ ಬಿಗ್ ರಿಲೀಫ್!

ಕೆಎಸ್‌ಸಿಎ ಸದಸ್ಯರಿಗೆ 150 ಪ್ರಶ್ನೆಗಳನ್ನು ಸಿಸಿಬಿ ಪೊಲೀಸರು ಕೇಳಿದ್ದಾರೆ. ಕ್ರಿಕೆಟ್ ತಜ್ಞರ ಜೊತೆ ಚರ್ಚಿಸಿ ಪ್ರಶ್ನೆ ತಯಾರಿಸಲಾಗಿತ್ತು. ಸದಸ್ಯರ ಹೆಚ್ಚಿನ ವಿಚಾರಣೆಯಲ್ಲಿ ಕೆಲ ಸ್ಟಾರ್ ನಟಿಯರು ಹಾಗೂ ಮಾಡೆಲ್ ಹೆಸರು ಬಹಿರಂಗವಾಗಿದೆ. ಇದರಂತೆ ಮಾಡೆಲ್ ನೊಟೀಸ್ ನೀಡಲಾಗಿತ್ತು. ಸಿಸಿಬಿ ಪೊಲೀಸರ ನೊಟೀಸ್‌ಗೆ ಬೆದರಿದ ಮಾಡೆಲ್, ತಕ್ಷಣವೇ ವಿಚಾರಣೆಗೆ ಹಾಜರಾಗಿದ್ದಾರೆ. ಮಾಡೆಲನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: 3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

ವಿಚಾರಣೆ ಮಾಹಿತಿ ಬಹಿರಂಗ ಪಡಿಸದಂತೆ ಮಾಡೆಲ್, ಸಿಸಿಬಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಸ್ಯಾಂಡಲ್‌ವುಡ್ ನಟಿಯರಿಗಿಂತ ಮಾಡೆಲ್‌ಗಳೇ ಬುಕ್ಕಿಗಳು ಹಾಗೂ ಆಟಗಾರರ ಜೊತೆ  ಸಂಪರ್ಕದಲ್ಲಿದ್ದ ಮಾಹಿತಿ ಬಹಿರಂಗ. ಆಟಗಾರರನ್ನು ಖುಷಿ ಪಡಿಸಲು ಬುಕ್ಕಿಗಳು ಪಾರ್ಟಿ ಆಯೋಜಿಸುತ್ತಿದ್ದರು. ಈ ಪಾರ್ಟಿಯಲ್ಲಿ ಮಾಡೆಲ್ ಮೂಲಕ ಫಿಕ್ಸಿಂಗ್ ಮಾಡಲು ಆಟಗಾರರಿಗೆ ಖೆಡ್ಡಾ ತೂಡುತ್ತಿದ್ದ ಮಾಹಿತಿ ಬಹಿರಂಗವಾಗಿದೆ. ಶೀಘ್ರದಲ್ಲಿ ಮತ್ತಷ್ಟು ಮಾಡೆಲ್‌ಗೆ ನೊಟೀಸ್ ನೀಡಲು ಸಿಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

Follow Us:
Download App:
  • android
  • ios