ಬೆಂಗಳೂರು(ಡಿ.11): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಫಿಕ್ಸಿಂಗ್ ಪ್ರಕರಣ ಅಂತಿಮ ಹಂತದ ತಲುಪುತ್ತಿದ್ದಂತೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಫಿಕ್ಸಿಂಗ್ ಆರೋಪದ ಮೇಲೆ ಅರೆಸ್ಟ್ ಆಗಿರುವ ಕ್ರಿಕೆಟಿಗರಾದ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಜಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಬರೂ ಕ್ರಿಕೆಟಿಗರಿಗೆ  ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: KPL ಫಿಕ್ಸಿಂಗ್‌ನಲ್ಲಿ IPL ನಂಟು; ತನಿಖೆಗೆ ಮುಂದಾದ ಸಿಸಿಬಿ!

ಕ್ರಿಕೆಟಿಗರ ವಿರುದ್ಧ ಕೇಳಿ ಬಂದಿರು ಫಿಕ್ಸಿಂಗ್ ಆರೋಪಕ್ಕೆ ಆಧಾರಗಳಿಲ್ಲ. ಪೊಲೀಸರು ಮಾಡಿರುವ ಆರೋಪಗಳು ಸುಳ್ಳು ಎಂದು ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ಪರ ವಕೀಲರು ವಾದಿಸಿದ್ದಾರೆ. ಹೀಗಾಗಿ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: 3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

2 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ಹಾಗೂ ಪ್ರಕರಣಗಳ ಸಾಕ್ಷ್ಯ ನಾಶಪಡಿಸದಂತೆ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. ಇನ್ನು  ಬಳ್ಳಾರಿ ಟಸ್ಕರ್ ತಂಡದ ಮಾಲೀಕ ಅರವಿಂದ ರೆಡ್ಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ತನಿಖೆ ಆರಂಭವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅರವಿಂದ‌ರೆಡ್ಡಿಗೆ, ಸಿಸಿಬಿ ನೊಟೀಸ್ ನೀಡಿತ್ತು.  ಪ್ರಕರಣದ 4ನೇ ಆರೋಪಿಯಾಗಿರುವ ಅರವಿಂದ ರೆಡ್ಡಿಗೆ ಹೈಕೋರ್ಟ್ ಏಕಸದಸ್ಯ ಪೀಠ ದಿಂದ‌ ಜಾಮೀನು ಮಂಜೂರು ಮಾಡಿದೆ.