IPL 2024 ಫಾಪ್, ಪಾಟಿದಾರ್, ಕಾರ್ತಿಕ್ ಹಾಫ್ ಸೆಂಚುರಿ, ಮುಂಬೈ ಇಂಡಿಯನ್ಸ್‌ಗೆ 197 ರನ್ ಗುರಿ!
ಕೊಹ್ಲಿ, ವಿಲ್ ಜ್ಯಾಕ್ಸ್ ಹಾಗೂ ಮ್ಯಾಕ್ಸ್‌ವೆಲ್ ವಿಕೆಟ್ ಪತನದಿಂದ ಆತಂಕಗೊಂಡಿದ್ದ ಅಭಿಮಾನಿಗಳಿಗೆ ರಜತ್ ಪಾಟಿದಾರ್ ಹಾಗೂ ಡುಪ್ಲಸಿಸ್ ಆಟ ನಿಟ್ಟಸಿರು ಬಿಡುವಂತೆ ಮಾಡಿತ್ತು. ಇದರ ಜೊತೆಗೆ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 196 ರನ್ ಸಿಡಿಸಿದೆ.
ವಾಂಖೆಡೆ(ಏ.11) ಸತತ ಸೋಲು, ಅಂಕಪಟ್ಟಿಯಲ್ಲಿ 9ನೇ ಸ್ಥಾನ. ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯಗಳಿಂದ ಕಂಗೆಟ್ಟಿರುವ ಆರ್‌ಸಿಬಿ ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ ರನ್ ಸಿಡಿಸಿದೆ. ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸದೆ ಪೆವಿಲಿಯನ್ ಸೇರಿಕೊಂಡ ಆರ್‌ಸಿಬಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿತ್ತು. ಈ ಪಂದ್ಯದಲ್ಲಿ ಕಮ್‌ಬ್ಯಾಕ್ ವಿಶ್ವಾಸ ಕಮರಿಹೋಗುವ ಲಕ್ಷಣಗಳು ಕಾಣಿಸಿತ್ತು. ಆದರೆ ನಾಯಕ ಪಾಫ್ ಡುಪ್ಲಸಿಸ್ ಹಾಗೂ ರಜತ್ ಪಾಟಿದಾರ್ ಹಾಫ್ ಸೆಂಚುರಿ ಆಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಸ್ಫೋಚಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿತು.
ವಾಂಖೆಡೆಯಲ್ಲಿ ನಡೆಯತ್ತಿರುವ ಪಂದ್ಯದಲ್ಲಿ ಮುಂಬೈ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ಆರ್‌ಸಿಬಿ ಆರಂಭ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಕಾರಣ ವಿರಾಟ್ ಕೊಹ್ಲಿ 9 ಎಸತದಲ್ಲಿ 3 ರನ್ ಸಿಡಿಸಿ ಔಟಾದರು. 14 ರನ್ ಸಿಡಿಸುವಷ್ಟರಲ್ಲೇ ಆರ್‌ಸಬಿ ಮೊದಲ ಆಘಾತ ಎದುರಿಸಿತು. ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡ ವಿಲ್ ಜ್ಯಾಕ್ಸ್ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಜ್ಯಾಕ್ಸ್ 8 ರನ್‌ಗೆ ಸುಸ್ತಾದರು.
ಹಾರ್ದಿಕ್ ಪಾಂಡ್ಯ ಸಹೋದರನಿಂದ ಕೋಟ್ಯಾಂತರ ರುಪಾಯಿ ಮಹಾ ಮೋಸ...! ಪಾಂಡ್ಯ ಬ್ರದರ್ ಆರೆಸ್ಟ್
ಫಾಫ್ ಡುಪ್ಲಸಿಸ್ ಹಾಗೂ ರಜತ್ ಪಾಟಿದಾರ್ ಜೊತೆಯಾಟ ಆರ್‌ಸಿಬಿಗೆ ಚೇತರಿಕೆ ನೀಡಿತ್ತು. ಇವರಿಬ್ಬರ ಜೊತೆಯಾಟದಿಂದ ಆರ್‌ಸಿಬಿ 100 ರನ್ ಗಡಿ ದಾಟಿತು. ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಾಟಿದಾರ್ ಹಾಗೂ ಡುಪ್ಲಸಿಸ್ ಹಾಫ್ ಸೆಂಚುರಿ ಸಾಧನೆ ಮಾಡಿದರು. 26 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಇತ್ತ ಫಾಫ್ ಡುಪ್ಲಸಿಸ್ 61 ರನ್ ಸಿಡಿಸಿ ಅಬ್ಬರಿಸಿದರು.
ಮಹಿಪಾಲ್ ಲೊಮ್ರೊರ್, ಸೌರವ್ ಚೌವ್ಹಾಣ್ ಹಾಗೂ ವಿಜಯ ಕುಮಾರ್ ವೈಶಾಕ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ನಿಧಾನವಾಗಿ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಾಯಿತು. 5 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ದಿನೇಶ್ ಕಾರ್ತಿಕ್ ಅಬ್ಬರಿಸಿದರು. 23 ಎಸೆತದಲ್ಲಿ ಕಾರ್ತಿಕ್ ಅಜೇಯ 53 ರನ್ ಸಿಡಿಸಿದರು. ಈ ಮೂಲಕ 8 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿತು.
ಮುಂಬೈ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಮೊತ್ತ ಟಾರ್ಗೆಟ್ ಮಾಡುತ್ತಾ ಅನ್ನೋ ಚರ್ಚೆ ಶುರುವಾಗಿದೆ.
ಕೊಹ್ಲಿ, ರೋಹಿತ್ ಶರ್ಮ ಅಲ್ಲ, ಭಾರತದ ಈ ಸ್ಟಾರ್ ಜಗತ್ತಿನ 'Most Valuable Cricketer' ಎಂದ ದಿನೇಶ್ ಕಾರ್ತಿಕ್!
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಹಿ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಗೆರಾಲ್ಡ್ ಕೊಯೆಟ್ಜ್, ಅಕಾಶ್ ಮಧ್ವಾಲ್