ಕೊಹ್ಲಿ, ರೋಹಿತ್ ಶರ್ಮ ಅಲ್ಲ, ಭಾರತದ ಈ ಸ್ಟಾರ್ ಜಗತ್ತಿನ 'Most Valuable Cricketer' ಎಂದ ದಿನೇಶ್ ಕಾರ್ತಿಕ್!
ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾಲಿ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.
ಬೆಂಗಳೂರು (ಏ.10): ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾತ್ರವೇ ಅಲ್ಲ, ಸಖತ್ ಆಗಿ ಕಾಮೆಂಟರಿಯನ್ನೂ ಮಾಡ್ತಾರೆ. ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಇವರು ಕ್ರಿಕೆಟ್ ವಿಶ್ಲೇಷಣೆಯನ್ನೂ ಮಾಡಿದ್ದಾರೆ. ಹಾಲಿ ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದಾರೆ. ಟೂರ್ನಿಯ ನಡುವೆ, ಮಾಜಿ ಕ್ರಿಕೆಟಿಗರಾದ ನಾಸಿರ್ ಹುಸೇನ್ ಹಾಗೂ ಮೈಕೆಲ್ ಅಥರ್ಟನ್ ಅವರೊಂದಿಗೆ ಕ್ರಿಕೆಟ್ ಕುರಿತಾಗಿ ವಿಶೇಷ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ."ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೂರೂ ಮಾದರಿಯ ಕ್ರಿಕೆಟ್‌ನಲ್ಲೂ ಆಡಿ, ಜಸ್‌ಪ್ರೀತ್ ಬುಮ್ರಾ ರೀತಿಯಲ್ಲಿ ಪ್ರಾಬಲ್ಯ ಸಾಧಿಸುವ ಮತ್ತೊಬ್ಬ ಪ್ಲೇಯರ್ ಇದ್ದಾರೆ ಎಂದು ನಾನು ಭಾವಿಸೋದಿಲ್ಲ. ಅದಕ್ಕಾಗಿ ಈ ಹಂತದಲ್ಲಿ ಅವರು ಭೂಮಿಯ ಮೇಲಿನ ಅತ್ಯಂತ ಮೌಲ್ಯಯುತ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ' ಎಂದು ಕಾರ್ತಿಕ್ ಹೇಳಿದ್ದಾರೆ.
ಯಾಕೆಂದರೆ, ಬುಮ್ರಾ ಎಲ್ಲಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲೂ ಆಡುತ್ತಿದ್ದಾರೆ. ಎಲ್ಲಾ ಮೂರೂ ಮಾದರಿಯ ಕ್ರಿಕೆಟ್‌ಗೆ ಅದ್ಭುತವಾಗಿ ಹೊಂದಿಕೊಳ್ತಾರೆ. ಇವರಷ್ಟೇ ಕೌಶಲ್ಯವಿರುವ ವಿಶ್ವದ ಯಾವುದೇ ಆಟಗಾರ ಇವರಷ್ಟು ಪ್ರಾಬಲ್ಯ ಸಾಧಿಸಿರುವ ಇನ್ನೊಬ್ಬ ಆಟಗಾರನನ್ನು ಈ ಹಂತದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷದ ವಿಶ್ವಕಪ್‌ನಲ್ಲಿ ನನ್ನನ್ನು ಭಾರತ ತಂಡದಿಂದ ಹೊರಗಿಡಲು ಬಯಸಿದ್ದು ನಾಸರ್ ಹುಸೇನ್ ಮಾತ್ರ ಎಂದು ಹೇಳಿದ್ದಕ್ಕೆ, ಇಂಗ್ಲೆಂಡ್ ಮಾಜಿ ಆಟಗಾರನನ್ನು ದಿನೇಶ್ ಕಾರ್ತಿಕ್ ತಮಾಷೆಯಾಗಿಯೇ ತರಾಟೆಗೆ ತೆಗೆದುಕೊಂಡರು. ಅನುಭವಿ ಬ್ಯಾಟರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಎಅದ್ಭುತವಾಗಿ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 10 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಅಜೇಯ 28 ರನ್ ಗಳಿಸಿದರು ಮತ್ತು ಸ್ಟ್ರೈಕ್ ರೇಟ್‌ನಲ್ಲಿ 280 ರನ್ ಗಳಿಸಿದರು. ಆ ಮೂಲಕ ಟೂರ್ನಿಯಲ್ಲಿ ಆರ್‌ಸಿಬಿಯ ಏಕೈಕ ಗೆಲುವಿಗೆ ಕಾರಣರಾಗಿದ್ದಾರೆ.
ಮುಂದಿನ 10 ವರ್ಷದಲ್ಲಿ 3 ಬಾರಿ ಫೈನಲ್ ಆಡಲಿದೆ ಆರ್‌ಸಿಬಿ, ಒಮ್ಮೆ ಚಾಂಪಿಯನ್, ಪ್ರೆಡಿಕ್ಟ್ ಮಾಡಿದ AI
ಕಾರ್ತಿಕ್ ಅವರ ಅದ್ಭುತ ಬ್ಯಾಟಿಂಗ್ ಕೌಶಲ್ಯಕ್ಕಾಗಿ ಹುಸೇನ್ ಅವರನ್ನು ಶ್ಲಾಘಿಸಿದರು ಮತ್ತು ಮುಂಬರುವ T20 ವಿಶ್ವಕಪ್‌ಗಾಗಿ ಭಾರತದ 15 ಆಟಗಾರರ ತಂಡದ ಭಾಗವಾಗಿರಬೇಕು ಎಂದು ಬಯಸಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರ ನೀಡಿದ ದಿನೇಶ್ ಕಾರ್ತಿಕ್, 'ನಾಸಿರ್, ನೀವು ಹೇಳಿದ ಈ ಮಾತನ್ನು ನಾನು ನಂಬೋದೇ ಇಲ್ಲ. ನಾಸಿರ್ ಹುಸೇನ್ ನನ್ನನ್ನು ವ್ಯಕ್ತಿಯಾಗಿ, ಪ್ಲೇಯರ್ ಆಗಿ ಕನಿಷ್ಠ ವಿಕಟ್ ಕೀಪರ್ ಆಗಿಯೂ ಲೈಕ್ ಮಾಡೋದಿಲ್ಲ. ಇದೇ ಮೊದಲ ಬಾರಿಗೆ ನೀವು ನನ್ನ ಬಗ್ಗೆ ಇಂಥ ಮಾತನ್ನು ಹೇಳುತ್ತಿದ್ದೀರಿ. ಈಗಲೂ ಬೇಕಾದ್ರೆ ನೋಡಿ. ಈಗಿರುವ ಭಾರತ ತಂಡದಲ್ಲಿ ಕನಿಷ್ಠ 6 ವಿಕೆಟ್ ಕೀಪರ್‌ರನ್ನು ಆಯ್ಕೆ ಮಾಡಿ ಎಂದರೆ ಅವರ ಲಿಸ್ಟ್‌ನಲ್ಲಿ ನಾನು 8ನೇ ವ್ಯಕ್ತಿ ಆಗಿರುತ್ತೇನೆ' ಎಂದು ಸ್ಲೈಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಬಿಜೆಪಿ ಅಭ್ಯರ್ಥಿ, ಫೋಟೋ ವೈರಲ್!
ಕಳೆದ ವರ್ಷದ ವಿಶ್ವಕಪ್ ವೇಳೆ, ನಾನು ಟೀಮ್‌ನಲ್ಲಿ ಇರಬಾರದು ಎಂದು ಯಾರಾದರೂ ಬಯಸಿದ್ದರೆ, ಅದು ನಾಸಿರ್ ಹುಸೇನ್ ಮಾತ್ರ. ನನ್ನ ಸಂದರ್ಶನ ತೆಗೆದುಕೊಂಡು ನನ್ನ ಬೆನ್ನಿಗೆ ಚೂರಿ ಇರಿದಿದ್ದರು ಎಂದು ದಿನೇಶ್ ಕಾರ್ತಿಕ್ ತಮಾಷೆಯಾಗಿ ನಾಸಿರ್ ಹುಸೇನ್ ಕಾಲೆಳೆದಿದ್ದಾರೆ.