ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ವೈಭವ್ ಪಾಂಡ್ಯ 2021ರಲ್ಲಿ ಒಂದು ಪಾಲಿಮರ್ ಉದ್ಯಮವನ್ನು ಆರಂಭಿಸಿತ್ತು. ಈ ಉದ್ಯಮದ ಒಪ್ಪಂದದ ಪ್ರಕಾರ, ಲಾಭದಲ್ಲಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ತಲಾ 40% ಹಾಗೂ ವೈಭವ್ ಪಾಂಡ್ಯಗೆ 20% ಹಂಚಿಕೊಳ್ಳಬೇಕು ಎಂದು ಕರಾರು ಮಾಡಿಕೊಂಡಿದ್ದರು.
ಮುಂಬೈ(ಏ.11): ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ಉದ್ಯಮವೊಂದರಲ್ಲಿ ಸುಮಾರು 4.3 ಕೋಟಿ ರುಪಾಯಿ ಮೋಸ ಮಾಡಿದ ಆರೋಪದಡಿ ಮಲಸಹೋದರ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೋಲಿಸರ್ ಬಂಧಿಸಿದ್ದಾರೆ.
ಹೌದು, 37 ವರ್ಷದ ವೈಭವ್ ಪಾಂಡ್ಯ, ಪಾಲಿಮರ್ ಉದ್ಯಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ಸೇರಬೇಕಿದ್ದ ಸುಮಾರು 4.3 ಕೋಟಿ ರುಪಾಯಿಗಳನ್ನು ಮೋಸ ಮಾಡಿದ ಆರೋಪದಡಿ ಮುಂಬೈನ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ವೈಭವ್ ಪಾಂಡ್ಯ 2021ರಲ್ಲಿ ಒಂದು ಪಾಲಿಮರ್ ಉದ್ಯಮವನ್ನು ಆರಂಭಿಸಿತ್ತು. ಈ ಉದ್ಯಮದ ಒಪ್ಪಂದದ ಪ್ರಕಾರ, ಲಾಭದಲ್ಲಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ತಲಾ 40% ಹಾಗೂ ವೈಭವ್ ಪಾಂಡ್ಯಗೆ 20% ಹಂಚಿಕೊಳ್ಳಬೇಕು ಎಂದು ಕರಾರು ಮಾಡಿಕೊಂಡಿದ್ದರು.
ಈ 4 ತಂಡಗಳು ಪ್ಲೇ ಆಫ್‌ಗೇರಲಿವೆ: ಅಚ್ಚರಿಯ ಭವಿಷ್ಯ ನುಡಿದ ನಟ ಅಕ್ಷಯ್ ಕುಮಾರ್
ಆದರೆ ಈ ವೈಭವ್ ಪಾಂಡ್ಯ, ಈ ಉದ್ಯಮದಿಂದ ಬಂದ ಲಾಭವನ್ನು ಸರಿಯಾಗಿ ಪಾಂಡ್ಯ ಬ್ರದರ್ಸ್‌ಗೆ ನೀಡದೇ, ತಮ್ಮದೇ ಆದ ಪ್ರತ್ಯೇಕ ಕಂಪನಿಯನ್ನು ಆರಂಭಿಸಿ, ಪಾಂಡ್ಯ ಬ್ರದರ್ಸ್‌ಗೆ ಗೊತ್ತಿಲ್ಲದೇ ಬಂದ ಲಾಭಾಂಶವನ್ನು ವರ್ಗಾಹಿಸಿ ವ್ಯವಹಾರ ನಡೆಸುತ್ತಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ ಎಂದು ವರದಿಯಾಗಿದೆ.
ಹೀಗಾಗಿ ಮುಂಬೈನ ಆರ್ಥಿಕ ಅಪರಾಧ ವಿಭಾಗದ ಪೋಲಿಸ್ ಅಧಿಕಾರಿಗಳು, ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ.
ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟ: ಬೆಂಗಳೂರು ತಂಡದಲ್ಲಿ ಮೂರು ಮೇಜರ್ ಚೇಂಜ್ ಫಿಕ್ಸ್
ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್‌ನಿಂದ ಕರೆತಂದು ಮುಂಬೈ ತಂಡದ ನಾಯಕ ಪಟ್ಟ ಕಟ್ಟಿತು. ಇದು ರೋಹಿತ್ ಶರ್ಮಾ ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆಲುವಿನ ಖಾತೆ ತೆರೆದಿದೆ. ಇನ್ನು ಇಂದು ತವರಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
