Asianet Suvarna News Asianet Suvarna News

IPL 2022 Playoffs: 3 ವರ್ಷಗಳ ಬಳಿಕ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ ಕಲರವ..!

* ಐಪಿಎಲ್‌ ಪ್ಲೇ ಆಫ್‌ ಪಂದ್ಯಗಳಿಗೆ ಕ್ಷಣಗಣನೆ ಆರಂಭ

* ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಕೋಲ್ಕತಾ ಆತಿಥ್ಯ

* 2 ಹೈವೋಲ್ಟೇಜ್‌ ಪಂದ್ಯಗಳಿಗೆ ಈಡನ್‌ ಗಾರ್ಡನ್ಸ್‌ ಮೈದಾನ ಸಾಕ್ಷಿಯಾಗಲಿದೆ

 

IPL 2022 Playoffs All you want to know about Kolkata Eden Gardens kvn
Author
Bengaluru, First Published May 23, 2022, 6:39 PM IST

ಬೆಂಗಳೂರು(ಮೇ.23): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಇದೀಗ ಲೀಗ್ ಹಂತದ ಪಂದ್ಯಾವಳಿಗಳು ಮುಕ್ತಾಯವಾಗಿದ್ದು, ಪ್ಲೇ ಆಫ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಬರೋಬ್ಬರಿ ಮೂರು ವರ್ಷಗಳ ನಂತರ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ (Kolkata Eden Gardens Stadium) ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ರಿಕೆಟ್‌ ಕಲರವ ಆರಂಭವಾಗಲಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇಆಫ್ ನ ಮೊದಲ ಕ್ವಾಲಿಫೈಯರ್ ಪಂದ್ಯ ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (Gujarat Titans vs Rajasthan Royals) ಮುಖಾಮುಖಿಯಾಗಲಿವೆ. ವಿಜೇತ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ.

2019ರ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಆಡುತ್ತಿರುವ ಮೊದಲ ಐಪಿಎಲ್ ಪಂದ್ಯ ಇದಾಗಲಿದೆ. ಈಡನ್ ಗಾರ್ಡನ್ಸ್ ಅನ್ನು "ಭಾರತೀಯ ಕ್ರಿಕೆಟ್‌ನ ಮೆಕ್ಕಾ" ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಭಾರತದಲ್ಲಿ ಕ್ರಿಕೆಟ್‌ಗಾಗಿ ಅಧಿಕೃತವಾಗಿ ನಿರ್ಮಿಸಲಾದ ಮೊದಲ ಮೈದಾನವಾಗಿದೆ. ಆದರೆ, ಪಂದ್ಯಕ್ಕೂ ಮುನ್ನ ಸಂಪೂರ್ಣ ಸಿದ್ಧಗೊಂಡಿದ್ದ ಕ್ರೀಡಾಂಗಣ ಶನಿವಾರ ಭಾರಿ ಬಿರುಗಾಳಿ ಹಾಗೂ ಧಾರಾಕಾರ ಮಳೆಯನ್ನು ಎದುರಿಸಿದ್ದು, ಇಲ್ಲಿನ ವ್ಯವಸ್ಥೆ ಹದಗೆಟ್ಟಿದೆ.

ಪ್ಲೇಆಫ್ ಗೆ ಪ್ರವೇಶಿಸಿರುವ ಆಟಗಾರರು ಈಗಾಗಲೇ ಕೋಲ್ಕತ್ತಾ ತಲುಪಿದ್ದು, ಅದರ ಖುಷಿ ಸಂಭ್ರವನ್ನು ಸಾಮಾಜಿಕ ಜಾಲತಾಣ ಕೂ ನಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗರು ಶೇರ್ ಮಾಡಿರುವ ಪೋಸ್ಟ್‌ಗಳನ್ನು ನೋಡಿದಾಗ ಅವರ ಉತ್ಸಾಹ, ಜೊತೆಗೆ ಸ್ಟ್ರಾಂಗ್ ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲಬೇಕು ಎಂದು ಒತ್ತಾಯಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹ, ಬಹಳ ಸಮಯದ ನಂತರ ಕೋಲ್ಕತ್ತಾದಲ್ಲಿ ಐಪಿಎಲ್ ಆಡುತ್ತಿರುವುದರ ಬಗ್ಗೆ ಬಗ್ಗೆ ಕೂ ಆಪ್ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ:

IPL 2022 Playoffs All you want to know about Kolkata Eden Gardens kvn

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪರ ಆಡುತ್ತಿರುವ ವಿರಾಟ್ ಕೊಹ್ಲಿ ಕೋಲ್ಕತ್ತಾಗೆ ತೆರೆಳುತ್ತಿರುವುದರ ಬಗ್ಗೆ ಕೂ ಆಪ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದ್ದು, ಮೇ 25ರಂದು ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್ (Lucknow Super Giants) ವಿರುದ್ದ ಕಾದಾಡಲಿದೆ. 

IPL 2022 Playoffs All you want to know about Kolkata Eden Gardens kvn

IPL 2022 Playoffs: ಮಳೆಯಿಂದ ಪಂದ್ಯ ರದ್ದಾದ್ರೆ RCBಗೆ ಹೊಡೆತ..! ಐಪಿಎಲ್‌ ರೂಲ್ಸ್‌ ಏನಿವೆ ಗೊತ್ತಾ?

ಈ ಬಾರಿಯ ಐಪಿಎಲ್ ಲೀಗ್ ಪಂದ್ಯಗಳಿಗೆ ಮುಂಬೈ ಮತ್ತು ಪುಣೆ ಆತಿಥ್ಯವನ್ನು ವಹಿಸಿತ್ತು. ಮೊದಲ ಕ್ವಾಲಿಫೈಯರ್ ಹಾಗು ಎಲಿಮಿನೇಟರ್ ಪಂದ್ಯಗಳಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಆಯ್ಕೆಯಾಗಿದೆ. ಹೀಗಾಗಿ, ಐಪಿಎಲ್ 2022ರ ಪ್ಲೇ-ಆಫ್‌ಗಳ ಎರಡೂ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಮಂಗಳವಾರ ಮತ್ತು ಬುಧವಾರದಂದು ಸತತ ಎರಡು ಪಂದ್ಯಗಳು ಈ ಮೈದಾನದಲ್ಲಿ ನಡೆಯಲಿವೆ. ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 23 ರಂದು ನಡೆಯಲಿದೆ. ಅದೇ ಸಮಯದಲ್ಲಿ, ಎಲಿಮಿನೇಟರ್‌ ಪಂದ್ಯವು ಮೇ 25 ರಂದು ನಡೆಯಲಿದೆ. 

ಮಳೆ ಹಾನಿ 

ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪ್ಲೇಆಫ್ ಪಂದ್ಯಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ಲೇಆಫ್‌ಗಾಗಿ ಮಾತ್ರ ಕ್ರೀಡಾಂಗಣದಲ್ಲಿ ವಿಶೇಷ ಹೊದಿಕೆಯನ್ನು ಹಾಕಲಾಗಿತ್ತು, ಆದರೆ ಶನಿವಾರ ಸಂಜೆ ಗುಡುಗು ಸಹಿತ ಮಳೆಯಿಂದಾಗಿ ಇಡೀ ಹೊದಿಕೆ ಹಾರಿಹೋಗಿ ಮೈದಾನವು ಒದ್ದೆಯಾಗಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೂ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಗಾಳಿಯ ರಭಸಕ್ಕೆ ಪ್ರೆಸ್ ಬಾಕ್ಸ್‌ನ ಗಾಜಿನ ಕಿಟಕಿಯೂ ಒಡೆದಿದೆ. ಕೋಲ್ಕತ್ತಾದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಡನ್ ಗಾರ್ಡನ್ಸ್‌ಗೆ ಭೇಟಿ ನೀಡಿದ್ದರು. ಮಳೆ ನಿಂತ ಕೂಡಲೇ ಕವರ್ ಅನ್ನು ಮತ್ತೆ ಅಳವಡಿಸಲಾಯಿತು.

ಭಾರತೀಯ ಕ್ರಿಕೆಟ್‌ನ ಮೆಕ್ಕಾ - ಈಡನ್ ಗಾರ್ಡನ್ಸ್

ಈಡನ್ ಗಾರ್ಡನ್ಸ್ ಕೋಲ್ಕತ್ತಾದ ಕ್ರಿಕೆಟ್ ಮೈದಾನವಾಗಿದೆ. 1864 ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಪ್ರಸ್ತುತ ಕ್ರೀಡಾಂಗಣವು 80,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಈಡನ್ ಗಾರ್ಡನ್ ಅನ್ನು ಸಾಮಾನ್ಯವಾಗಿ ಭಾರತೀಯ ಕ್ರಿಕೆಟ್‌ನ ತವರು ಎಂದು ಕರೆಯಲಾಗುತ್ತದೆ. ಇದು ಭಾರತದ ಎಲ್ಲಾ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಅತ್ಯಂತ ವೇಗದ ಔಟ್‌ಫೀಲ್ಡ್ ಆಗಿದೆ ಮತ್ತು ಇದನ್ನು 'ಬ್ಯಾಟ್ಸ್‌ಮನ್‌ಗಳ ಸ್ವರ್ಗ' ಎಂದು ಪರಿಗಣಿಸಲಾಗಿದೆ. ಈಡನ್ ಗಾರ್ಡನ್ಸ್ ನಲ್ಲಿ  ವಿಶ್ವಕಪ್, T20 ವಿಶ್ವಕಪ್ ಮತ್ತು ಏಷ್ಯಾಕಪ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಗಳ ಪಂದ್ಯಗಳಿಗೆ ಸಾಕ್ಷಿಯಾಗಿದೆ.

Follow Us:
Download App:
  • android
  • ios