Asianet Suvarna News Asianet Suvarna News

IPL 2022 ಟಾಸ್ ಗೆದ್ದ ಕೆಕೆಆರ್ ತಂಡದಿಂದ ಬ್ಯಾಟಿಂಗ್ ಆಯ್ಕೆ

ಅಂದಾಜು ಒಂದು ತಿಂಗಳ ಹಿಂದೆ ಸನ್ ರೈಸರ್ಸ್ ಹಾಗೂ ಕೆಕೆಆರ್ ತಂಡ ಮುಖಾಮುಖಿಯಾಗಿದ್ದ ವೇಳೆ, ಕೆಕೆಆರ್ ತಂಡ ತನ್ನ ಸತತ ಐದು ಸೋಲುಗಳ ನಡುವಿನಲ್ಲಿತ್ತು. ಇದರಲ್ಲಿ ಸನ್ ರೈಸರ್ಸ್ ವಿರುದ್ಧದ ಸೋಲೂ ಕೂಡ ಸೇರಿತ್ತು. ಈಗ ಸನ್ ರೈಸರ್ಸ್ ತಂಡಕ್ಕೆ ಸತತ ಐದನೇ ಸೋಲನ್ನು ನೀಡುವ ಅವಕಾಶ ಕೆಕೆಆರ್ ತಂಡದ ಮುಂದಿದೆ. ಇದರಲ್ಲಿ ತಂಡ ಯಶಸ್ವಿಯಾಗಲಿದೆಯೇ ಎನ್ನವ ಕುತೂಹಲ ಎಲ್ಲರಲ್ಲಿದೆ.

IPL 2022 KKR vs SRH Kolkata Knight Riders have won the toss and have opted to bat vs Sunrisers Hyderabad san
Author
First Published May 14, 2022, 7:05 PM IST

ಪುಣೆ (ಮೇ.14): ಕೆಕೆಆರ್ (Kolkata Knight Riders) ಹಾಗೂ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಪಾಲಿಗೆ ಈ ಬಾರಿಯ ಐಪಿಎಲ್ (IPL 2022) ಸೀಸನ್ ಉತ್ತಮವಾಗಿರಲಿಲ್ಲ.  ಉತ್ತಮವಾಗಿ ಲೀಗ್ ಆರಂಭಿಸಿದರೂ ಸತತ ಐದು ಪಂದ್ಯಗಳ ಸೋಲು ಕೆಕೆಆರ್ (KKR) ತಂಡದ ಅಭಿಯಾನಕ್ಕೆ ಪೆಟ್ಟು ನೀಡಿದರೆ, ಸನ್ ರೈಸರ್ಸ್ (SRH) ತಂಡ ಕೂಡ ಸತತ ನಾಲ್ಕು ಪಂದ್ಯಗಳಲ್ಲಿಗ ಸೋಲು ಕಂಡಿದೆ. 

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಟಾಸ್ ಗೆದ್ದ ಕೆಕೆಆರ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಗಾಯಾಳು ಪ್ಯಾಟ್ ಕಮ್ಮಿನ್ಸ್ ಬದಲು ಉಮೇಶ್ ಯಾದವ್ ತಂಡಕ್ಕೆ ಮರಳಿದ್ದು, ಶೆಲ್ಡನ್ ಜಾಕ್ಸನ್ ಬದಲು ಸ್ಯಾಮ್ ಬಿಲ್ಲಿಂಗ್ಸ್ ಅವಕಾಶ ಪಡೆದುಕೊಂಡಿದ್ದಾರೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಟಿ.ನಟರಾಜನ್, ವಾಷಿಂಗ್ಟನ್ ಸುಂದರ್ ಹಾಗೂ ಮಾರ್ಕೋ ಜಾನ್ಸೆನ್ ಅವರನ್ನು ತಂಡಕ್ಕೆ ಆರಿಸಿಕೊಂಡಿದೆ.

ಏನನ್ನು ನಿರೀಕ್ಷೆ ಮಾಡಬಹುದು?: ಟಾಸ್ ಗೆದ್ದಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವುದೇ ಗೊಂದಲ ತಂಡಗಳಲ್ಲಿದೆ. ಪುಣೆಯಲ್ಲಿ ಆಡಿದ 12 ಪಂದ್ಯಗಳ ಪೈಕಿ 9 ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯ ಸಾಧಿಸಿದೆ. ಹಾಗಂತ ಚೇಸಿಂಗ್ ಮಾಡಿದ ತಂಡ ಸುಲಭವಾಗಿ ಸೋಲು ಕಂಡಿಲ್ಲ ಎನ್ನುವುದು ದಾಖಲೆಗಳಿಂದ ಗೊತ್ತಾಗುತ್ತದೆ. ಈ ಮೈದಾನದಲ್ಲಿ ಆಡಿದ 8 ಪಂದ್ಯಗಳ ಪೈಕಿ 7 ರಲ್ಲಿ ಗೆಲುವು ಸಾಧಿಸಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತಂಡ ಐದು ಪಂದ್ಯಗಳ ಪೈಕಿ 1 ರಲ್ಲಿ ಮಾತ್ರವೇ ಗೆಲುವು ಕಂಡಿದೆ.

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿ.ಕೀ), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ ( ವಿ.ಕೀ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ

ನಿಮಗಿದು ಗೊತ್ತೇ?
- ಶ್ರೇಯಸ್ ಅಯ್ಯರ್ ಐಪಿಎಲ್ ನಲ್ಲಿ ಭುವನೇಶ್ವರ್ ಕುಮಾರ್ ಎದುರು ಪ್ರಯಾಸದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಭುವನೇಶ್ವರ್ ಅವರಿಂದ 49 ಎಸೆತ ಎದುರಿಸಿರುವ ಶ್ರೇಯಸ್ ಅಯ್ಯರ್ 44 ರನ್ ಬಾರಿಸಿದ್ದು, 3 ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ನಿವೃತ್ತಿ ಘೋಷಣೆ ಮಾಡಿ ಟ್ವೀಟ್ ಮಾಡಿದ ಕೆಲ ನಿಮಿಷದಲ್ಲೇ ನಿರ್ಧಾರ ಬದಲಿಸಿದ ಅಂಬಟಿ ರಾಯುಡು!

- ಉಮ್ರಾನ್ ಮಲೀಕ್ ಹಾಲಿ ಐಪಿಎಲ್ ನಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 48 ರನ್, 52 ರನ್ (4 ಓವರ್ ಕೋಟಾ), 25 ರನ್ (2 ಓವರ್) ನೀಡಿದ್ದಾರೆ.

IPL 2022: ಶ್ರೀಮಂತ ಕ್ರಿಕೆಟ್​​​​ನಲ್ಲಿ ನಾಚಿಕೆಗೇಡಿನ ಸಂಗತಿ..!

ಟೂರ್ನಿಯ ಆರಂಭಿಕ ಆಘಾತದಿಂದ ಹೊರಬಂದು ಬಳಿಕ ಸತತ 5 ಪಂದ್ಯ ಗೆದ್ದಿದ್ದ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ಕೊನೆಯ 4 ಪಂದ್ಯಗಳಲ್ಲಿ ಪರಾಭವಗೊಂಡಿದೆ. ತಂಡ 11 ಪಂದ್ಯಗಳಿಂದ ಕೇವಲ 10 ಅಂಕ ಪಡೆದಿದ್ದು ಈ ಪಂದ್ಯದಲ್ಲೂ ಸೋತರೆ ಪ್ಲೇ-ಆಫ್‌ನಿಂದ ಬಹುತೇಕ ಹೊರಬೀಳಲಿದೆ. ಗೆದ್ದರೆ ಪ್ಲೇ-ಆಫ್‌ ರೇಸ್‌ ಮತ್ತಷ್ಟು ರೋಚಕತೆ ಸೃಷ್ಟಿಸಲಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಗೆಲುವು ದಾಖಲಿಸಬೇಕಿದ್ದರೆ, ಬ್ಯಾಟಿಂಗ್ ವಿಭಾಗದಲ್ಲಿ ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ಏಯ್ಡನ್ ಮಾರ್ಕ್‌ರಮ್, ರಾಹುಲ್ ತ್ರಿಪಾಠಿ ಹಾಗೂ ನಿಕೋಲಸ್ ಪೂರನ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಾಗಿದೆ. ಇನ್ನು ಬೌಲಿಂಗ್‌ನಲ್ಲಿ ಉಮ್ರಾನ್ ಮಲ್ಲಿಕ್, ಭುವನೇಶ್ವರ್ ಕುಮಾರ್, ಟಿ ನಟರಾಜನ್ ಜತೆಗೆ ಜಗದೀಶ ಸುಚಿತ್ ಮಾರಕ ದಾಳಿ ಸಂಘಟಿಸಬೇಕಾಗಿದೆ.  

Follow Us:
Download App:
  • android
  • ios