* ವಿಶ್ವ ಕ್ರಿಕೆಟ್ ಮುಂದೆ ಬೆತ್ತಲಾದ ಬಿಸಿಸಿಐ ಪವರ್‌ ಕಟ್ ಪ್ರಕರಣ* ಚೆನ್ನೈ ಸೂಪರ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯಕ್ಕೆ ಪವರ್ ಕಟ್* ಕ್ರಿಕೆಟ್​ ಅಭಿಮಾನಿಗಳು ಟ್ವಿಟರ್​​ನಲ್ಲಿ NO DRS ಎಂಬ ಹ್ಯಾಶ್​​ಟ್ಯಾಗ್​​​​ ಟ್ರೆಂಡ್​

ಮುಂಬೈ(ಮೇ.14): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League). ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಕೂಡ. ಇಲ್ಲಿ ಹಣದ ಹೊಳೆಯೇ ಹರಿಯುತ್ತೆ. ಒಂದು ಸೀಸನ್​​​ಗೆ ಸಾವಿರಾರು ಕೋಟಿ ಟರ್ನ್​ ಓವರ್ ಆಗುತ್ತೆ. IPL​ನಿಂದ ಬಿಸಿಸಿಐಗೆ ಮಾತ್ರವಲ್ಲ, ಐಸಿಸಿ ಹಾಗೂ ಇತರೆ ಕ್ರಿಕೆಟ್ ಮಂಡಳಿಗಳಿಗೂ ಹಣ ಸಂದಾಯವಾಗುತ್ತೆ. ಮಂಡಳಿಗಳು, ಆಟಗಾರರು, ಅಂಪೈರ್ಸ್, ರೆಫ್ರಿ, ಪಂದ್ಯಗಳನ್ನ ಟೆಲಿಕಾಸ್ಟ್ ಮಾಡೋ ಚಾನೆಲ್ ಹೀಗೆ ಎಲ್ಲರೂ ಕೋಟಿ ಕೋಟಿ ಹಣ ಬಾಚಿಕೊಳ್ತಾರೆ. ಒಟ್ನಲ್ಲಿ ಹೇಳಬೇಕು ಅಂದ್ರೆ ದುಡ್ಡಿನ ದುನಿಯಾ ಐಪಿಎಲ್.

DRS ಅಂದರೆ ಅಂಪೈರ್ ಮೇಲ್ಮನವಿ ಪದ್ದತಿ. ಅಂಪೈರ್​ ತೀರ್ಪಿನ ವಿರುದ್ಧ ಥರ್ಡ್​ ಅಂಪೈರ್​​ಗೆ ಮೋರೆ ಹೋಗೋದು. ಈ DRS ಅನ್ನ BCCI ಮೊದಲು ವಿರೋಧಿಸಿತ್ತಾದ್ರೂ ಕೊನೆಗೆ ಒಪ್ಪಿಕೊಂಡು IPL​ನಲ್ಲೂ ಅಳವಡಿಸಿಕೊಂಡಿತು. ಆದ್ರೆ ಮೊನ್ನೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ DRS ಇರಲಿಲ್ಲ. ಕಾರಣ ತಾಂತ್ರಿಕ ದೋಷ ಎಂದು ಹೇಳಿ ಸುಮ್ಮನಾಯ್ತು ಬಿಸಿಸಿಐ.

ಲೀಗ್​ನಿಂದ ಹೊರಬಿದ್ದ ಸಿಎಸ್​ಕೆ:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ-ಚೆನ್ನೈ (CSK vs MI) ಪಂದ್ಯದಲ್ಲಿ ವಿದ್ಯುತ್ ಸಮಸ್ಯೆಯಿಂದ DRS ಇರುವುದಿಲ್ಲ ಅಂತ ಪಂದ್ಯ ಆರಂಭಕ್ಕೂ ಮುನ್ನವೇ ಹೇಳಲಾಯ್ತು. ಇದರಿಂದ ನಷ್ಟವಾಗಿದ್ದು ಮಾತ್ರ CSKಗೆ. ಹೌದು, ಮೊದಲ ಓವರ್​ನಲ್ಲೇ ಸಿಎಸ್​ಕೆ ಓಪನರ್ ಡೆವೋನ್ ಕಾನ್‌ವೇ ಎಲ್​ಬಿ ಬೆಲೆಗೆ ಬಿದ್ದರು. ಫೀಲ್ಡ್ ಅಂಪೈರ್ ಎಲ್​ಬಿಗೆ ಔಟ್ ಕೊಟ್ರು. ಥರ್ಡ್​ ಅಂಪೈರ್ ಮೊರೆ ಹೋಗಲು DRS ಇರಲಿಲ್ಲ. ಹಾಗಾಗಿ ಔಟಾಗಿದ್ದಿನೋ ಇಲ್ಲವೋ ಅನ್ನೋ ಅನುಮಾನದಿಂದಲೇ ಕಾನ್‌ವೇ, ಪೆವಿಲಿಯನ್​​​ಗೆ ಹೋದರು. ಮರು ಓವರ್​​ನಲ್ಲೇ ರಾಬಿನ್ ಉತ್ತಪ್ಪ ಸಹ ಎಲ್​ಬಿಗೆ ಔಟಾದ್ರು. 

IPL 2022: ಆ ಲಕ್ಕಿ ಪ್ಲೇಯರ್​​ ಕೈಬಿಟ್ಟು ತಪ್ಪು ಮಾಡ್ತಾ ಸಿಎಸ್​ಕೆ..?

ಟಾಪ್ ಆರ್ಡರ್​ ಇಬ್ಬರನ್ನ ಬೇಗ ಕಳೆದುಕೊಂಡ CSK, ಕೊನೆಗೆ ಜಸ್ಟ್​ 97 ರನ್​ಗೆ ಆಲೌಟ್ ಆಯ್ತು. ಮುಂಬೈ ಇಂಡಿಯನ್ಸ್ ಚೇಸ್ ಮಾಡಿ ಪಂದ್ಯ ಗೆಲ್ತು. ಈ ಪಂದ್ಯ ಗೆದ್ದಿದ್ದರೆ CSKಗೆ ಪ್ಲೇ ಆಫ್​ಗೆ ಎಂಟ್ರಿ ಪಡೆಯೋ ಅವಕಾಶವಿತ್ತು. ಆದ್ರೆ DRS ಇಲ್ಲದೆ ಇರೋದು CSKಗೆ ಶಾಪವಾಗಿ ಪರಿಣಮಿಸಿ, ಸೋತು ಲೀಗ್​ನಿಂದಲೇ ಹೊರಬಿತ್ತು.

ಪವರ್ ಕಟ್ DRS ಇಲ್ಲ, ಟ್ರೋಲ್ ಟ್ರೋಲ್ ಟ್ರೋಲ್​:

ವಿಶ್ವದ ಶ್ರೀಮಂತ ಕ್ರಿಕೆಟ್ ನಡೆಯುತ್ತಿದ್ದ ಸ್ಟೇಡಿಯಂನಲ್ಲಿ ಪವರ್ ಕಟ್​ ಆಗಿರುವ ವಿಷ್ಯ ಹೆಚ್ಚು ಟ್ರೋಲ್​ ಆಗ್ತಿದೆ. ಕ್ರಿಕೆಟ್​ ಅಭಿಮಾನಿಗಳು ಟ್ವಿಟರ್​​ನಲ್ಲಿ NO DRS ಎಂಬ ಹ್ಯಾಶ್​​ಟ್ಯಾಗ್​​​​ ಟ್ರೆಂಡ್​ ಆಗಿದೆ. ಸತತ ಸೋಲಿನಿಂದ ಹೊರಬರಲು ಮುಂಬೈ ಫ್ರಾಂಚೈಸಿ, ಅನಿಲ್ ಅಂಬಾನಿ ಪವರ್ ಕಟ್ ಮಾಡಿದ್ದಾರೆ ಅಂತ ಅವರ ಫೋಟೋ ಹಾಕಿ ಟ್ರೋಲ್ ಮಾಡ್ತಿದ್ದಾರೆ. ವಾಂಖೆಡೆ ಸ್ಟೇಡಿಯಂ ಬೇರೆ ಮುಂಬೈ ತವರು ಪಿಚ್. ಅವರೇ ಪವರ್ ಕಟ್ ಮಾಡಿಸಿದ್ದಾರೆ ಅನ್ನೋ ಮೀಮ್ಸ್​​ಗಳು ಓಡಾಡ್ತಿವೆ. ಮುಂಬೈನಿಂದ ಪೊಲ್ಲಾರ್ಡ್​ ಮತ್ತು CSKಯಿಂದ ಜಡೇಜಾ ಡ್ರಾಪ್ ಮಾಡಿದಕ್ಕೆ ಅವರಿಬ್ಬರು ಸೇರಿಕೊಂಡು ಪವರ್ ಕಟ್ ಮಾಡಿದ್ರು ಅಂತ ಫೋಟೋ ಹಾಕಿ ಟ್ರೋಲ್ ಸಹ ಮಾಡಲಾಗ್ತಿದೆ.

Scroll to load tweet…
Scroll to load tweet…
Scroll to load tweet…

ವಿಶ್ವ ಕ್ರಿಕೆಟ್ ಮುಂದೆ ಬೆತ್ತಲಾದ ಬಿಸಿಸಿಐ:

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ನಡೆಸೋ ಲೀಗ್​ನಲ್ಲಿ ಎಲ್ಲವೂ ಹೈಫೈ. ಆದ್ರೂ ಪವರ್ ಕಟ್​ನಿಂದ DRS ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಇದರಿಂದ ಬಿಸಿಸಿಐ ವಿಶ್ವ ಕ್ರಿಕೆಟ್ ಮುಂದೆ ತಲೆ ತಗ್ಗಿಸುವಂತೆ ಆಗಿದೆ. ಮುಂಬೈ ಕ್ರಿಕೆಟ್ ಬೋರ್ಡ್​ ವಿರುದ್ಧ ಬಿಸಿಸಿಐ ಗರಂ ಸಹ ಆಗಿದೆ. ಒಟ್ನಲ್ಲಿ ಪವರ್ ಕಟ್​ನಿಂದ ಕ್ರಿಕೆಟ್ ಜಗತ್ತಿನ ಮುಂದೆ ಬಿಸಿಸಿಐ ಬೆತಲ್ಲಾಗಿದ್ದಂತೂ ಸುಳ್ಳಲ್ಲ.