Asianet Suvarna News Asianet Suvarna News

IPL 2021: ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಪಂಜಾಬ್, ಬರ್ತ್‌ಡೇ ಬಾಯ್ ಗೇಲ್‌‌ಗೆ ಸ್ಥಾನವಿಲ್ಲ!

  • IPL 2021 ಟೂರ್ನಿಯ 32ನೇ ಲೀಗ್ ಪಂದ್ಯ
  • ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಹೋರಾಟ
  • ಟಾಸ್ ಗೆದ್ದ ಪಂಜಾಬ್ ಕಿಂಗ್ಸ್, ಬೌಲಿಂಗ್ ಆಯ್ಕೆ
  • ದುಬೈನನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ
IPL 2021 Punjab Kings won toss opt to bowl first against Rajasthan royals in dubai ckm
Author
Bengaluru, First Published Sep 21, 2021, 7:07 PM IST
  • Facebook
  • Twitter
  • Whatsapp

ದುಬೈ(ಸೆ.21): IPL 2021ರ ಟೂರ್ನಿಯ 32ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಆಫ್ಘಾನ್ ಜನತೆಗಿದ್ದ ಕೊನೆಯ ಹಾಗೂ ಏಕೈಕ ಮನರಂಜನೆ IPL ಪ್ರಸಾರ ಬ್ಯಾನ್ ಮಾಡಿದ ತಾಲಿಬಾನ್!

ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್ ಸ್ಥಾನ ಪಡೆದಿಲ್ಲ. ಹುಟ್ಟು ಹಬ್ಬದ ದಿನವೇ ಗೇಲ್ ತಂಡದಿಂದ ಹೊರಗುಳಿದಿದ್ದಾರೆ. ಪಂಜಾಬ್ ತಂಡದಲ್ಲಿ ನಿಕೋಲಸ್ ಪೂರನ್, ಮರಕ್ರಾಮ್, ರಶೀದ್, ಹಾಗೂ ಅಲೆನ್ ವಿದೇಶಿ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ರಾಜಸ್ಥಾನ ರಾಯಲ್ಸ್
ಯಶಸ್ವಿ ಜೈಸ್ವಾಲ್, ಇವಿನ್ ಲಿವಿಸ್, ಸಂಜು ಸಾಮ್ಸನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮ್ರೊರ್, ರಿಯಾನ್ ಪರಾಗ್, ರಾಹುಲ್ ಟಿವಾಟಿಯಾ, ಕ್ರಿಸ್ ಮೊರಿಸ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ,

ಪಂಜಾಬ್ ಕಿಂಗ್ಸ್:
ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಆ್ಯಡಿನ್ ಮರಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡ, ಪ್ಯಾಬಿನ್ ಅಲೆನ್, ಆದಿಲ್ ರಶೀದ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್, ಇಶಾನ್ ಪೊರೆಲ್,

 

 

 

ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್(Rajasthan Royals) ಹಾಗೂ ಪಂಜಾಬ್ ಕಿಂಗ್ಸ್ 6 ಮತ್ತು 7ನೇ ಸ್ಥಾನದಲ್ಲಿದೆ. ಕಾರಣ ಐಪಿಎಲ್ 2021 ಮೊದಲ ಭಾಗದಲ್ಲಿ ಉಭಯ ತಂಡಗಳು ನಿರೀಕ್ಷಿತ  ಪ್ರದರ್ಶನ ನೀಡಲು ವಿಫಲವಾಗಿತ್ತು. ರಾಜಸ್ಥಾನ ರಾಯಲ್ಸ್ 7 ರಲ್ಲಿ 3 ಗೆಲುವು 4 ಸೋಲು ಕಂಡಿದ್ದರೆ, ಪಂಜಾಬ್ ಕಿಂಗ್ಸ್ 8 ಪಂದ್ಯದಲ್ಲಿ 3 ಗೆಲುವು 5 ಸೋಲು ಕಂಡಿದೆ.

ದುಬೈ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 160 ರಿಂದ 165 ರನ್ ಸಿಡಿಸಿದರೆ ತಂಡದ ಗೆಲುವು ಕಷ್ಟವೇನಲ್ಲ. ಈಗಾಗಲೇ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 156 ರನ್ ಸಿಡಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತ್ತು. 

IPL 2021; ನವನೀತಾ- ಜೇಮೀಸನ್ ಕೂಲ್ ಕೂಲ್ ನೋಟ ವೈರಲ್ ಆಗ್ದೆ ಇರುತ್ತಾ!

ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಐಪಿಎಲ್ ಟೂರ್ನಿಯಲ್ಲಿ 22 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ರಾಜಸ್ಥಾನ ರಾಯಲ್ಸ 12 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಪಂಜಾಬ್ ಕಿಂಗ್ಸ್ 10 ಪಂದ್ಯದಲ್ಲಿ ಗೆಲುವು ಕಂಡಿದೆ. ಆದರೆ ಸದ್ಯ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡದ ಸ್ವರೂಪವೇ ಬದಲಾಗಿದೆ. ಹೀಗಾಗಿ ಈ ಹಿಂದಿನ ಅಂಕಿ ಅಂಶ ಕೈಹಿಡಿಯುವುದಿಲ್ಲ. 

2021ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 221 ರನ್ ಸಿಡಿಸಿತ್ತು. ಕೆಎಲ್ ರಾಹುಲ್ 91 ಹಾಗೂ ದೀಪಕ್ ಹೂಡ 28 ಎಸೆತದಲ್ಲಿ 64 ರನ್ ಚಚ್ಚಿದ್ದರು. ಆದರೆ ಈ ಪಂದ್ಯದಲ್ಲಿ ರಾಜಸ್ಥಾನ ನಾಯಕ ಸಂಜು ಸಾಮ್ಸನ್ ಶತಕ ಸಿಡಿಸಿ ಮಿಂಚಿದರು. ಆದರೆ ಅಂತಿಮ ಓವರ್‌ನ ಅಂತಿಮ ಎಸೆತದಲ್ಲಿ ಪಂಜಾಬ್ ರೋಚಕ ಗೆಲುವು ಕಂಡಿತು. 

IPL 2021:ಕೆಕೆಆರ್ ದಾಳಿಗೆ ತತ್ತರಿಸಿದ RCB, ಅಲ್ಪ ಮೊತ್ತಕ್ಕೆ ಆಲೌಟ್!

ರಾಜಸ್ಥಾನ ರಾಯಲ್ಸ್ ಪರ ಸಂಜು ಸಾಮ್ಸನ್ ದಿಟ್ಟ ಪ್ರದರ್ಶನ ನೀಡಿದ್ದಾರೆ. ಸ್ಯಾಮ್ಸನ್ 525 ರನ್ ಸಿಡಿಸಿದ್ದಾರೆ. ಇತ್ತ ಪಂಜಾಬ್ ತಂಡದಲ್ಲಿ ನಾಯಕ ಕೆಎಲ್ ರಾಹುಲ್ ಈ ಆವೃತ್ತಿಯ ಬೆಸ್ಟ್ ಸ್ಕೋರರ್ ಆಗಿದ್ದಾರೆ. ರಾಹುಲ್  441 ರನ್ ಸಿಡಿಸಿದ್ದಾರೆ. 

ಪಂಜಾಬ್ ತಂಡದಲ್ಲಿ ಪಿಯೂಷ್ ಚಾವ್ಲಾ 14 ವಿಕೆಟ್ ಕಬಳಿಸಿ ಮುಂಚೂಣಿಯಲ್ಲಿದ್ದರೆ, ಇತ್ತ ಸಿದ್ದಾರ್ಥ್ ತ್ರಿವೇದಿ 11 ವಿಕೆಟ್ ಕಬಳಿಸಿ ರಾಜಸ್ಥಾನ ಪರ ಗರಿಷ್ಠ ವಿಕೆಟ್ ಟೇಕರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Follow Us:
Download App:
  • android
  • ios