Asianet Suvarna News Asianet Suvarna News

ಆಫ್ಘಾನ್ ಜನತೆಗಿದ್ದ ಕೊನೆಯ ಹಾಗೂ ಏಕೈಕ ಮನರಂಜನೆ IPL ಪ್ರಸಾರ ಬ್ಯಾನ್ ಮಾಡಿದ ತಾಲಿಬಾನ್!

  • ತಾಲಿಬಾನ್ ಉಗ್ರರ ಕೈಯಲ್ಲಿ ನರಳಾಡುತ್ತಿದೆ ಆಫ್ಘಾನಿಸ್ತಾನ
  • ಇದ್ದ ಕೊನೆಯ ಮನರಂಜನೆ ಐಪಿಎಲ್ ಕೂಡ ಬಂದ್
  • IPL 2021 ಇಸ್ಲಾಂ ವಿರೋಧಿ ಎಂದ ತಾಲಿಬಾನ್
     
Taliban ban IPL 2021 broadcast in Afghanistan due to cheerleaders and female spectators ckm
Author
Bengaluru, First Published Sep 21, 2021, 5:35 PM IST

ಕಾಬೂಲ್(ಸೆ.21): ಆಫ್ಘಾನಿಸ್ತಾನದಲ್ಲಿ ತಾಲಿಬಾನ್(Taliban) ಆಡಳಿತ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಇದೀಗ ಆಫ್ಘಾನ್ ಜನತೆ ಉಸಿರಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಹೊರಬರುವುದು ಅಸಾಧ್ಯವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಮೇಲೂ ನಿರ್ಬಂಧ, ಉಡುಪು ಹೀಗೆ ಇರಬೇಕು ಅನ್ನೋ ಕಟ್ಟಪ್ಪಣೆ ಸೇರಿದಂತೆ ಮಕ್ಕಳು ಮಹಿಳೆಯರಿಗೆ ಅಕ್ಷರಶಃ ನರಕವಾಗಿದೆ. ತಾಲಿಬಾನ್ ಆಡಳಿತ ಬಂದ ಬಳಿಕ ಇದ್ದ ಎಲ್ಲಾ ಮನರಂಜನೆಗಳು ಬಂದ್ ಆಗಿವೆ. ಆಫ್ಘಾನಿಸ್ತಾನ ಜನತೆಗೆ ಉಳಿದಿದ್ದ ಏಕೈಕ ಮನರಂಜನೆ ಐಪಿಎಲ್ ಕ್ರಿಕೆಟ್(IPL Cricket). ಇದೀಗ ಅದನ್ನೂ ತಾಲಿಬಾನ್ ಉಗ್ರರು ಬ್ಯಾನ್ ಮಾಡಿದ್ದಾರೆ.

IPL 2021: ಹುಟ್ಟು ಹಬ್ಬ ಸಂಭ್ರಮದಲ್ಲಿ ಕ್ರಿಸ್ ಗೇಲ್, ಫ್ಯಾನ್ಸ್ ಮರೆತಿಲ್ಲ ಯೂನಿವರ್ಸ್ ಬಾಸ್ 6 ದಾಖಲೆ!

ಆಫ್ಘಾನಿಸ್ತಾನದಲ್ಲಿ ಐಪಿಎಲ್ 2021(IPL 2021) ಟೂರ್ನಿ  ಪ್ರಸಾರವನ್ನು ತಾಲಿಬಾನ್ ಉಗ್ರರು ನಿಷೇಧಿಸಿದ್ದಾರೆ. ಐಪಿಎಲ್ ಟೂರ್ನಿ ಇಸ್ಲಾಂ ವಿರೋಧಿಯಾಗಿದೆ ಎಂದು ತಾಲಿಬಾನ್ ಹೇಳಿದೆ. ಐಪಿಎಲ್ ಟೂರ್ನಿಯಲ್ಲಿ ಚಿಯರ್‌ಲೀಡರ್ಸ್ ಕುಣಿಯುತ್ತಾರೆ. ಮಹಿಳಾ ಪ್ರೇಕ್ಷಕರು ಪುರುಷರ ಜೊತೆ ಕುಳಿತು ಪಂದ್ಯ ವೀಕ್ಷಿಸುತ್ತಾರೆ. ಇದು ಇಸ್ಲಾಂ ವಿರೋಧಿ. ಹೀಗಾಗಿ ಆಫ್ಘಾನಿಸ್ತಾನದಲ್ಲಿ ಐಪಿಎಲ್ ಪ್ರಸಾರ ನಿಷೇಧಿಸಿದೆ.

ಆಫ್ಘಾನಿಸ್ತಾನದಲ್ಲಿ(Afghanistan) ಇರುವ ಎಲ್ಲಾ ಮನರಂಜನೆಗಳು ಸ್ಥಗಿತಗೊಂಡಿದೆ. ಸಿನಿಮಾ, ಹಾಡು ದೂರದ ಮಾತು. ಮನೆಯಿಂದ ಹೊರಬಂದರೆ ಯಾವುದಾದರೊಂದು ಕಾರಣ ಹುಡುಕಿ ತಾಲಿಬಾನ್ ಉಗ್ರರ ಶಿಕ್ಷೆಗೆ ಗುರಿಯಾಗುವುದು ಖಚಿತ. ಹೀಗಾಗಿ ಮಹಿಳೆಯರು ಮಕ್ಕಳು ಮನೆಯೊಳೆಗೆ ಇರಬೇಕಾದ ಅನಿವಾರ್ಯತೆ ಇದೆ. ಈ ವೇಳೆ ತಮ್ಮ ದೇಶದ ಹೆಮ್ಮೆಯ ಕ್ರಿಕೆಟಿಗರನ್ನು ಐಪಿಎಲ್ ಟೂರ್ನಿಯಲ್ಲಿ ನೋಡಿ ಖುಷಿಪಡುತ್ತಿದ್ದ ಆಫ್ಘಾನ್ ಜನತೆಗೆ ಇದೀಗ ಏನೂ ಇಲ್ಲದಂತಾಗಿದೆ.

IPL 2021; ನವನೀತಾ- ಜೇಮೀಸನ್ ಕೂಲ್ ಕೂಲ್ ನೋಟ ವೈರಲ್ ಆಗ್ದೆ ಇರುತ್ತಾ!

ಆಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗರಾದ ರಶೀದ್ ಖಾನ್, ಮೊಹಮ್ಮದ್ ನಬಿ, ಮುಜೀಬ್ ಯುಆರ್ ರೆಹಮಾನ್ ಐಪಿಎಲ್ 2021ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ದೇಶದ ನೆಚ್ಚಿನ ಕ್ರಿಕೆಟಿಗರ ಪ್ರದರ್ಶನವನ್ನು ನೋಡುವ, ಹುರಿದುಂಬಿಸುವ ಭಾಗ್ಯ ಇದೀಗ ಆಫ್ಘಾನ್ ಜನತೆಗೆ ಇಲ್ಲವಾಗಿದೆ. 

ಮಹಿಳೆಯರು ಪಾಲ್ಗೊಳ್ಳುವಿಕೆಯ ಎಲ್ಲಾ ಕ್ರೀಡೆಗಳನ್ನು ಈಗಾಗಲೇ ಬ್ಯಾನ್ ಮಾಡಲಾಗಿದೆ. ಮಹಿಳೆಯರು ಕಾಣಿಸಿಕೊಳ್ಳುವ ವೇದಿಕೆ, ಸಿನಿಮಾ ಸೇರಿದಂತೆ ಯಾವುದೇ ಮನೋರಂಜನೆಗಳು ಆಫ್ಘಾನಿಸ್ತಾನದಲ್ಲಿ ಅವಕಾಶವಿಲ್ಲ. ಇದೀಗ ಆಫ್ಘಾನಿಸ್ತಾನದಲ್ಲಿ ಹೆಚ್ಚು ಜನಪ್ರಿಯವಾಗಿರುವ ಐಪಿಎಲ್ ಕೂಡ ಬ್ಯಾನ್ ಆಗಿದೆ.

ಸರ್ ಜಡೇಜಾ ಜಾಗದಲ್ಲಿ  ಈಗ ಲಾರ್ಡ್ ಶಾರ್ದೂಲ್‌  ಠಾಕೂರ್ ಪ್ರತಿಷ್ಠಾಪನೆ!

ತಾಲಿಬಾನ್ ಉಗ್ರರು ಐಪಿಎಲ್ ಪ್ರಸಾರ ಬ್ಯಾನ್ ಮಾಡಿದ ಕುರಿತು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಮ್ಯಾನೇಜರ್ ಎಂ ಇಬ್ರಾಹಿಂ ಮೊಹಮ್ಮದ್ ಟ್ವೀಟ್ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ. 

 

ಆಫ್ಘಾನಿಸ್ತಾನ ಪತ್ರಕರ್ತರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಇಸ್ಲಾಂ ವಿರೋಧಿ ಎಂಬ ನೆಪ ಹೇಳಿ ಐಪಿಎಲ್ ಪ್ರಸಾರ ಬ್ಯಾನ್ ಮಾಡಲಾಗಿದೆ ಎಂದಿದ್ದಾರೆ.  

 

ಐಪಿಎಲ್ 2021 ಟೂರ್ನಿಯ ಎರಡನೇ ಭಾಗದ ಮತ್ತೊಂದು ವಿಶೇಷ ಅಂದರೆ ಟೂರ್ನಿ ನಡೆಯುತ್ತಿರುವ ಮುಸ್ಲಿಂ ರಾಷ್ಟ್ರ UAEನಲ್ಲಿ. ಆದರೆ ತಾಲಿಬಾನ್ ಉಗ್ರರು ಇಲ್ಲದ ಕಾರಣ ಹುಡುಕಿ ಆಫ್ಘಾನಿಸ್ತಾನವನ್ನು ಮತ್ತಷ್ಟು ಪಾತಾಳಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಆಫ್ಘಾನಿಸ್ತಾನ ಜನತೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಯುಎಇನಲ್ಲಿ ಐಪಿಎಲ್ 2021ರ ಎರಡನೇ ಭಾಗ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಂಬೈ ಇಂಡಿಯನ್ಸ್ ಹೋರಾಟ ಮಾಡಿದರೆ, ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಿತ್ತು. ಕೊರೋನಾ ಮಾರ್ಗಸೂಚಿ, ಬಯೋಬಬಲ್ ನಡುವೆ ಐಪಿಎಲ್ ಟೂರ್ನಿ ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 10 ರಿಂದ ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 15 ರಂದು ಫೈನಲ್ ಪಂದ್ಯ ನಡೆಯಲಿದೆ. 

Follow Us:
Download App:
  • android
  • ios