* ಐಪಿಎಲ್ 2021 ಎರಡನೇ ಭಾಗದಲ್ಲಿ ಆರ್‌ಸಿಬಿ ಸೋಲಿನೊಂದಿಗೆ ಆರಂಭ* ಕೆಕೆಆರ್ ವಿರುದ್ಧ ಕೊಹ್ಲಿ ಸೈನ್ಯಕ್ಕೆ ಸೋಲು* ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದ ಕೆಕೆಆರ್* ಡಗ್‌ ಔಟ್  ಜೇಮಿಸನ್ ನೋಟ ವೈರಲ್

ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ 
ಹೃದಯ ಬಿಡಲಾರೆ ಎಂದಿದೆ ಕೂಗಿ 
ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆ ಆಗಿದೆ ತೂಗಿ

ಡಾ. ರಾಜ್ ಕುಮಾರ್ ಅಭಿನಯದ ಕಾಮನಬಿಲ್ಲು ಬಿತ್ರದ ಸೂಪರ್ ಹಿಟ್ ಗೀತೆ.. ಅರೇರೆ ಕ್ರಿಕೆಟ್ ಗೆ ಈ ಹಾಡಿಗೆ ಎಲ್ಲಿಂದ ಸಂಬಂಧ ಅಂತೀರಾ... !

ಅಬು ಧಾಬಿ(ಸೆ.20): ಐಪಿಎಲ್ 2021(IPL 2021)ಟೂರ್ನಿ ಎರಡನೇ ಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore)ತಂಡ ಸೋಲಿನೊಂದಿಗೆ ಆರಂಭ ಮಾಡಿದೆ. ಕೋಲ್ಕತಾ ನೈಟ್ ರೈಡರ್ಸ್( kolkata knight riders)ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್ ಹೀನಾಯ ಸೋಲಿಗೆ ಗುರಿಯಾಗಿದೆ.

93 ರನ್ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್(KKR)ಯಾವುದೇ ಹಂತದಲ್ಲಿ ಆತಂಕ ಎದುರಿಸಲಿಲ್ಲ. ಆರಂಭಿಕರಾದ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಒಪನಿಂಗ್ ಕೆಕೆಆರ್ ತಂಡದ ಸುಲಭ ಗೆಲುವನ್ನು ಖಚಿತಪಡಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 82 ರನ್ ಜೊತೆಯಾಟ ನೀಡಿತು.

Scroll to load tweet…

ಹೀನಾಯ ಸೋತು ರನ್ ರೇಟ್ ಕಳಕೊಂಡ ಕೊಹ್ಲಿ ಪಡೆ

ಸೋಶಿಯಲ್ ಮೀಡಿಯಾ ಕ್ರಿಕೆಟ್ ಮಾತ್ರ ನೋಡಲಿಲ್ಲ. ಹೊರಗೆ ಏನು ನಡೆಯುತ್ತಿದೆ ಎಂಬುದರ ಮೇಲೆಯೂ ಗಮನ ಹರಿಸಿತ್ತು. ಬ್ಯಾಟಿಂಗ್ ಗೆ ತೆರಳುವ ಮುನ್ನ ಫೆವಿಲಿಯನ್ ನಲ್ಲಿ ಏನಾಗುತ್ತಿದೆ? ಎಂಬುದನ್ನು ಕ್ಯಾಮರಾಗಳು ಸೆರೆ ಹಿಡಿಯುತ್ತಿದ್ದವು.

ನ್ಯೂಜಿಲೆಂಡ್ ಕ್ರಿಕೆಟಿಗ ವೇಗದ ಬೌಲರ್ ಆರ್‌ ಸಿಬಿ ಪರ ಆಡುತ್ತಿರುವ ಕೈಲ್ ಜೇಮೀಸನ್(Kyle Jamieson) ಕಣ್ಣೋಟ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪಾನೀಯ ಕೇಂದ್ರದ ಬಳಿ ಕೂತಿರುವ ಕೈಲ್ ಜೇಮೀಸನ್ ಮತ್ತು ಸಪೋರ್ಟ್ ಸ್ಟಾಫ್ ಮಸಾಜ್ ಥೆರಫಿಸ್ಟ್ ನವನೀತಾ ಗೌತಮ್ ನಡುವಿನ 'ಕಣ್ಣು-ಕಣ್ಣು ಕಲೆತಾಗ ಹಾಡು' ಸದ್ಯ ಜೋರಾಗಿಯೇ ಓಡಾಡುತ್ತಿದೆ. ಆರ್‌ ಸಿಬಿ ತಂಡದ ಪರವಾಗಿ ಬ್ಯಾಟಿಂಗ್‌ ಗೆ ತೆರಳುವ ಮುನ್ನ ಪ್ಯಾಡ್ ಕಟ್ಟಿಕೊಂಡಿದ್ದಾಗಿನ ದೃಶ್ಯ ಅನಿಸುತ್ತದೆ.

Scroll to load tweet…