ಬರೋಬ್ಬರಿ 331 ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿದ 14ರ ಪೋರ ವೈಭವ್ ಸೂರ್ಯವಂಶಿ!
ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕೇವಲ 14ನೇ ವಯಸ್ಸಿಗೆ ತನ್ನ ಬ್ಯಾಟಿಂಗ್‌ನಿಂದ ಜಗತ್ತನ್ನು ಬೆರಗುಗೊಳಿಸುತ್ತಿರುವ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ತಮ್ಮ ಸ್ಪೋಟಕ ಇನಿಂಗ್ಸ್‌ನಿಂದ ಸುದ್ದಿಯಾಗಿದ್ದಾರೆ.

ಮುಂದುವರೆದ ವೈಭವ್ ಸೂರ್ಯವಂಶಿ ಅಬ್ಬರ
ಭಾರತೀಯ ಕ್ರಿಕೆಟ್‌ನ ಭರವಸೆಯ ಕಿರಣ, 14 ವರ್ಷದ ಯುವ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಬ್ಯಾಟ್‌ನಿಂದ ಗರ್ಜಿಸಿದ್ದಾರೆ. ಡಿವೈ ಪಾಟೀಲ್ ಟಿ20 ಕಪ್‌ನಲ್ಲಿ ಇಂಡಿಯನ್ ನೇವಿ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಅಬ್ಬರಿಸಿದರು. ಡಿವೈ ಪಾಟೀಲ್ ಬ್ಲೂ ತಂಡವನ್ನು ಪ್ರತಿನಿಧಿಸುತ್ತಿರುವ ವೈಭವ್, ಎದುರಾಳಿ ಬೌಲರ್‌ಗಳನ್ನು ದಂಡಿಸಿ ಕೇವಲ 19 ಎಸೆತಗಳಲ್ಲಿ 63 ರನ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳು ಸೇರಿವೆ. ಅವರ ಸ್ಟ್ರೈಕ್ ರೇಟ್ 331.58 ಆಗಿತ್ತು.
ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ವೈಭವ್
ವೈಭವ್ ಸೂರ್ಯವಂಶಿಗೆ ದಾಖಲೆಗಳು ಹೊಸದೇನಲ್ಲ
2025ರ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. 19 ವರ್ಷದೊಳಗಿನವರ ಮಟ್ಟದಲ್ಲಿಯೂ ಅವರ ಅಂಕಿಅಂಶಗಳು ಅದ್ಭುತವಾಗಿವೆ. 25 ಯೂತ್ ಏಕದಿನ ಪಂದ್ಯಗಳಲ್ಲಿ 56.48 ಸರಾಸರಿ ಮತ್ತು 165.72 ಸ್ಟ್ರೈಕ್ ರೇಟ್‌ನೊಂದಿಗೆ 1,412 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 7 ಅರ್ಧಶತಕಗಳು ಸೇರಿವೆ. ಯೂತ್ ವಿಶ್ವಕಪ್ ಫೈನಲ್‌ನಲ್ಲಿ 80 ಎಸೆತಗಳಲ್ಲಿ 175 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದು ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲು.
ಕ್ರಿಕೆಟ್‌ಗಾಗಿ 10ನೇ ತರಗತಿ ಬೋರ್ಡ್ ಎಕ್ಸಾಂ ತ್ಯಾಗ
ಡಿವೈ ಪಾಟೀಲ್ ಬ್ಲೂ ತಂಡದಲ್ಲಿ ಗಮನ ಸೆಳೆದ ವೈಭವ್
ಗಮನ ಸೆಳೆದ ವೈಭವ್ ಇನ್ನಿಂಗ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

