Asianet Suvarna News Asianet Suvarna News

IPL 2021:ಕೆಕೆಆರ್ ದಾಳಿಗೆ ತತ್ತರಿಸಿದ RCB, ಅಲ್ಪ ಮೊತ್ತಕ್ಕೆ ಆಲೌಟ್!

  • IPL 2021ರ ಲೀಗ್ ಹೋರಾಟ, RCB vs KKR ಪಂದ್ಯ
  • ದಿಢೀರ್ ಕುಸಿತ ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಅಲ್ಪ ಮೊತ್ತಕ್ಕೆ ಕುಸಿದ  ಕೊಹ್ಲಿ ಸೈನ್ಯ
IPL 2021 Varun Chakravarthy help KKR to restrict RCB by 92 Runs in Abu Dhabi ckm
Author
Bengaluru, First Published Sep 20, 2021, 9:20 PM IST

ಅಬು ಧಾಬಿ(ಸೆ.20):  IPL 2021ರ ಮೊದಲ ಭಾಗದಲ್ಲಿ ಭರ್ಜರಿ ಆರಂಭ ಪಡೆದು ಮುನ್ನುಗ್ಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore)ತಂಡ ಎರಡನೇ ಭಾಗದ ಮೊದಲ ಪಂದ್ಯದಲ್ಲೇ ತೀವ್ರ ಬ್ಯಾಟಿಂಗ್ ಹಿನ್ನಡೆ ಅನುಭವಿಸಿದೆ. ಪರಿಣಾಮ ಕೊಹ್ಲಿ ಸೈನ್ಯ ಅಲ್ಪ ಮೊತ್ತಕ್ಕೆ ಕುಸಿದಿದೆ. ಕೆಕೆಆರ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 92 ರನ್‌ಗೆ ಆಲೌಟ್ ಆಗಿದೆ.

 

IPL 2021: ಕೆಕೆಆರ್ ವಿರುದ್ಧ ಟಾಸ್ ಗೆದ್ದ RCB, ತಂಡಕ್ಕೆ ಇಬ್ಬರು ಪದಾರ್ಪಣೆ!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆರ್‌ಸಿಬಿ(RBC) ಕೋಲ್ಕತಾ ನೈಟ್ ರೈಡರ್ಸ್(kolkata knight riders)ತಂಡದ ದಾಳಿಗೆ ತತ್ತರಿಸಿದೆ. ನಿನ್ನೆ ನಡೆದ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲೂ ಇದೇ ಸ್ಥಿತಿ ಎದುರಾಗಿತ್ತು. ಆದರೆ ಚೆನ್ನೈ ಪರ ರುತುರಾಜ್ ಗಾಯಕ್ವಾಡ್ ಅಜೇಯ 88 ರನ್ ಸಿಡಿಸಿ ಚೆನ್ನೈ ತಂಡವನ್ನು ಕಾಪಾಡಿದ್ದರು. ಆದರೆ ಇಂದು ಕೊಹ್ಲಿ ಸೈನ್ಯ ಕಾಪಾಡಲು ಯಾವ ಬ್ಯಾಟ್ಸ್‌ಮನ್ ಮುಂದಾಗಲಿಲ್ಲ.

ನಾಯಕನಾಗಿ ಅಂತಿಮ ಟೂರ್ನಿ ಆಡುತ್ತಿರುವ ವಿರಾಟ್ ಕೊಹ್ಲಿ ಕೇವಲ 5 ರನ್ ಸಿಡಿಸಿ ನಿರಾಸೆ ಮೂಡಿಸಿದರು. ದೇವದತ್ ಪಡಿಕ್ಕಲ್ 22 ರನ್ ಸಿಡಿಸಿ ನಿರ್ಗಮಿಸಿದರು. ಪದಾರ್ಪಣೆ ಮಾಡಿದ ಎಸ್ ಭರತ್ 16 ರನ್‌ಗೆ ಸುಸ್ತಾದರು. ಗ್ಲೆನ್ ಮ್ಯಾಕ್ಸ್‌ವೆಲ್ 10, ಎಬಿ ಡಿವಿಲಿಯರ್ಸ್ ಶೂನ್ಯ ಸುತ್ತಿದರು.

ವಿರಾಟ್ ಕೊಹ್ಲಿ ಬಳಿಕ RCB ನಾಯಕರಾಗೋರು ಯಾರು..? ಇಲ್ಲಿವೆ 5 ಉತ್ತಮ ಆಯ್ಕೆಗಳು..!

ಸಚಿನ್ ಬೇಬಿ ಹಾಗೂ ವಾವಿಂಡು ಹಸರಂಗ ನೆರವಾಗಲಿಲ್ಲ. ಬೇಬಿ 7 ರನ್ ಸಿಡಿಸಿ ಔಟಾದರು. ಹಸರಂಗ ಡಕೌಟ್ ಆದರು. ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 66 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಇನ್ನು ಕೈಲ್ ಜಾಮಿನ್ಸನ್ ಕೇವಲ 4 ರನ್ ಸಿಡಿಸಿ ರನೌಟ್ ಆದರು. ಹರ್ಷಲ್ ಪಟೇಲ್ 12 ರನ್ ಸಿಡಿಸಿ ಔಟಾದರು. 

 

IPL 2021: ಆರ್‌ಸಿಬಿ ಕುರಿತಂತೆ ಮುತ್ತಿನಂಥ ಮಾತನಾಡಿದ ಕಿಂಗ್‌ ಕೊಹ್ಲಿ..!

ವರುಣ್ ಚಕ್ರವರ್ತಿ ಮೋಡಿಗೆ ಆರ್‌ಸಿಬಿ ಬಹುಬೇಗನೆ ವಿಕೆಟ್ ಕಳೆದುಕೊಂಡಿತು. ಇತ್ತ ಆ್ಯಂಡ್ರೆ ರೆಸೆಲ್, ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ಆರ್‌ಸಿಬಿಯನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಮೊಹಮ್ಮದ್ ಸಿರಾಜ್ ವಿಕೆಟ್ ಪತನದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 92 ರನ್‌ಗೆ ಆಲೌಟ್ ಆಗಿದೆ. 19 ಓವರ್‌ಗಳಲ್ಲಿ ಆರ್‌ಸಿಬಿ ತನ್ನೆಲ್ಲಾ ವಿಕೆ್ಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿದಿದೆ. ವರುಣ್ 3, ಲ್ಯೂಕಿ ಫರ್ಗ್ಯುಸೈನ್ 2, ಆ್ಯಂಡ್ರೆ ರಸೆಲ್ 3 ವಿಕೆಟ್ ಕಬಳಿಸಿದರು. 

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮೊದಲ ಭಾಗದಲ್ಲಿ ಆಡಿರುವ 7 ಪಂದ್ಯದಲ್ಲಿ 5 ಗೆಲುವು ಕಂಡಿದೆ. 

Follow Us:
Download App:
  • android
  • ios