ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ವಿರುದ್ದದ ಸೋಲಿನೊಂದಿಗೆ ಮಹಿಳಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಟ್ರೋಫಿ ನಿರೀಕ್ಷೆಯಲ್ಲಿ ತೆರಳಿದ್ದ ಭಾರತಕ್ಕೆ ಈ ಬಾರಿಯೂ ನಿರಾಸೆಯಾಗಿದೆ. 

ಲಂಡನ್ (ಜೂ.28) ಭಾರತ ಮಹಿಳಾ ತಂಡ ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿ ಟಿ20 ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಈ ಬಾರಿಯ ಚೊಚ್ಚಲ ಟ್ರೋಫಿ ಗೆಲ್ಲಲಬೇಕೆಂಬ ಹಠ ಎಲ್ಲರಲ್ಲೂ ಇತ್ತು. ಇನ್ನು ಮಹಿಳಾ ಐಪಿಎಲ್ ಟೂರ್ನಿಗಳಿಂದ ಅನುಭವ ಪಡೆದಿದ್ದ ಭಾರತ ಮಹಿಳೆಯರು ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದ್ದರು. ಆರಂಭದಲ್ಲೇ ಪಾಕಿಸ್ತಾನ ವಿರುದ್ದ ಭರ್ಜರಿ ಶುಭಾರಂಭ ಮಾಡಿದ ಭಾರತ ಬಲಿಷ್ಠ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿ ಇದೀಗ ಟೂರ್ನಿಯಿಂದ ಹೊರಬಿದ್ದಿದೆ. ಭಾರತ ನೀಡಿದ 170 ರನ್ ಟಾರ್ಗೆಟನ್ನು ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆಸ್ಟ್ರೇಲಿಯಾ 6 ವಿಕೆಟ್ ಗೆಲುವು ದಾಖಲಿಸಿತು. ಈ ಮೂಲಕ ಭಾರತ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಔಟ್, ನಾಲ್ಕು ತಂಡಗಳು ಸೆಮಿಫೈಲ್ ಪ್ರವೇಶ

ಭಾರತ ಇದ್ದ ಎ ಗುಂಪಿನಿಂದ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಇನ್ನು ಬಿ ಗುಂಪಿನಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಪ್ರವೇಶ ಪಡೆದಿದೆ. ಜೂನ್ 30 ರಂದು ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಮೊದಲ ಸೆಮಿಫೈನಲ್ ಪಂದ್ಯ ಆಡಲಿದೆ. ಇತ್ತ ಜುಲೈ 2 ರಂದು ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ 2ನೇ ಸೆಮಿಫೈನಲ್ ಪಂದ್ಯ ಆಡಲಿದೆ. ಜುಲೈ 5 ರಂದು ಫೈನಲ್ ಪಂದ್ಯ ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿತು.ಸ್ಮೃತಿ ಮಂಧನಾ 38 ರನ್, ಶೆಫಾಲಿ ವರ್ಮಾ 34 ರನ್, ಜೆಮಿಯ ರೋಡಿಗ್ರಸ್ 34 ರನ್, ನಾಯಕಿ ಹರ್ಮನ್ ಪ್ರೀತ್ 56 ರನ್ ಸಿಡಿಸಿದರು. ಉತ್ತಮ ರನ್ ಸಿಡಿಸಿದರೂ ಭಾರತಕ್ಕೆ ಗೆಲುವು ಸಿಗಲಿಲ್ಲ. ಟಿ20 ಮಹಿಳಾ ಟೂರ್ನಿಯಲ್ಲಿ 6 ಬಾರಿ ಚಾಂಪಿಯನ್ ಆಗಿರುವ ಬಲಿಷ್ಠ ಆಸ್ಟ್ರೇಲಿಯಾ ಇದೀಗ ಭಾರತ ಮಣಿಸಿ ಸೆಮಿಫೈನಲ್ ಪ್ರವೇಶ ಮಾಡಿದೆ. ಈ ಬಾರಿಯು ಆಸ್ಟ್ರೇಲಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಕಳೆದೆರಡು ಮಹಿಳಾ ಟಿ20 ಆವೃತ್ತಿಯಲ್ಲಿ ಸೌತ್ ಆಫ್ರಿಕಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಟ್ರೋಫಿ ಗೆಲ್ಲಲೇಬೇಕೆಂಬ ಹಠದಲ್ಲಿದೆ. ಆದರೆ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿದೆ.