ಮೈದಾನದಲ್ಲಿ ಹೇಗೆ ಸೆಲೆಬ್ರೇಷನ್ ಮಾಡಬೇಕು ಎಂದು ಅಭ್ಯಾಸ ಮಾಡಿಕೊಂಡು ಬಂದ ಪಾಕಿಸ್ತಾನ ಮಹಿಳಾ ತಂಡ ಟಿ20 ವಿಶ್ವಕಪ್‌ನಲ್ಲಿ ಸೆಲೆಬ್ರೇಷನ್‌ಗೆ ಅವಕಾಶವೇ ಸಿಕ್ಕಿಲ್ಲ. ಒಂದು ಪಂದ್ಯ ಗೆಲ್ಲದೆ ಹೊರಬಿದ್ದ ಪಾಕಿಸ್ತಾನ ಫುಲ್ ಟ್ರೋಲ್ ಆಗಿದೆ. 

ಲಂಡನ್(ಜೂ.22) ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಆಗಮಿಸುವ ಮುನ್ನ ವಿಕೆಟ್ ಸಂಭ್ರಮ ಹೇಗಿರಬೇಕು, ಪಂದ್ಯ ಗೆದ್ದ ಬಳಿಕ ಸೆಲೆಬ್ರೇಷನ್, ಅಂಪೈರ್ ಬಳಿ ಅಪೀಲ್ ಸೇರಿದಂತೆ ಹಲವು ಸೆಲೆಬ್ರೇಷನ್ ಸ್ಟೈಲ್ ಅಭ್ಯಾಸ ಮಾಡಿದ್ದ ಪಾಕಿಸ್ತಾನ ಒಂದೇ ಒಂದು ಪಂದ್ಯ ಗೆಲ್ಲಲಿಲ್ಲ, ಸೆಲೆಬ್ರೇಷನ್‌ಗೆ ಅವಕಾಶವೂ ಸಿಗದೆ ಟೂರ್ನಿಯಿಂದ ಹೊರಬಿದ್ದಿದೆ. ಪರಿಣಾಣ ಇದೀಗ ಪಾಕಿಸ್ತಾನದ ತಂಡ ಈ ಸೆಲೆಬ್ರೇಷನ್ ತಯಾರಿ ವಿಡಿಯೋ ಹಿಡಿದು ಅಭಿಮಾನಿಗಳು ಫುಲ್ ಟ್ರೋಲ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿ20 ವಿಶ್ವಕಪ್‌ನಲ್ಲಿ 3 ಪಂದ್ಯ ಸೋತು ಟೂರ್ನಿಯಿಂದಲೇ ಔಟ್

ಪಾಕಿಸ್ತಾನ ಪಂದ್ಯ ಹೇಗೆ ಆಡಬೇಕು, ರಣತಂತ್ರ ಹೇಗಿರಬೇಕು, ಎದುರಾಳಿಗ ಬಲ ಏನು ಅನ್ನೋ ಕುರಿತು ಅಭ್ಯಾಸ, ತಯಾರಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ವಿಕೆಟ್ ಪಡೆದ ಹೇಗೆ ಸಂಭ್ರಮಿಸಬೇಕು, ಎದುರಾಳಿಯನ್ನು ಹೇಗೆ ಕಿಚಾಯಿಸಬೇಕು, ಪಂದ್ಯ ಗೆದ್ದ ಬಳಿಕ ಸೆಲೆಬ್ರೇಷನ್‌ನಲ್ಲಿ ಯಾವ ಸ್ಟೆಪ್ ಇರಬೇಕು ಅನ್ನೋ ಕುರಿತು ತಯಾರಿ ಮಾಡಿಕೊಂಡಿತ್ತು. ಆದರೆ ಪಾಕಿಸ್ತಾನ ತಂಡಕ್ಕೆ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಟಿ20 ವಿಶ್ವಕಪ್ ಮಹಿಳಾ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಭಾರತ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 64ರನ್‌ಗಳ ಹೀನಾಯ ಸೋಲು ಕಂಡಿತ್ತು. ಎರಡನೇ ಪಂದ್ಯ ಸೌತ್ ಆಫ್ರಿಕಾ ವಿರುದ್ದ ಆಡಿ ಸೋಲು ಕಂಡಿತ್ತು. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಪಾಕಿಸ್ತಾನ ಮುಗ್ಗರಿಸಿತ್ತು. ಸತತ 3 ಪಂದ್ಯ ಸೋತು ಪಾಕಿಸ್ತಾನ ಇನ್ನೆರಡು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಿಂದ ಹೊರಬಿದ್ದಿದೆ.ಲೀಗ್ ಹಂತಕ್ಕೂ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲೂ ಪಾಕಿಸ್ತಾನ ತಂಡ ಎರಡೂ ಪಂದ್ಯ ಸೋತಿತ್ತು. ಈ ಮೂಲಕ ಒಟ್ಟು 5 ಪಂದ್ಯದಲ್ಲಿ ಪಾಕಿಸ್ತಾನ ಸತತ ಸೋಲು ಕಂಡಿದೆ.

Scroll to load tweet…

ಪಾಕಿಸ್ತಾನ ಮಹಿಳಾ ತಂಡದ ಈ ಸೆಲೆಬ್ರೇಷನ್ ಅಭ್ಯಾಸದ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಮಹಿಳಾ ಆಟಗಾರರು ಮಾತ್ರವಲ್ಲ, ಪಾಕ್ ಮಹಿಳಾ ತಂಡದ ಕೋಚ್ ಕೂಡ ಮಹಿಳೆಯರ ಸಾಹಸಕ್ಕೆ ನಸು ನಕ್ಕಿದ್ದಾರೆ. ಆದರೆ ಫಲಿತಾಂಶ ಮಾತ್ರ ಉಲ್ಟಾ ಆಗಿದೆ. ಇದೀಗ ಈ ವಿಡಿಯೋ ಮುಂದಿಟ್ಟು ಹಲವರು ಪಾಕ್ ತಂಡವನ್ನು ಟ್ರೋಲ್ ಮಾಡಿದ್ದಾರೆ. ಪಾಕಿಸ್ತಾನ ಪುರುಷರ ಹಾಗೂ ಮಹಿಳೆಯರ ತಂಡ ಬಿಲ್ಡಪ್‌ಗೆ ಯಾವುದೇ ಕೊರತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಪಾಕಿಸ್ತಾನದ ರಕ್ತದಲ್ಲಿ ಬಂದಿರುವ ಕಲೆ. ಆಪರೇಶನ್ ಸಿಂದೂರ್ ಬಳಿಕವೂ ಇದೇ ಆ್ಯಟಿಟ್ಯೂಡ್ ಹಾಗೂ ಎನರ್ಜಿ ಅವರಲ್ಲಿತ್ತು ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಈ ಸೆಲೆಬ್ರೇಷನ್ ವಿಡಿಯೋ ಪಾಕಿಸ್ತಾನದಲ್ಲಿ ಹಂಚಿ, ಟಿ20 ವಿಶ್ವಕಪ್‌ನಲ್ಲಿ ತಾವೇ ಗೆದ್ದಿದ್ದೇವೆ ಎಂದು ತೋರಿಸುವ ಪ್ಲಾನ್. ಕಾರಣ ಪಾಕಿಸ್ತಾನದಲ್ಲಿರುವ ಟಿವಿಗಳು ಬಹುತೇಕ ಒಡೆದು ಚೂರಾಗಿದೆ ಎಂದು ಹಲವರು ಕುಟುಕಿದ್ದಾರೆ.