ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್‌ ಬಾಲ್‌!

ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಹಗಲು-ರಾತ್ರಿ ನಡೆಯಲಿದೆ. ಇದೇ ಮೊದಲ ಬಾರಿಗೆ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಡುತ್ತಿರವು ಟೀಂ ಇಂಡಿಯಾ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಇತ್ತ ಬಿಸಿಸಿಐ ಈ ಪಂದ್ಯಕ್ಕೆ 72 ಪಿಂಕ್ ಬಾಲ್ ಪೂರೈಸಲು ಸೂಚಿಸಿದೆ.

India vs bangladesh cricket bcci use 72 pink ball for day and night test

ಮುಂಬೈ(ಅ.31) : ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನ.22ರಿಂದ ನಡೆ​ಯ​ಲಿ​ರುವ ಭಾರತ-ಬಾಂಗ್ಲಾ​ದೇಶ ನಡು​ವಿನ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಬಿಸಿ​ಸಿಐ, ಚೆಂಡು ತಯಾ​ರಕ ಸಂಸ್ಥೆ ‘ಎಸ್‌ಜಿ’ಗೆ 72 ಪಿಂಕ್‌ ಬಾಲ್‌ಗಳನ್ನು ಪೂರೈ​ಸು​ವಂತೆ ಕೇಳಿ​ಕೊಂಡಿದೆ. 

ಇದನ್ನೂ ಓದಿ: ದಾದಾ ಪ್ರಸ್ತಾವನೆಗೆ ಬಾಂಗ್ಲಾ ಸಮ್ಮತಿ; ಭಾರತದಲ್ಲಿ ಮೊಟ್ಟ ಮೊದಲ ಡೇ & ನೈಟ್ ಟೆಸ್ಟ್!

ಎಸ್‌ಜಿ ಚೆಂಡಿನ ಬದಲು ಆಸ್ಪ್ರೇ​ಲಿ​ಯಾದ ಕೂಕ​ಬುರ್ರಾ ಚೆಂಡ​ಗ​ಳ​ನ್ನು ತರಿ​ಸ​ಬ​ಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಬಿಸಿ​ಸಿಐ, ಎಸ್‌ಜಿ ಚೆಂಡ​ಗ​ಳನ್ನೇ ಬಳ​ಸಲು ನಿರ್ಧ​ರಿ​ಸಿದೆ.ಭಾರತದಲ್ಲಿ ಟೆಸ್ಟ್‌ ಪಂದ್ಯ​ಗ​ಳಿಗೆ ಎಸ್‌ಜಿ ಸಂಸ್ಥೆ ತಯಾ​ರಿ​ಸುವ ಕೆಂಪು ಚೆಂಡನ್ನೇ ಬಳ​ಸ​ಲಾ​ಗು​ತ್ತದೆ. ಸಂಸ್ಥೆಯ ಚೆಂಡಿನ ಬಗ್ಗೆ ಭಾರತ ತಂಡದ ಹಲವು ಆಟ​ಗಾ​ರರು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದರು.

ಇದನ್ನೂ ಓದಿ: ಡೇ ಅಂಡ್ ನೈಟ್ ಟೆಸ್ಟ್ ಮ್ಯಾಚ್: ಏನು? ಎತ್ತ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಕೆಂಪು ಚೆಂಡಿಗೆ ಹೋಲಿ​ಸಿ​ದರೆ ಗುಲಾಬಿ ಬಣ್ಣದ ಚೆಂಡಿನ ಮೇಲೆ ಹೆಚ್ಚು ಧೂಳು ಕೂರ​ಲಿದ್ದು, ಬೇಗನೆ ಕೊಳೆಯಾಗ​ಲಿದೆ. ಹೀಗಾಗಿ ಚೆಂಡಿನ ಗುಣ​ಮ​ಟ್ಟ ಹೆಚ್ಚಿ​ಸುವ ಅನಿ​ವಾ​ರ್ಯತೆ ಇದೆ ಎನ್ನುವ ಸಲಹೆಯನ್ನು ಬಿಸಿ​ಸಿಐ, ಚೆಂಡು ತಯಾ​ರ​ಕ​ರಿಗೆ ನೀಡಿದೆ ಎನ್ನ​ಲಾ​ಗಿದೆ.

ಇದನ್ನೂ ಓದಿ: ಬೆಂಗ್ಳೂರಲ್ಲಿ ಗಂಗೂಲಿ-ದ್ರಾವಿಡ್ ಸುದೀರ್ಘ ಚರ್ಚೆ; NCAಗೆ ಹೊಸ ರೂಪ!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತದಲ್ಲಿ ಮೊಟ್ಟ ಮೊದಲ ಹಗಲು-ರಾತ್ರಿ ಟೆಸ್ಟ್‌ ಆಯೋಜಿಸಲು ಎಲ್ಲಾ ತಯಾರಿ ಮಾಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಒಂದೇ ವಾರಕ್ಕೆ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿರುವ ಗಂಗೂಲಿ, ಇತಿಹಾಸ ರಚಿಸಲು ಸಜ್ಜಾಗಿದ್ದಾರೆ. 

ಕೋಲ್ಕತಾದಲ್ಲಿ ನಡೆಯಲಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಹಗಲು ರಾತ್ರಿ ನಡೆಯಲಿದೆ. ಟೆಸ್ಟ್ ಮಾನ್ಯತೆ ಪಡೆದಿರುವ ಇತರ ರಾಷ್ಟ್ರಗಳು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಡಿದೆ. ಆದರೆ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಡಲಿದೆ. 
 

Latest Videos
Follow Us:
Download App:
  • android
  • ios