ಮುಂಬೈ(ಅ.29): ಭಾರತ ಇದೇ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುವುದು ಖಚಿತವಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಂತೆ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸುವ ಭರವಸೆ ನೀಡಿದ್ದರು. ಇದೀಗ ಎರಡೇ ವಾರದಲ್ಲಿ ಗಂಗೂಲಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕೋಲ್ಕತಾ ಟೆಸ್ಟ್ ಪಂದ್ಯ ಹಗಲು ರಾತ್ರಿ ನಡಯಲಿದೆ.

ಇದನ್ನೂ ಓದಿ: ಬೆಂಗ್ಳೂ​ರಲ್ಲಿ ದ್ರಾವಿಡ್‌ ಭೇಟಿಯಾಗಲಿದ್ದಾರೆ ಗಂಗೂಲಿ!

ಭಾರತ ಹಾಗೂ ಬಾಂಗ್ಲಾದೇಶ ನಡುವಿನ 3 ಟಿ20  ಪಂದ್ಯದ ಟಿ20 ಸರಣಿ ನ.3ರಿಂದ ಆರಂಭಗೊಳ್ಳುತ್ತಿದೆ.  ನವೆಂಬರ್ 14 ರಿಂದ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯ ಇಂದೋರ್‌ನಲ್ಲಿ ನಡಯಲಿದ್ದು, ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಕೋಲ್ಕತಾದಲ್ಲಿ ಆರಂಭವಾಗಲಿದೆ. ಕೋಲ್ಕತಾ ಪಂದ್ಯ ಇದೀಗ ಹಗಲು ರಾತ್ರಿ ನಡೆಯಲಿದೆ. ಗಂಗೂಲಿ ಪ್ರಸ್ತಾವನೆಯಲ್ಲಿ ಬಾಂಗ್ಲಾ ಕ್ರಿಕೆಟ್ ಮಂಡಳಿ, ಆಟಗಾರರೊಂದಿಗೆ ಚರ್ಚಿಸಿ ಸಮ್ಮತಿ ಸೂಚಿಸಿದೆ.

ಇದನ್ನೂ ಓದಿ: ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಭಾರತ vs ಬಾಂಗ್ಲಾದೇಶ ಪಂದ್ಯ!

ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸುವ ಕುರಿತು ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ತಕ್ಷಣವೇ ಸ್ಪಂದಿಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ, ಆಟಗಾರರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಇದೀಗ ಬಾಂಗ್ಲಾ ಕ್ರಿಕೆಟ್ ಮಂಡಳಿ ಸಮ್ಮತಿ ಸೂಚಿಸಿದೆ.