ಇಂಡಿಯಾ ವರ್ಸಸ್ ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯದಿಂದ ಡ್ರಾಪ್ ಆಗುತ್ತಿದ್ದಂತೆ ತೀವ್ರ ಭಾವುಕರಾಗಿ ಕಣ್ಣೀರಿಟ್ಟ ವೇಗಿ ಮೊಹಮ್ಮದ್ ಸಿರಾಜ್. ಮೈದಾನದಲ್ಲಿ ಗಾಗಲ್ಸ್ ಧರಿಸಿ ಅಳು ಮುಚ್ಚಿಡಲು ಯತ್ನಿಸಿದ ಈ ಎಮೋಷನಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೂರ್ಣ ವಿವರ ಇಲ್ಲಿದೆ.

ಕಿವೀಸ್ ಮತ್ತು ಇಂಡಿಯಾ ಎರಡನೇ ಟೆಸ್ಟ್ ಪಂದ್ಯವು ಪ್ರಸ್ತುತ ಕ್ರೈಸ್ಟ್‌ಚರ್ಚ್ ಮೈದಾನದಲ್ಲಿ ನಡೆಯುತ್ತಿದೆ. ಈ ಎರಡನೇ ಟೆಸ್ಟ್‌ನಿಂದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಮತ್ತೊಮ್ಮೆ ಡ್ರಾಪ್‌ ಮಾಡಲಾಗಿದೆ. ಇದರಿಂದಾಗಿ, ಟೀಮ್ ಇಂಡಿಯಾದ ಪ್ಲೇಯಿಂಗ್ XI ಆಯ್ಕೆ ಬಗ್ಗೆ ಸಾಕಷ್ಟು ಟೀಕೆಗಳಿವೆ. ಇದರ ಮಧ್ಯ, ಎರಡನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ತಂಡದಿಂದ ಕೈಬಿಟ್ಟ ನಂತರ ಮೊಹಮ್ಮದ್ ಸಿರಾಜ್ ಕಣ್ಣೀರು ಹಾಕಿದ್ದಾರೆ. ಆ ಕಣ್ಣೀರನ್ನು ಕನ್ನಡಕವ ಮರೆಮಾಡಿವೆ ಅಷ್ಟೇ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕಾರ್ತಿಕ, ರೆಹಾನೆ ಭಾವುಕ ಕಾಮೆಂಟ್!

ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ XI ತಂಡದಿಂದ ಕೈಬಿಟ್ಟ ನಂತರ ಮೊಹಮ್ಮದ್ ಸಿರಾಜ್ ತೀವ್ರ ಭಾವುಕರಾಗಿದ್ದಾರೆ. ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಪಂದ್ಯದ ಮೊದಲ ದಿನದ ಬೆಳಿಗ್ಗೆ ಕ್ಯಾಮೆರಾದಲ್ಲಿ ಸೆರೆಯಾದ ನಂತರ ಮೊಹಮ್ಮದ್ ಸಿರಾಜ್ ಸನ್ ಗ್ಲಾಸ್‌ಗಳ ಹಿಂದೆ ಕಣ್ಣುಗಳನ್ನು ಮರೆಮಾಡಿಕೊಂಡು ಕಾಣಿಸಿಕೊಂಡರು. ಕುತೂಹಲಕಾರಿಯಾಗಿ, ಈ ದೃಶ್ಯಗಳು ಪಂದ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಭಾರತದ ಮಾಜಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮತ್ತು ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಅವರ ಗಮನ ಸೆಳೆದವು. ತಂಡದಿಂದ ಅವರನ್ನು ಕೈಬಿಟ್ಟ ನಿರ್ಧಾರದಿಂದ ಖಂಡಿತ ದುಃಖಿತನಾಗಿದ್ದೇನೆ ಎಂದು ಮುರಳಿ ಕಾರ್ತಿಕ್ ಹೇಳಿದ್ದಾರೆ.

ಕಣ್ಣು ಮುಚ್ಚಿದ್ದನ್ನು ಗಮನಿಸಿದ ರೆಹಾನೆ!

ಸಿರಾಜ್‌ರನ್ನು ಮೊದಲ ಟೆಸ್ಟ್ ನಿಂದ ಕೈಬಿಡಲಾಯಿತು. ಈಗ ಅವರಿಗೆ ಎರಡನೇ ಟೆಸ್ಟ್ ನಲ್ಲೂ ಅವಕಾಶ ನೀಡಲಾಗಿಲ್ಲ. ಆದ್ದರಿಂದ ಅವರು ಅಭ್ಯಾಸದ ಸಮಯದಲ್ಲಿ ಮೈದಾನದಲ್ಲಿದ್ದಾಗ, ರಹಾನೆ ಸನ್ ಗ್ಲಾಸ್ ನಿಂದ ಕಣ್ಣು ಮುಚ್ಚಿಕೊಂಡಿದ್ದನ್ನು ಗಮನಿಸಿದ್ದಾರೆ. ಈ ಇಡೀ ದೃಶ್ಯವನ್ನು ನೋಡಿದ ಕಾರ್ತಿಕ್, ಅವನು ಅಳುತ್ತಿದ್ದಾನೆಯೇ? ಎಂದು ಕೇಳಿದ್ದಾರೆ. ನನಗೆ ಗೊತ್ತಿಲ್ಲ, ದಾದಾ. ಅವರು ಖಂಡಿತವಾಗಿಯೂ ತುಂಬಾ ಭಾವನಾತ್ಮಕವಾಗಿ ಇರುವಂತೆ ಕಾಣುತ್ತಿದ್ದಾರೆ. ಏಕೆಂದರೆ ಅವರು ಸ್ವಭಾವತಃ ಭಾವನಾತ್ಮಕ ವ್ಯಕ್ತಿ ಎಂದು ಕಾರ್ತಿಕ್ ಹೇಳಿದ್ದಾರೆ.

ಕಾರ್ತಿಕ ಸ್ಪೂರ್ತಿಯ ಮಾತು!

ನಾವು ತಂಡದಲ್ಲಿ ಎಲ್ಲಾ ರೀತಿಯ ಆಟಗಾರರೊಂದಿಗೆ ಆಡಿದ್ದೇವೆ. ಕೆಲವರು ತಂಡದಿಂದ ಹೊರಬಿದ್ದಾಗ ಆ ನೋವನ್ನು ಸುಲಭವಾಗಿ ನಿಭಾಯಿಸುತ್ತಾರೆ. ಇನ್ನೂ ಕೆಲವರು ತಂಡದಿಂದ ಕೈಬಿಟ್ಟರೂ, ಮತ್ತೆ ಕಮ್‌ಬ್ಯಾಕ್ ಮಾಡಿ ಆಡಲೇಬೇಕೆಂಬ ಛಲ ಹೊಂದಿರುತ್ತಾರೆ. ಕಾಲು, ತಲೆ ಅಥವಾ ಇಡೀ ದೇಹವೇ ನೋಯುತ್ತಿದ್ದರೂ, ಎಷ್ಟೇ ಆಯಾಸವಾದರೂ ಅವರು ಅದನ್ನು ಲೆಕ್ಕಿಸುವುದಿಲ್ಲ. ತಂಡಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆಯುತ್ತಾರೆ, ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಾರೆ. ಸಿರಾಜ್ ಕೂಡ ಅಂತಹದ್ದೇ ಛಲಗಾರ ಬೌಲರ್ ಆಗಿ ಕಾಣಿಸುತ್ತಾರೆ ಎಂದು ಕಾರ್ತಿಕ ಹೇಳಿದ್ದಾರೆ. ಏಕೆಂದರೆ ಕೆಲವೊಮ್ಮೆ ನಾವು ಅನುಭವಿಸುವ ನೋವು ಮತ್ತು ಬೇಸರವನ್ನು ಇತರರ ಮುಂದೆ ತೋರಿಸಿಕೊಳ್ಳದೆ ನಮ್ಮೊಳಗೇ ಬಚ್ಚಿಟ್ಟುಕೊಳ್ಳುತ್ತೇವೆ. ಈ ಹಿಂದೆ ಏಕದಿನ ಪಂದ್ಯಗಳಲ್ಲಿ ಅವರನ್ನು ಬೆಂಚ್ ಕಾಯಿಸಲಾಗಿತ್ತು. ಅಷ್ಟೇ ಅಲ್ಲ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಬೇರೆ ಯಾರನ್ನೂ ಆಡಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಾಗ ಮಾತ್ರ ಕೊನೆಯ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಯಿತು. ಇಂತಹ ನಡೆ ಯಾವುದೇ ಆಟಗಾರನಿಗೆ ತೀವ್ರ ನೋವುಂಟು ಮಾಡುತ್ತದೆ" ಎಂದು ದಿನೇಶ್ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ.