ಏಷ್ಯಾಕಪ್ ಫೈನಲ್‌ನಲ್ಲಿ ಮೊಹಮ್ಮದ್ ಸಿರಾಜ್ ಮಾರಕ ದಾಳಿಲಂಕಾದ 6 ಬ್ಯಾಟರ್ ಬಲಿ ಪಡೆದ ಹೈದರಾಬಾದ್ ಮೂಲದ ವೇಗಿಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್
ಕೊಲಂಬೊ(ಸೆ.17): ಏಷ್ಯಾಕಪ್ ಫೈನಲ್‌ನಲ್ಲಿ ಹೈದರಾಬಾದ್ ಮೂಲದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬೆಂಕಿಯುಂಡೆ ಉಗುಳುವಂತ ಬೌಲಿಂಗ್ ದಾಳಿ ನಡೆಸುವ ಮೂಲಕ ಲಂಕಾ ದಹನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ 6 ಓವರ್‌ಗಳಲ್ಲಿ ಸಿರಾಜ್ ಒಂದು ಮೇಡನ್ ಓವರ್ ಸಹಿತ ಕೇವಲ 13 ರನ್ ನೀಡಿ 6 ವಿಕೆಟ್ ಕಬಳಿಸಿ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ 13 ಓವರ್ ಅಂತ್ಯದ ವೇಳೆಗೆ ಶ್ರೀಲಂಕಾ ತಂಡವು 40 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.
ಹೌದು, ಸಿರಾಜ್ ಏಷ್ಯಾಕಪ್ ಫೈನಲ್‌ನಲ್ಲಿ ಡ್ರೀಮ್ ಸ್ಪೆಲ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ದಾಳಿ ನಡೆಸಿದ ಸಿರಾಜ್, ಲಂಕಾ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಲು ಅವಕಾಶ ನೀಡಲಿಲ್ಲ. ಮೊದಲ ಓವರ್ ಮೇಡನ್ ಓವರ್ ಮಾಡಿದರೆ, ತಾವೆಸೆದ ಎರಡನೇ ಓವರ್‌ನಲ್ಲೇ 4 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಲಂಕಾ ಪಾಳಯ ತಬ್ಬಿಬ್ಬಾಗುವಂತೆ ಮಾಡಿದರು. ಇನ್ನು ತಾವೆಸೆದ ಮೂರನೇ ಓವರ್‌ನ 4ನೇ ಎಸೆತದಲ್ಲಿ ಲಂಕಾ ನಾಯಕ ದಶುನ್ ಶಾನಕಾ ವಿಕೆಟ್ ಕಬಳಿಸಿ 5 ವಿಕೆಟ್ ಗೊಂಚಲು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಸಿರಾಜ್, ತಮ್ಮ ಕೋಟಾದ 6ನೇ ಓವರ್‌ನ ಎರಡನೇ ಎಸೆತದಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ 6ನೇ ಬಲಿ ಪಡೆಯುವಲ್ಲಿ ಯಶಸ್ವಿಯಾದರು.
Asia Cup Final ಸಿರಾಜ್ ಬಿರುಗಾಳಿಗೆ ಮಂಕಾದ ಲಂಕಾ, ಕೇವಲ 50 ರನ್‌ಗೆ ಆಲೌಟ್!
ಇನ್ನು ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಸಾಕಷ್ಟು ವೈರಲ್ ಆಗಲಾರಂಭಿಸಿವೆ. ಕೆಲವರು ಇಂದು ಶ್ರೀಲಂಕಾ ಪಾಲಿಗೆ ಮೊಹಮ್ಮದ್ ಸಿರಾಜ್, ಲಂಕೆಗೆ ಬೆಂಕಿಯಿಟ್ಟ ಹನುಮಂತನ ರೀತಿ ಕಾಣುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ
ಇನ್ನೋರ್ವ ನೆಟ್ಟಿಗ ಈ ಹಿಂದೆ ಸಿರಾಜ್ ಕಳಪೆ ಫಾರ್ಮ್‌ನಲ್ಲಿದ್ದಾಗ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಇನ್ನು ಮುಂದೆ ಸಿರಾಜ್‌ಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ ಎನ್ನುವ ಹೆಡ್‌ಲೈನ್ ಇರುವ ಆರ್ಟಿಕಲ್ ಜತೆಗೆ ಇಂದಿನ ಫೋಟೋ ಶೇರ್ ಮಾಡಿ, ಒಳ್ಳೆಯ ತಿರುಗೇಟು ಎಂದು ಬರೆದುಕೊಂಡಿದ್ದಾರೆ.
ಸಿರಾಜ್ ಪ್ರದರ್ಶನದ ಕುರಿತಾದ ಮತ್ತಷ್ಟು ಮೀಮ್ಸ್‌ಗಳು ಇಲ್ಲಿವೆ ನೋಡಿ:
