Asianet Suvarna News Asianet Suvarna News

ಐಸಿಸಿ ಟಿ20 ವಿಶ್ವಕಪ್‌ ಭಾರತದಿಂದ ಯುಎಇಗೆ ಸ್ಥಳಾಂತರಿಸಿದ ಬಿಸಿಸಿಐ

* ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಭಾರತದಿಂದ ಯುಎಇಗೆ ಸ್ಥಳಾಂತರ

* ಕೋವಿಡ್‌ ಭೀತಿಯಿಂದಾಗಿ ಟಿ20 ವಿಶ್ವಕಪ್‌ ಯುಎಇಗೆ ಶಿಫ್ಟ್

* ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಟಿ20 ವಿಶ್ವಕಪ್ ಟೂರ್ನಿ

ICC T20 World Cup to be played in UAE confirms BCCI kvn
Author
Mumbai, First Published Jun 28, 2021, 6:49 PM IST

ಮುಂಬೈ(ಜೂ.28): ಬಹುನಿರೀಕ್ಷಿತ ಟಿ20 ವಿಶ್ವಕಪ್‌ ಟೂರ್ನಿಯು ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ಗೆ ಸ್ಥಳಾಂತರಗೊಂಡಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿಗೆ ತಿಳಿಸಿದ್ದಾರೆ. ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ 16 ರಾಷ್ಟ್ರಗಳನ್ನೊಳಗೊಂಡ ಟಿ20 ಟೂರ್ನಿಯನ್ನು ಇಲ್ಲಿ ಆಯೋಜಿಸುವುದು ಕಷ್ಟಸಾಧ್ಯವೆಂದು ಬಿಸಿಸಿಐ ತೀರ್ಮಾನ ತೆಗೆದುಕೊಂಡಿದೆ.
 
ಭಾರತ 2021ನೇ ಸಾಲಿನ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಆತಿಥ್ಯದ ಹಕ್ಕು ಪಡೆದುಕೊಂಡಿತ್ತು. ಭಾರತದಲ್ಲೇ ಟಿ20 ವಿಶ್ವಕಪ್ ಆಯೋಜಿಸಲು ಬಿಸಿಸಿಐ ಎಲ್ಲಾ ದಾರಿಗಳ ಅನ್ವೇಷಣೆ ನಡೆಸಲು ಇದೇ ಜೂನ್‌ 28ರ ವರೆಗೆ ಐಸಿಸಿಯಿಂದ ಗಡುವು ಪಡೆದುಕೊಂಡಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ತೀರ್ಮಾನ ತೆಗೆದುಕೊಂಡಿದೆ.

ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಟಿ20 ವಿಶ್ವಕಪ್ ಟೂರ್ನಿಯು ಯುಎಇನ ದುಬೈ, ಅಬುಧಾಬಿ, ಶಾರ್ಜಾ ಹಾಗೂ ಮಸ್ಕಟ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಟಿ20 ವಿಶ್ವಕಪ್‌ ಟೂರ್ನಿಯು ಯುಎಇಗೆ ಸ್ಥಳಾಂತರವಾಗಿದ್ದರೂ ಸಹಾ ಬಿಸಿಸಿಐ ಆತಿಥ್ಯದ ಹಕ್ಕನ್ನು ಉಳಿಸಿಕೊಂಡಿದೆ.

ಇಂದೇ ಐಪಿಎಲ್‌ ಭಾಗ-2 ವೇಳಾಪಟ್ಟಿ ಪ್ರಕಟ?

ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ ಖಚಾಂಚಿ ಅರುಣ್ ಧುಮಾಲ್‌ ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ಇನ್ನು ಅರ್ಧದಲ್ಲೇ ಸ್ಥಗಿತಗೊಂಡಿರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಯುಎಇನಲ್ಲಿಯೇ ಜರುಗಲಿದೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 10ರವರೆಗೆ ಐಪಿಎಲ್ ಭಾಗ-2 ಜರುಗಲಿದ್ದು, ಬಿಸಿಸಿಐ ಸದ್ಯದಲ್ಲೇ ಅಧಿಕೃತ ವೇಳಾಪಟ್ಟಿಸಲಿದೆ.

Follow Us:
Download App:
  • android
  • ios