ಭಾರತ ಪ್ರವಾಸಕ್ಕೆ ಅನುಮತಿ ಕೋರಿ ಪಿಸಿಬಿ ಮನವಿ, ಪಾಕಿಸ್ತಾನ ಸರ್ಕಾರದ ಅಂಗಳದಲ್ಲಿ ಚೆಂಡು!

ಏಕದಿನ ವಿಶ್ವಕಪ್ ಟೂರ್ನಿಗೆ ಕೌಂಟ್ ಡೌನ್ ಆರಂಭಗೊಂಡಿದೆ. ಅಕ್ಟೋಬರ್ 5 ರಂದು ಟೂರ್ನಿ ಆರಂಭಗೊಳ್ಳಲಿದೆ. ಇದೀಗ ಈ ಟೂರ್ನಿಗಾಗಿ ಭಾರತ ಪ್ರವಾಸ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಾಕ್ ಸರ್ಕಾರದ ಬಳಿ ಅನುಮತಿ ಕೇಳಿದೆ.

ICC Odi world cup Pakistan Cricket board ask Government to give clearance for India travel ckm

ಇಸ್ಲಾಮಾಬಾದ್(ಜು.02)  ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎಲ್ಲಾ ತಂಡಗಳ ತಯಾರಿ ಚುರುಕಾಗಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಟೂರ್ನಿ ಆರಂಭಗೊಳ್ಳಲಿದೆ. ಹಲವು ತಕರಾರು ತೆಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಭಾರತ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಟೂರ್ನಿಗೆ ತೆರಳಲು ಅನುಮತಿ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದೆ. 

ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ತೆರಳಲು ಪಾಕಿಸ್ತಾನ ತಂಡಕ್ಕೆ ಅನುಮತಿ ನೀಡಬೇಕು. ಭಾರತದಲ್ಲಿನ ಭದ್ರತೆ ಕುರಿತು ಪರಿಶೀಲನೆ ನಡೆಸಲು ಭದ್ರತಾ ಅಧಿಕಾರಿಗಳ ತಂಡ ಭಾರತ ಪ್ರವಾಸ ಮಾಡಲಿದೆ. ಪಾಕಿಸ್ತಾನ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ತಂಡದ ಆಟಗಾರರು, ಕೋಚ್ ಸೇರಿದಂತೆ ಸಹಾಯಕ ಸಿಬ್ಬಂದಿಗಳಿಗೆ ಭಾರತ ಪ್ರವಾಸ ಮಾಡಲು ಅನುಮತಿ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಕಾರದ ಬಳಿ ಅನುಮತಿ ಕೋರಿದೆ.

ಇಂಗ್ಲೆಂಡ್ ತಂಡಕ್ಕಾಗಿ ಆಡಲ್ಲ, ಅವಕಾಶ ಸಿಕ್ಕರೆ ಐಪಿಎಲ್ ಆಡುತ್ತೇನೆ, ಪಾಕ್ ವೇಗಿ ಮೊಹಮ್ಮದ್ ಅಮೀರ್!

ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಪಂದ್ಯಗಳ ಕ್ರೀಡಾಂಗಣ ಬದಲಿಸುವಂತೆ ಐಸಿಸಿ ಹಾಗೂ ಬಿಸಿಸಿಐನಲ್ಲಿ ಕೇಳಿಕೊಂಡಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಇದರಿಂದ ಕುಪಿತಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳು ಕಡಿಮೆ ಎಂದು ನಾಟಕವಾಡಿತ್ತು. ಇದೀಗ ಖುದ್ದು ಪಿಸಿಬಿ, ಅನುಮತಿ ನೀಡುವಂತೆ ಪತ್ರ ಬರೆದಿದೆ.ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. 

ಟೂರ್ನಿಯ ತನ್ನ ಕೆಲ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ, ಬಿಸಿಸಿಐ ತಿರಸ್ಕರಿಸಿದೆ. ಅಹಮದಾಬಾದ್‌ ಜೊತೆಗೆ ಇತರ 4 ಕ್ರೀಡಾಂಗಣಗಳಲ್ಲೂ ಪಾಕ್‌ ತನ್ನ ಪಂದ್ಯಗಳನ್ನಾಡಲಿದೆ. ಈ ಪೈಕಿ ಆಸ್ಟ್ರೇಲಿಯಾ(ಅ.20) ಹಾಗೂ ನ್ಯೂಜಿಲೆಂಡ್‌(ನ.04) ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಡಲಿದ್ದು, ಕೋಲ್ಕತಾ, ಹೈದರಾಬಾದ್‌, ಚೆನ್ನೈನಲ್ಲೂ ತಲಾ 2 ಪಂದ್ಯಗಳನ್ನಾಡಲಿದೆ.

ICC ODI World Cup: ಭದ್ರತೆ ತಪಾಸಣೆಗೆ ಭಾರತಕ್ಕೆ ಬರಲಿದೆ ಪಾಕ್ ನಿಯೋಗ..!

ಒಂದ ವೇಳೆ ರಾಜಕೀಯ ಕಾರಣ ಹಾಗೂ  ಭದ್ರತಾ ಕಾರಣವೊಡ್ಡಿ ಪಾಕಿಸ್ತಾನ ತಂಡ ಭಾರತ ಪ್ರವಾಸ ರದ್ದು ಮಾಡಿದರೆ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಅಗ್ರ ಸ್ಥಾನದ 3ನೇ ತಂಡ ಪ್ರತಿಷ್ಠಿತ ಟೂರ್ನಿ ಆಡುವ ಅವಕಾಶ ಪಡೆದುಕೊಳ್ಳಲಿದೆ. 

46 ದಿನ, 48 ಪಂದ್ಯ: 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಫೈನಲ್‌ ಸೇರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್‌, ಬಾಂಗ್ಲಾದೇಶ, ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೇರಲಿವೆ. ಒಂದು ವೇಳೆ ವಿಂಡೀಸ್ ಅರ್ಹತೆ ಪಡೆದು, ಅರ್ಹತಾ ಸುತ್ತಿನ ಫೈನಲಲ್ಲಿ ಸೋತರೂ ಕ್ವಾಲಿಫೈಯರ್‌-1 ಎಂದೇ ಕರೆಸಿಕೊಳ್ಳಲಿದೆ. ಒಂದು ವೇಳೆ ಶ್ರೀಲಂಕಾ ಅರ್ಹತೆ ಪಡೆದು, ಅರ್ಹತಾ ಸುತ್ತಿನ ಫೈನಲಲ್ಲಿ ಗೆದ್ದರೂ ಕ್ವಾಲಿಫೈಯರ್‌-2 ಎಂದೇ ಪರಿಗಣಿಸಲ್ಪಡಲಿದೆ.
 

Latest Videos
Follow Us:
Download App:
  • android
  • ios