ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ತಾರಾ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ 5 ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದಿದ್ದು, ಮೊಹಮದ್‌ ಸಿರಾಜ್‌ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಸ್‌ಪ್ರೀತ್‌ ಬೂಮ್ರಾ 27ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್‌ಗಳ ಪಟಗಟಿಯಲ್ಲಿ ಹಾರ್ದಿಕ್‌ ಪಾಂಡ್ಯ 6ನೇ ಸ್ಥಾನಕ್ಕೇರಿದ್ದಾರೆ.

ದುಬೈ: ಭಾರತದ ಯುವ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದಾರೆ. ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಗಿಲ್‌ 1 ಸ್ಥಾನ ಪ್ರಗತಿ ಸಾಧಿಸಿದರು. ಇದೇ ವೇಳೆ ರೋಹಿತ್‌ ಹಾಗೂ ಕೊಹ್ಲಿ ತಲಾ 2 ಸ್ಥಾನ ಮೇಲೇರಿ ಕ್ರಮವಾಗಿ 8 ಮತ್ತು 9ನೇ ಸ್ಥಾನಗಳಲ್ಲಿದ್ದಾರೆ. ಅಗ್ರ-10ರಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದು 2019ರ ಬಳಿಕ ಇದೇ ಮೊದಲು. ಆಗ ರೋಹಿತ್‌, ಕೊಹ್ಲಿ, ಶಿಖರ್‌ ಧವನ್ ಟಾಪ್‌ 10 ಪಟ್ಟಿಯಲ್ಲಿದ್ದರು. ಇದೇ ವೇಳೆ ಕೆ.ಎಲ್‌.ರಾಹುಲ್‌ 10 ಸ್ಥಾನ ಮೇಲೇರಿ 37, ಇಶಾನ್‌ ಕಿಶನ್‌ 2 ಸ್ಥಾನ ಜಿಗಿದು 22ನೇ ಸ್ಥಾನ ಪಡೆದಿದ್ದಾರೆ.

ನಿವೃತ್ತಿ ಹಿಂಪಡೆದು 182 ರನ್ ಸಿಡಿಸಿ ಅಬ್ಬರಿಸಿದ ಬೆನ್ ಸ್ಟೋಕ್ಸ್‌..! ವಿಶ್ವಕಪ್ ಹೀರೋನಿಂದ ಖಡಕ್ ವಾರ್ನಿಂಗ್

ಇನ್ನು, ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ತಾರಾ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ 5 ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದಿದ್ದು, ಮೊಹಮದ್‌ ಸಿರಾಜ್‌ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಸ್‌ಪ್ರೀತ್‌ ಬೂಮ್ರಾ 27ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್‌ಗಳ ಪಟಗಟಿಯಲ್ಲಿ ಹಾರ್ದಿಕ್‌ ಪಾಂಡ್ಯ 6ನೇ ಸ್ಥಾನಕ್ಕೇರಿದ್ದಾರೆ.

ಗಾಯಾಳು ಪೃಥ್ವಿ ಶಾ 3-4 ತಿಂಗಳು ಕ್ರಿಕೆಟ್‌ಗಿಲ್ಲ

ನವದೆಹಲಿ: ಮೊಣಕಾಲು ಗಾಯಕ್ಕೆ ತುತ್ತಾಗಿರುವ ಭಾರತದ ಯುವ ಬ್ಯಾಟರ್‌ ಪೃಥ್ವಿ ಶಾ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ 3-4 ತಿಂಗಳು ಬೇಕಾಗಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಫ್ಟನ್‌ಶೈರ್‌ ಪರ ಲಿಸ್ಟ್‌ ‘ಎ’ ಪಂದ್ಯಗಳನ್ನು ಆಡುತ್ತಿದ್ದ 23 ವರ್ಷದ ಪೃಥ್ವಿ ಶಾ, ಕಳೆದ ತಿಂಗಳು ಡರ್ಹಾಮ್‌ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಗಾಯಗೊಂಡಿದ್ದರು. ಸದ್ಯ ಅವರ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ಇಟ್ಟಿದ್ದು, ಸಂಪೂರ್ಣ ಚೇತರಿಕೆಗೆ ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

Asia Cup 2023: ಇಂದು ಪಾಕ್ vs ಲಂಕಾ ಸೆಮೀಸ್ ಫೈಟ್

ಶಿವಂಗೆ ಗಾಯ: ಏಷ್ಯಾಡ್‌ ತಂಡಕ್ಕೆ ಉಮ್ರಾನ್‌ ಆಯ್ಕೆ?

ನವದೆಹಲಿ: ಮುಂಬರುವ ಏಷ್ಯನ್‌ ಗೇಮ್ಸ್‌ನ ಭಾರತ ಕ್ರಿಕೆಟ್‌ ತಂಡದಲ್ಲಿರುವ ವೇಗಿ ಶಿವಂ ಮಾವಿ ಗಾಯಗೊಂಡಿದ್ದು, ಅವರ ಬದಲಿಗರಾಗಿ ಉಮ್ರಾನ್ ಮಲಿಕ್‌ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಶಿವಂ ಬದಲು ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಯಶ್‌ ಠಾಕೂರ್‌ರನ್ನು ಮುಖ್ಯ ತಂಡಕ್ಕೆ ಸೇರ್ಪಡೆಗೊಳಿಸಲು ಆಯ್ಕೆಗಾರರು ನಿರ್ಧರಿಸಿದ್ದರು. ಆದರೆ ಯಶ್‌ ಬೆನ್ನು ನೋವಿನಿಂದ ಬಳಲುತ್ತಿದ್ದು, ಹೀಗಾಗಿ ಏಷ್ಯಾಡ್‌ಗೆ ಉಮ್ರಾನ್‌ರನ್ನು ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸದ್ಯ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಪುರುಷರ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದು, ಸೆ.24ರ ವರೆಗೂ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಪಾಕ್‌ ವೇಗಿ ನಸೀಂ ಶಾ ಏಷ್ಯಾಕಪ್‌ನಿಂದ ಹೊರಕ್ಕೆ

ಕೊಲಂಬೊ: ಭಾರತ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಕಿಸ್ತಾನದ ತಾರಾ ವೇಗಿ ನಸೀಂ ಶಾ ಏಷ್ಯಾಕಪ್‌ನ ಇನ್ನುಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರ ಬದಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಜ಼ಮನ್‌ ಖಾನ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. 21ರ ನಸೀಂ ಶಾ ಭಾರತ ವಿರುದ್ಧದ ಸೂಪರ್‌-4 ಪಂದ್ಯದಲ್ಲಿ 9.2 ಓವರ್‌ ಎಸೆದ ಬಳಿಕ ಪಂದ್ಯದ 49ನೇ ಓವರಲ್ಲಿ ಮೈದಾನ ತೊರೆದಿದ್ದರು. ಬಳಿಕ ಅವರು ಬ್ಯಾಟಿಂಗ್‌ಗೆ ಆಗಮಿಸಿರಲಿಲ್ಲ. ಇದೇ ವೇಳೆ ಹ್ಯಾರಿಸ್‌ ರೌಫ್‌ ಕೂಡಾ ಗಾಯಗೊಂಡಿದ್ದು, ಟೂರ್ನಿಯ ಉಳಿದ ಪಂದ್ಯಗಳಿಗೆ ಅವರ ಲಭ್ಯತೆ ಬಗ್ಗೆ ಪಿಸಿಬಿ ಇನ್ನಷ್ಟೇ ಮಾಹಿತಿ ಒದಗಿಸಬೇಕಿದೆ.