Asianet Suvarna News Asianet Suvarna News

ನಿವೃತ್ತಿ ಹಿಂಪಡೆದು 182 ರನ್ ಸಿಡಿಸಿ ಅಬ್ಬರಿಸಿದ ಬೆನ್ ಸ್ಟೋಕ್ಸ್‌..! ವಿಶ್ವಕಪ್ ಹೀರೋನಿಂದ ಖಡಕ್ ವಾರ್ನಿಂಗ್

ನ್ಯೂಜಿಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ 124 ಎಸೆತಗಳಲ್ಲಿ 15 ಬೌಂಡರಿ, 9 ಸಿಕ್ಸರ್‌ನೊಂದಿಗೆ 182 ರನ್‌ ಚಚ್ಚಿದರು. ಇದರೊಂದಿಗೆ ಜೇಸನ್‌ ರಾಯ್‌ ಅವರ ದಾಖಲೆಯನ್ನು ಮುರಿದರು. ಜೇಸನ್‌ ರಾಯ್‌ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ 180 ರನ್‌ ಗಳಿಸಿದ್ದು ಇಂಗ್ಲೆಂಡ್‌ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು.

Records tumble as Ben Stokes comes clean on retirement call ahead of World Cup 2023 kvn
Author
First Published Sep 14, 2023, 10:36 AM IST

ಲಂಡನ್‌(ಸೆ.14): ಇತ್ತೀಚೆಗಷ್ಟೇ ನಿವೃತ್ತಿ ಹಿಂಪಡೆದಿದ್ದ ಬೆನ್‌ ಸ್ಟೋಕ್ಸ್‌ ಬುಧವಾರ ಇಂಗ್ಲೆಂಡ್‌ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ರನ್‌ ದಾಖಲಿಸಿದರು. ಈ ಮೂಲಕ ಮುಂಬರುವ ಅಕ್ಟೋಬರ್ 05ರಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಉಳಿದ 9 ತಂಡಗಳಿಗೆ ಇಂಗ್ಲೆಂಡ್ ಆಲ್ರೌಂಡರ್ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ 124 ಎಸೆತಗಳಲ್ಲಿ 15 ಬೌಂಡರಿ, 9 ಸಿಕ್ಸರ್‌ನೊಂದಿಗೆ 182 ರನ್‌ ಚಚ್ಚಿದರು. ಇದರೊಂದಿಗೆ ಜೇಸನ್‌ ರಾಯ್‌ ಅವರ ದಾಖಲೆಯನ್ನು ಮುರಿದರು. ಜೇಸನ್‌ ರಾಯ್‌ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ 180 ರನ್‌ ಗಳಿಸಿದ್ದು ಇಂಗ್ಲೆಂಡ್‌ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. 2016ರಲ್ಲಿ ಪಾಕಿಸ್ತಾನ ವಿರುದ್ಧ ಅಲೆಕ್ಸ್ ಹೇಲ್ಸ್‌ 171, 1993ರಲ್ಲಿ ಆಸೀಸ್‌ ವಿರುದ್ಧ ರಾಬಿನ್‌ ಸ್ಮಿತ್‌ 167, ಕಳೆದ ವರ್ಷ ನೆದರ್‌ಲೆಂಡ್ಸ್‌ ವಿರುದ್ಧ ಜೋಸ್‌ ಬಟ್ಲರ್‌ 162 ರನ್‌ ಗಳಿಸಿದ್ದರು. ಇದಕ್ಕೂ ಮುನ್ನ 102 ರನ್ ಏಕದಿನ ಕ್ರಿಕೆಟ್‌ನಲ್ಲಿ ಬೆನ್ ಸ್ಟೋಕ್ಸ್ ಬಾರಿಸಿದ ಗರಿಷ್ಠ ಏಕದಿನ ಮೊತ್ತ ಎನಿಸಿಕೊಂಡಿತ್ತು.

ಏಕದಿನ ವಿಶ್ವಕಪ್ ಮಹಾಸಮರ ಗೆಲ್ಲಲು ಇಂಗ್ಲೆಂಡ್​ ಮಾಸ್ಟರ್ ಪ್ಲಾನ್..!

ಬೆನ್ ಸ್ಟೋಕ್ಸ್‌, ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಕಳೆದ ವರ್ಷವಷ್ಟೇ ಏಕದಿನ ಕ್ರಿಕೆಟ್‌ಗೆ ದಿಢೀರ್ ಗುಡ್‌ ಬೈ ಹೇಳಿದ್ದರು. ಆದರೆ ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ಸ್ಟೋಕ್ಸ್ ನಿವೃತ್ತಿ ವಾಪಾಸ್ ಪಡೆಯುವಂತೆ ಮಾಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಇಂಗ್ಲೆಂಡ್ ತಂಡವು ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಕಿವೀಸ್‌ ಎದುರು ಇಂಗ್ಲೆಂಡ್‌ಗೆ ಸುಲಭ ಜಯ:

ಇಲ್ಲಿನ ಕೆನ್ನಿಂಗ್‌ಟನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಆರಂಭಿಕ ಆಘಾತದ ಹೊರತಾಗಿಯೂ ಡೇವಿಡ್ ಮಲಾನ್(96) ಶತಕ ವಂಚಿತ ಬ್ಯಾಟಿಂಗ್ ಹಾಗೂ ಬೆನ್ ಸ್ಟೋಕ್ಸ್(182) ಆಕರ್ಷಕ ಶತಕದ ನೆರವಿನಿಂದ 48.1 ಓವರ್‌ಗಳಲ್ಲಿ 368 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಈ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು, ಕ್ರಿಸ್ ವೋಕ್ಸ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ದಾಳಿಗೆ ತತ್ತರಿಸಿ ಕೇವಲ 187 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು 181 ರನ್ ಅಂತರದ ಜಯ ಸಾಧಿಸಿ, 4 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ಎದುರು ಸೋಲಿನ ಬೆನ್ನಲ್ಲೇ ಪಾಕ್‌ಗೆ ಡಬಲ್ ಶಾಕ್‌..! ಸ್ಟಾರ್ ಕ್ರಿಕೆಟಿಗ ಏಷ್ಯಾಕಪ್‌ನಿಂದ ಔಟ್

ಆಸೀಸ್‌ ವಿರುದ್ಧ ಕೊನೆಗೂ ಜಯ ಸಾಧಿಸಿದ ದ.ಆಫ್ರಿಕಾ

ಪಾಚೆಫ್‌ಸ್ಟ್ರೂಮ್‌(ದ.ಆಫ್ರಿಕಾ): 3 ಟಿ20 ಹಾಗೂ ಮೊದಲೆರಡು ಏಕದಿನ ಪಂದ್ಯಗಳ ಸೋಲಿನ ಬಳಿಕ ಆತಿಥೇಯ ದ.ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಗೂ ಗೆಲುವು ದಾಖಲಿಸಿದೆ. ಮಂಗಳವಾರ ರಾತ್ರಿ 3ನೇ ಏಕದಿನಲ್ಲಿ ದ.ಆಫ್ರಿಕಾ 111 ರನ್‌ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ಇಳಿಸಿತು. ಮೊದಲು ಬ್ಯಾಟ್‌ ಮಾಡಿದ ಆಫ್ರಿಕಾ 6 ವಿಕೆಟ್‌ಗೆ 338 ರನ್‌ ಕಲೆಹಾಕಿತು. ಏಡನ್‌ ಮಾರ್ಕ್‌ರಮ್‌ ಔಟಾಗದೆ 102, ಡಿ ಕಾಕ್‌ 82 ರನ್‌ ಚಚ್ಚಿದರು. ಬೃಹತ್‌ ಗುರಿ ಬೆನ್ನತ್ತಿದ ಆಸೀಸ್ 34.3 ಓವರ್‌ಗಳಲ್ಲಿ 227 ರನ್‌ಗೆ ಸರ್ವಪತನ ಕಂಡಿತು. ವಾರ್ನರ್‌(78) ಹೊರತುಪಡಿಸಿ ಇತರರು ವಿಫಲರಾದರು.

Follow Us:
Download App:
  • android
  • ios